ಹನುಮಂತನ ವಿರುದ್ಧ ಗಂಭೀರ ಆರೋಪ ಮಾಡಿದ ಗೌತಮಿ; 3 ಗಂಟೆ ಆಟ ಆಡಿ ಸಾಬೀತು ಮಾಡಿದ ಸ್ಪರ್ಧಿ

ಈ ವಾರ ಗೌತಮಿ ಹಾಗೂ ಹನುಮಂತ ಒಟ್ಟಾಗಿ ಆಟ ಆಡಿದ್ದರು. ಬಿಗ್ ಬಾಸ್ ಜೋಡಿಯನ್ನು ಬದಲಿಸುವ ಆಯ್ಕೆಯನ್ನು ಗೌತಮಿಗೆ ನೀಡಿದ್ದರು. ಆಗ ಹನುಮಂತನ ಬಗ್ಗೆ ಗೌತಮಿ ಕೆಲ ತಕರಾರರನ್ನು ತೆಗೆದಿದ್ದರು. ಈಗ ಟಾಸ್ಕ್ ಆಡುವ ಮೂಲಕ ಹನುಮಂತ ಇದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ.

ಹನುಮಂತನ ವಿರುದ್ಧ ಗಂಭೀರ ಆರೋಪ ಮಾಡಿದ ಗೌತಮಿ; 3 ಗಂಟೆ ಆಟ ಆಡಿ ಸಾಬೀತು ಮಾಡಿದ ಸ್ಪರ್ಧಿ
ಹನುಮಂತ
Follow us
ರಾಜೇಶ್ ದುಗ್ಗುಮನೆ
|

Updated on:Nov 15, 2024 | 7:47 AM

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಬೇರೆಯದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸ್ಪರ್ಧಿಗಳ ಜೊತೆ ಚೆನ್ನಾಗಿ ಬೆರೆತು ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಹನುಮಂತ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 3 ಗಂಟೆ ಆಟ ಆಡಿದ್ದಾರೆ. ಗೌತಮಿ ಅವರು ಮಾಡಿದ ಆರೋಪ ಸುಳ್ಳು ಎಂಬುದನ್ನು ಅವರು ಸಾಬೀತು ಮಾಡಿ ತೋರಿಸಿದ್ದಾರೆ. ಅವರ ಆಟಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.

ಎರಡು ಡಬ್ಬಿಯ ಮಾದರಿಯ ವಸ್ತುವನ್ನು ಇಡಲಾಗಿತ್ತು. ಅದರ ಮೇಲೆ ಸ್ಪರ್ಧಿಗಳು ಕೂರಬೇಕು. ಆ ಬಳಿಕ ಬಾಕ್ಸ್ ಒಂದನ್ನು ನೀಡಲಾಗುತ್ತದೆ. ಆ ಬಾಕ್ಸ್​ನ ಕಾಲಿನಲ್ಲಿ ಒತ್ತಿ ಹಿಡಿದುಟ್ಟುಕೊಳ್ಳಬೇಕು. ಇದನ್ನು ಹನುಮಂತ ಹಾಗೂ ಗೌತಮಿ ಉತ್ತಮವಾಗಿ ಆಟ ಆಡಿದ್ದಾರೆ. ಇಬ್ಬರೂ ಹೊಂದಾಣಿಕೆಯ ಆಟ ಆಡಿ ಇದನ್ನು ಗೆದ್ದಿದ್ದಾರೆ ಮತ್ತು 200 ಅಂಕಗಳನ್ನು ಪಡೆದಿದ್ದಾರೆ.

ಈ ವಾರ ಗೌತಮಿ ಹಾಗೂ ಹನುಮಂತ ಒಟ್ಟಾಗಿ ಆಟ ಆಡಿದ್ದರು. ಬಿಗ್ ಬಾಸ್ ಜೋಡಿಯನ್ನು ಬದಲಿಸುವ ಆಯ್ಕೆಯನ್ನು ಗೌತಮಿಗೆ ನೀಡಿದ್ದರು. ಆಗ ಹನುಮಂತನ ಬಗ್ಗೆ ಗೌತಮಿ ಕೆಲ ತಕರಾರರನ್ನು ತೆಗೆದಿದ್ದರು. ‘ಹನುಮಂತ ಮೂಡಿ. ಅವನಿಗೆ ನಾವು ಹೇಳಿದರೆ ಮಾಡುವುದಿಲ್ಲ. ಅವನಿಗೆ ಮಾಡಬೇಕು ಎನಿಸಿದರೆ ಮಾತ್ರ ಮಾಡುತ್ತಾನೆ. ಅವನಿಗೆ ಟಾಸ್ಕ್ ಗೆಲ್ಲಲೇಬೇಕು ಎಂಬ ಛಲವೆಲ್ಲ ಇಲ್ಲ’ ಎಂದಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ

ಈಗ ಟಾಸ್ಕ್ ಆಡುವ ಮೂಲಕ ಹನುಮಂತ ಇದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಈ ರೀತಿ ಕಾಲಿನಲ್ಲೇ ಡಬ್ಬಾನ ಹಿಡಿದು ಹನುಮಂತ ಹಾಗೂ ಗೌತಮಿ ಬರೋಬ್ಬರಿ 3 ಗಂಟೆ ಇದ್ದರು ಅನ್ನೋದು ವಿಶೇಷ. ಈ ಮೂಲಕ ಹನುಮಂತ ಕೇವಲ ಮನರಂಜನೆ ಮಾತ್ರವಲ್ಲ ಆಟವನ್ನೂ ಚೆನ್ನಾಗಿ ಆಡುತ್ತೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಳೆದ ವಾರ ಅವರು ಕ್ಯಾಪ್ಟನ್ ಆಗಿದ್ದರು. ಈ ವೇಳೆ ಉತ್ತಮ ಕ್ಯಾಪ್ಟನ್ಸಿ ಮೂಲಕ ಅವರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಈ ವಾರ ಆಟದ ಮೂಲಕ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Fri, 15 November 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ