ನಟ ಚಂದು ಗೌಡ ಮತ್ತು ಕಿರಣ್​ ರಾಜ್ ಮನೆಗೆ ಬಂತು ಐಷಾರಾಮಿ ಕಾರು!

ಸಾಕಷ್ಟು ಕಿರುತೆರೆ ನಟರು ಐಷಾರಾಮಿ ಕಾರು ಖರೀದಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಕನ್ನಡದ ಖ್ಯಾತ ನಟರಾದ ಕಿರಣ್​ ರಾಜ್​ ಹಾಗೂ ಚಂದು ಬಿ. ಗೌಡ ಸೇರ್ಪಡೆ ಆಗಿದ್ದಾರೆ.

ನಟ ಚಂದು ಗೌಡ ಮತ್ತು ಕಿರಣ್​ ರಾಜ್ ಮನೆಗೆ ಬಂತು ಐಷಾರಾಮಿ ಕಾರು!
ಚಂದು ಗೌಡ ಮತ್ತು ಕಿರಣ್​ ರಾಜ್​
Edited By:

Updated on: Mar 29, 2021 | 3:40 PM

ಕಿರುತೆರೆ ರಂಗ ಈಗ ಬದಲಾಗಿದೆ. ಧಾರಾವಾಹಿಗೆ ಬೇಡಿಕೆ ಹೆಚ್ಚಿದಂತೆ ಅಲ್ಲಿ ನಟಿಸುವ ಕಲಾವಿದರ ಸಂಭಾವನೆ ಕೂಡ ಜಾಸ್ತಿ ಆಗಿದೆ. ಕಿರುತೆರೆಯಲ್ಲಿ ನಟಿಸುವ ಸಾಕಷ್ಟು ಕಲಾವಿದರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಹೀಗಾಗಿ, ಸಾಕಷ್ಟು ಕಿರುತೆರೆ ನಟರು ಐಷಾರಾಮಿ ಕಾರು ಖರೀದಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಕನ್ನಡದ ಖ್ಯಾತ ನಟರಾದ ಕಿರಣ್​ ರಾಜ್​ ಹಾಗೂ ಚಂದು ಬಿ. ಗೌಡ ಸೇರ್ಪಡೆ ಆಗಿದ್ದಾರೆ.

ಕನ್ನಡತಿ ಧಾರಾವಾಹಿ ಮೂಲಕ ಹರ್ಷ ಎಂದೇ ಖ್ಯಾತಿ ಪಡೆದವರು ಕಿರಣ್​ ರಾಜ್​. ಈ ಮೊದಲು ಇವರು ಹಿಂದಿ ಧಾರಾವಾಹಿಯಲ್ಲೂ ಕೂಡ ನಟಿಸಿದ್ದಾರೆ. ಕನ್ನಡತಿಯಲ್ಲಿ ಹರ್ಷನಾಗಿ ಕಾಣಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದಾರೆ. ಧಾರಾವಾಹಿಯ ನಟಿ ಭುವಿ ಜತೆಗಿನ ಪ್ರೇಮಕತೆ ಎಲ್ಲರಿಗೂ ಇಷ್ಟವಾಗುತ್ತಿದೆ. ಹೀಗಾಗಿ, ಕಿರಣ್​ ರಾಜ್​ ಬೇಡಿಕೆ ಹೆಚ್ಚುತ್ತಿದೆ.

ಈಗ ಕಿರಣ್​ ರಾಜ್​ ಐಷಾರಾಮಿ ಮರ್ಸಿಡಿಸ್​ ಬೆಂಜ್​ ಕಾರನ್ನು ಖರೀದಿಸಿದ್ದಾರೆ. ಚಾಮರಾಜ ನಗರದ ದೇವಸ್ಥಾನಕ್ಕೆ ತೆರಳಿ ಅವರು ಪೂಜೆ ಕೂಡ ಮಾಡಿಸಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ.

ಇನ್ನು, ಚಂದು ಬಿ. ಗೌಡ ಕಿರುತೆರೆ ಹಾಗೂ ಹಿರಿತೆರೆ ಎರಡಲ್ಲೂ ಮಿಂಚಿದವರು. ಗೃಹ ಲಕ್ಷ್ಮಿ ಧಾರಾವಾಹಿ ಮೂಲಕ ನಟನೆ ಆರಂಭಿಸಿದ ಚಂದು ನಂತರ ಲಕ್ಷ್ಮೀ ಬಾರಮ್ಮದಲ್ಲೂ ನಟಿಸಿದ್ದರು. 2018ರಲ್ಲಿ ತೆರೆಕಂಡ ಅಟೆಮ್ಟ್​ ಟು ಮರ್ಡರ್​ ಚಿತ್ರದ ಮೂಲಕ ಹಿರಿತೆರೆಗೂ ಕಾಲಿಟ್ಟರು. ಇತ್ತೀಚೆಗೆ ತೆರಕಂಡ ರಾಬರ್ಟ್​ ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಈಗ ಚಂದು ಆಡಿ ಕ್ಯೂ7 ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಿನ ಆರಂಭಿಕ ಬೆಲೆ 69.27 ಲಕ್ಷ ರೂಪಾಯಿ (ಎಕ್ಸ್​ ಶೋ ರೂಂ) ಇದೆ. ಇವರಿಗೂ ಕೂಡ ಅಭಿನಂದನೆಯ ಸುರಿಮಳೆ ಹರಿದು ಬಂದಿದೆ.

ಇದನ್ನೂ ಓದಿ: ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us