ಮಂಜು ಪಾವಗಡ ವಿವಾಹ; ನವಜೋಡಿಗೆ ಶುಭ ಹಾರೈಸಿದ ಶುಭಾ ಪೂಂಜಾ

ಆಪ್ತರು ಹಾಗೂ ಹಿರಿಯರ ಸಮ್ಮುಖದಲ್ಲಿ ಮಂಜು ಮದುವೆ ಆಗಿದ್ದಾರೆ. ಅವರ ಹುಟ್ಟೂರಾದ ಪಾವಗಡದಲ್ಲೇ ಈ ಮದುವೆ ನಡೆದಿದೆ. ಶುಭಾ ಪೂಂಜಾ ಸೇರಿ ಅನೇಕರು ಮದುವೆಯಲ್ಲಿ ಭಾಗಿ ಆದರು. ಶುಭಾ ಪೂಂಜಾ ಅವರು ಮಂಜು ಪಾವಗಡ ಅವರ ಕೆನ್ನೆಯನ್ನು ಹಿಂಡಿದ್ದಾರೆ.

ಮಂಜು ಪಾವಗಡ ವಿವಾಹ; ನವಜೋಡಿಗೆ ಶುಭ ಹಾರೈಸಿದ ಶುಭಾ ಪೂಂಜಾ
Follow us
ರಾಜೇಶ್ ದುಗ್ಗುಮನೆ
|

Updated on: Nov 14, 2024 | 2:17 PM

‘ಬಿಗ್ ಬಾಸ್ ಕನ್ನಡ ಸೀಸನ್  8’ರ ವಿನ್ನರ್ ಮಂಜು ಪಾವಗಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರಿಗೆ ಅನೇಕರ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಮಂಜು ಅವರು ಕೈ ಹಿಡಿದ ಹುಡುಗಿ ಚಿತ್ರರಂಗದ ಜೊತೆ ಯಾವುದೇ ನಂಟು ಹೊಂದಿಲ್ಲ ಅನ್ನೋದು ವಿಶೇಷ.

ಆಪ್ತರು ಹಾಗೂ ಹಿರಿಯರ ಸಮ್ಮುಖದಲ್ಲಿ ಮಂಜು ಮದುವೆ ಆಗಿದ್ದಾರೆ. ಅವರ ಹುಟ್ಟೂರಾದ ಪಾವಗಡದಲ್ಲೇ ಈ ಮದುವೆ ನಡೆದಿದೆ. ಶುಭಾ ಪೂಂಜಾ ಸೇರಿ ಅನೇಕರು ಮದುವೆಯಲ್ಲಿ ಭಾಗಿ ಆದರು. ಶುಭಾ ಪೂಂಜಾ ಅವರು ಮಂಜು ಪಾವಗಡ ಅವರ ಕೆನ್ನೆಯನ್ನು ಹಿಂಡಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಂಜು ಪಾವಗಡ ಅವರು ಹಾಸ್ಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಫೇಮಸ್ ಆದರು. ‘ಬಿಗ್ ಬಾಸ್ ಕನ್ನಡ ಸೀಸನ್ 8’ ವಿನ್ ಆಗಿ ಜನಪ್ರಿಯತೆ ಪಡೆದರು. ಆ ಸೀಸನ್​ನಲ್ಲಿ ಶುಭಾ ಪೂಂಜಾ ಕೂಡ ಭಾಗಿ ಆಗಿದ್ದರು. ಈ ಕಾರಣದಿಂದಲೇ ಮಂಜು ಅವರ ವಿವಾಹಕ್ಕೆ ಆಗಮಿಸಿ ಅವರು ವಿಶೇಷವಾಗಿ ಹಾರೈಸಿದ್ದಾರೆ. ಮಂಜು ಪಾವಗಡ ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅಂತರಪಟ’ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿ ಫೇಮಸ್ ಆಗಿದ್ದಾರೆ. ಈಗ ಅವರು ವಿವಾಹ ಆಗಿದ್ದಾರೆ.

ಮಂಜು ವಿವಾಹ ಆಗಿರೋದು ನಂದಿನಿ ಎಂಬುವವರ ಜೊತೆ. ಅವರು ಬೆಂಗಳೂರಿನಲ್ಲೇ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಂಜು ಅವರೇ ರಿವೀಲ್ ಮಾಡಬೇಕಿದೆ.

ಇದನ್ನೂ ಓದಿ: ಮಂಜು ಪಾವಗಡ ಮದುವೆಯಲ್ಲಿ ಶುಭ ಪೂಂಜಾ, ವರನ ಕೆನ್ನೆ ಹಿಂಡಿದ ನಟಿ

ಮಂಜು ಪಾವಗಡ ಅವರು ಬಿಗ್ ಬಾಸ್​ನಲ್ಲಿ ಇದ್ದಾಗ ದಿವ್ಯಾ ಸುರೇಶ್ ಅವರ ಜೊತೆ ಆಪ್ತತೆ ಹೊಂದಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿತ್ತು. ಇವರು ಮದುವೆ ಆಗಬೇಕು ಎಂಬುದು ಅನೇಕರ ಕೋರಿಕೆ ಆಗಿತ್ತು. ಆದರೆ, ಇವರ ಗೆಳೆತನ ಬಿಗ್ ಬಾಸ್​ಗೆ ಮಾತ್ರ ಸೀಮಿತವಾಗಿತ್ತು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರು ಒಟ್ಟಾಗಿ ಕಾಣಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.