ಎಮೋಜಿ ಬಳಕೆಯಲ್ಲಿ ಕಮಲ್ ಹಾಸನ್ ಎಷ್ಟು ಮುಂದಿದ್ದಾರೆ? ಇಲ್ಲಿದೆ ಅಪರೂಪದ ವಿಚಾರ

ಕಮಲ್ ಹಾಸನ್ ಅವರಿಗೆ ಈಗ 70 ವರ್ಷ. ಈಗಲೂ ಆ್ಯಕ್ಟೀವ್ ಆಗಿರುವ ಅವರು ಹಲವು ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹೊಸ ಜನರೇಷನ್​ಗೆ ಹೊಂದಿಕೊಂಡಿದ್ದಾರೆ. ಇದನ್ನು ಶ್ರುತಿ ಹಾಸನ್ ಅವರು ಒಪ್ಪಿಕೊಂಡಿದ್ದಾರೆ.

ಎಮೋಜಿ ಬಳಕೆಯಲ್ಲಿ ಕಮಲ್ ಹಾಸನ್ ಎಷ್ಟು ಮುಂದಿದ್ದಾರೆ? ಇಲ್ಲಿದೆ ಅಪರೂಪದ ವಿಚಾರ
ಶ್ರುತಿ-ಕಮಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 15, 2024 | 8:02 AM

ಸೋಶಿಯಲ್ ಮೀಡಿಯಾ ಬಳಕೆ ತುಂಬಾ ಹೆಚ್ಚಿದೆ. ಕೆಲವು ಯುವ ಹೀರೋಗಳು ಇದಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ, ಕೆಲ ಹಿರಿಯ ನಟರು ಈ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ಆದರೆ ಕೆಲವರು ಇದಕ್ಕೆ ಭಿನ್ನ. ಸೋಶಿಯಲ್ ಮೀಡಿಯಾದಲ್ಲಿ ನಿತ್ಯ ಆ್ಯಕ್ಟೀವ್ ಆಗಿರುವ ಅನೇಕ ಹಿರಿಯ ಕಲಾವಿದರು ಇದ್ದಾರೆ. ಈ ಬಗ್ಗೆ ನಟಿ ಶ್ರುತಿ ಹಾಸನ್ ಅವರು ಹೇಳಿಕೊಂಡಿದ್ದಾರೆ. ಎಮೋಜಿ ಬಳಕೆ ವಿಚಾರದಲ್ಲಿ ಕಮಲ್ ಹಾಸನ್ ಅವರು ಸಾಕಷ್ಟು ಮುಂದಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ಈಗಿನ ಜನರೇಷನ್ ಜೊತೆ ಹೊಂದಿಕೊಂಡಿದ್ದಾರೆ.

ಕಮಲ್ ಹಾಸನ್ ಅವರಿಗೆ ಈಗ 70 ವರ್ಷ. ಈಗಲೂ ಆ್ಯಕ್ಟೀವ್ ಆಗಿರುವ ಅವರು ಹಲವು ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹೊಸ ಜನರೇಷನ್​ಗೆ ಹೊಂದಿಕೊಂಡಿದ್ದಾರೆ. ಇದನ್ನು ಶ್ರುತಿ ಹಾಸನ್ ಅವರು ಒಪ್ಪಿಕೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಎಮೋಜಿ ಬಳಕೆ ಮಾಡೋದರಲ್ಲಿ ನನ್ನ ತಂದೆ ತುಂಬಾನೇ ಮುಂದಿದ್ದಾರೆ. ಇದು ಅನೇಕರಿಗೆ ಗೊತ್ತಿಲ್ಲ. ಟಂಗ್ ಎಮೋಜಿ, ಫಿಶ್ ಎಮೋಜಿ, ಏಲಿಯನ್ ಎಮೋಜಿ, ರಾಂಗ್ ಎಮೋಜಿ ಈ ರೀತಿಯ ಎಮೋಜಿಗಳನ್ನು ಬಳಕೆ ಮಾಡುತ್ತಾರೆ. ಲವ್​ ಯು ಪಾ ಎಂದರೆ ಬ್ಲಶ್ ಮಾಡುವ ಎಮೋಜಿ ಕಳುಹಿಸುತ್ತಾರೆ. ಟ್ರೇಲರ್ ಚೆನ್ನಾಗಿದ ಎಂದು ಕಳುಹಿಸಿದರೆ ಗಾಗಲ್ ಹಾಕಿಕೊಂಡಿರೋ ಎಮೋಜಿ ಕಳುಹಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

ಈ ಸಂದರ್ಶನ ನೋಡಿದ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಕೂಲ್ ಡ್ಯಾಡ್ ಅವಾರ್ಡ್ ಕಮಲ್ ಹಾಸನ್​ಗೆ ಸಿಗುತ್ತದೆ’ ಎಂದು ಕೆಲವರು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು ಅವರು ಟೆಕ್ ಪ್ರಿಯ ಎಂದಿದ್ದಾರೆ. ಇನ್ನೂ ಕೆಲವರು, ಕಮಲ್ ಹಾಸನ್ ಅವರು ಹೊಸ ಜನರೇಶನ್​ಗೆ ಹೊಂದಿಕೊಂಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೊಂದು ಮಾಸ್ ಚಿತ್ರದ ಜೊತೆ ಬಂದ ಕಮಲ್ ಹಾಸನ್​; ‘ಥಗ್​ ಲೈಫ್’ ರಿಲೀಸ್ ಡೇಟ್ ರಿವೀಲ್

ಸಿನಿಮಾ ವಿಚಾರಕ್ಕೆ ಬರೋದಾದರೆ ಕಮಲ್ ಹಾಸನ್ ಅವರು ‘ವಿಕ್ರಂ’ ಮೂಲಕ ದೊಡ್ಡ ಗೆಲುವು ಕಂಡರು. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅವರು ಮಾಡಿದ ಪಾತ್ರ ಮೆಚ್ಚುಗೆ ಪಡೆಯಿತು. ಈ ಚಿತ್ರದ ಸೀಕ್ವೆಲ್​ಗೆ ಅವರೇ ವಿಲನ್. ‘ಇಂಡಿಯನ್ 2’ ಸಿನಿಮಾ ಗೆಲುವು ಕಂಡಿಲ್ಲ. ಆದಾಗ್ಯೂ ‘ಇಂಡಿಯನ್ 3’ ಮಾಡಲಾಗುತ್ತಿದೆ. ಇದು ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಲಿದೆ. ‘ಥಗ್ ಲೈಫ್’ ಹೆಸರಿನ ಸಿನಿಮಾ ಕೂಡ ಮಾಡುತ್ತಿದ್ದು, ಇದಕ್ಕೆ ಮಣಿರತ್ನಂ ನಿರ್ದೇಶನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.