ಕಂಗನಾ ರಣಾವತ್ಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಕಂಗನಾ ಏನೇ ಮಾಡಿದರೂ ವಿವಾದ ಸೃಷ್ಟಿಯಾಗುತ್ತದೆ. ಕೆಲವೊಂದು ಕಣ್ತಪ್ಪಿನಿಂದ ಆದರೆ, ಇನ್ನೂ ಕೆಲವನ್ನು ಅವರು ಉದ್ದೇಶಪೂರ್ವಕವಾಗಿಯೇ ಮಾಡುತ್ತಾರೆ. ಕೊರೊನಾ ಸಣ್ಣ ಜ್ವರವಷ್ಟೇ ಎಂದು ಟೀಕೆಗೆ ಒಳಗಾಗಿದ್ದ ಕಂಗನಾ ಈಗ ಈ ವಿಚಾರದಲ್ಲಿ ಯು-ಟರ್ನ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಗಿಡ ಬೆಳೆಸಿ ಎಂದು ಹೇಳಿದ ವಿಚಾರ ಸಾಕಷ್ಟು ಟ್ರೋಲ್ ಆಗಿದೆ.
ಕೊರೊನಾ ನಮಗೆ ಎಚ್ಚರಿಕೆಯ ಗಂಟೆ. ನಾವು ಜವಾಬ್ದಾರಿಯುತವಾಗಿ ಬದುಕದೆ ಇದ್ದರೆ ಮನುಷ್ಯ ಜನಾಂಗವು ಭವಿಷ್ಯದಲ್ಲಿ ತೊಂದರೆ ಅನುಭವಿಸಲಿದೆ. ಹೆಚ್ಚೆಚ್ಚು ಗಿಡಗಳನ್ನು ನೆಡಿ. ಪ್ರತಿ ವ್ಯಕ್ತಿ ಒಂದು ವರ್ಷಕ್ಕೆ 8 ಮರಗಳನ್ನು ನೆಡಬೇಕು ಎಂದು ಕಂಗನಾ ಕೋರಿದ್ದಾರೆ. ಇತ್ತೀಚೆಗೆ ಕೊರೊನಾ ಬಗ್ಗೆ ಹಾಕಿದ್ದ ಪೋಸ್ಟ್ಗೆ ಈ ಹೇಳಿಕೆ ತದ್ವಿರುದ್ಧವಾಗಿದೆ.
ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ಈ ಸಂದರ್ಭದಲ್ಲಿ ಅನೇಕರು ನಾವು ಗಿಡಗಳನ್ನು ಬೆಳೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರು. ವೈದ್ಯಕೀಯ ಆಮ್ಲಜನಕ ಹಾಗೂ ಗಿಡಗಳು ನೀಡುವ ಆಮ್ಲಜನಕ ಎರಡೂ ಬೇರೆಬೇರೆ. ಹೀಗಾಗಿ, ಗಿಡ ಬೆಳೆಸುವುದಕ್ಕೂ ವೈದ್ಯಕೀಯ ಆಮ್ಲಜನಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಈ ವಿಚಾರವನ್ನು ಪ್ರಸ್ತಾಪ ಮಾಡಿ ಕಂಗನಾ ಟ್ರೋಲ್ ಆಗಿದ್ದಾರೆ. ಅನೇಕರು ಕಂಗನಾಗೆ ಸಾಮಾನ್ಯ ಜ್ಞಾನವೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅವರು ಯು-ಟರ್ನ್ ತೆಗೆದುಕೊಂಡ ಬಗ್ಗೆ ಬರೆದುಕೊಂಡಿದ್ದರು.
‘ನನ್ನ ದೇಹದೊಳಗೆ ಈ ವೈರಸ್ ಇದೆ ಎಂಬುದು ತಿಳಿದಿರಲಿಲ್ಲ. ಈಗ ನಾನು ಇದನ್ನು ನಾಶ ಮಾಡುತ್ತೇನೆ. ಹೆದರಿಕೊಂಡರೆ ಇದು ಮತ್ತಷ್ಟು ಹೆದರಿಸುತ್ತದೆ. ಎಲ್ಲರೂ ಇದನ್ನು ನಾಶ ಮಾಡೋಣ. ಕೊವಿಡ್-19 ಎಂದರೆ ಸಣ್ಣ ಜ್ವರವಲ್ಲದೇ ಮತ್ತೇನೂ ಅಲ್ಲ’ ಎಂದು ಕಂಗನಾ ಬರೆದುಕೊಂಡಿದ್ದರು. ನಂತರ ಈ ಪೋಸ್ಟ್ಅನ್ನು ಇನ್ಸ್ಟಾಗ್ರಾಂ ಡಿಲೀಟ್ ಮಾಡಿತ್ತು.
ಇದನ್ನೂ ಓದಿ: Kangana Ranaut: ಟ್ವಿಟರ್ನಿಂದ ಹೊರದಬ್ಬಿಸಿಕೊಂಡ ಕಂಗನಾ ಇನ್ಸ್ಟಾಗ್ರಾಮ್ನಲ್ಲಿ ಒಂದು ವಾರ ಉಳಿಯೋದು ಕೂಡ ಅನುಮಾನ
Published On - 7:16 pm, Mon, 10 May 21