AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಬಾಯ್​​ಫ್ರೆಂಡ್ ಪತ್ನಿಯ ಜೊತೆ ಕರೀನಾ ಹರಟೆ, ಶಾಕ್ ಆದ ನೆಟ್ಟಿಗರು

ಬಾಲಿವುಡ್ ಬೆಬೊ ಕರೀನಾ ಕಪೂರ್ ಖಾನ್ ತಮ್ಮ ಜನಪ್ರಿಯ ರೇಡಿಯೋ/ಚಾಟ್ ಶೋ ‘ವಾಟ್ ವುಮೆನ್ ವಾಂಟ್’ ನ ಹೊಸ ಸೀಸನ್‌ಗಾಗಿ ಮಾಜಿ ಬಾಯ್​​ಫ್ರೆಂಡ್ ಶಾಹಿದ್ ಕಪೂರ್ ಪತ್ನಿ ಮೀರಾ ಕಪೂರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಮೀರಾ ಕಪೂರ್ ಜೊತೆಗಿನ ಚಿತ್ರವನ್ನು ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಈ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ನಾನಾ ರೀತಿಯ ಟ್ರೋಲಿಂಗ್ ಸಹ ನಡೆಯುತ್ತಿದೆ.

ಮಾಜಿ ಬಾಯ್​​ಫ್ರೆಂಡ್ ಪತ್ನಿಯ ಜೊತೆ ಕರೀನಾ ಹರಟೆ, ಶಾಕ್ ಆದ ನೆಟ್ಟಿಗರು
Kareena Mira
ಮಂಜುನಾಥ ಸಿ.
|

Updated on: Sep 30, 2026 | 11:44 AM

Share

ಬಾಲಿವುಡ್​​ನಲ್ಲಿ ಯಾರೂ ನಿರೀಕ್ಷಿಸದ ಅಪರೂಪದ ಘಟನೆಯೊಂದು ನಡೆದಿದೆ. ಬಾಲಿವುಡ್ ಬೆಬೊ ಕರೀನಾ ಕಪೂರ್ ಖಾನ್ ತಮ್ಮ ಜನಪ್ರಿಯ ರೇಡಿಯೋ/ಚಾಟ್ ಶೋ ‘ವಾಟ್ ವುಮೆನ್ ವಾಂಟ್’ ನ ಹೊಸ ಸೀಸನ್‌ಗಾಗಿ ಮಾಜಿ ಬಾಯ್​​ಫ್ರೆಂಡ್ ಶಾಹಿದ್ ಕಪೂರ್ ಪತ್ನಿ ಮೀರಾ ಕಪೂರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಮೀರಾ ಕಪೂರ್ ಜೊತೆಗಿನ ಚಿತ್ರವನ್ನು ಕರೀನಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಈ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ನಾನಾ ರೀತಿಯ ಟ್ರೋಲಿಂಗ್ ಸಹ ನಡೆಯುತ್ತಿದೆ.

ಮೀರಾ ಕಪೂರ್​​ ಜೊತೆಗೆ ಫೋಟೊ ಹಂಚಿಕೊಂಡಿದ್ದ ಕರೀನಾ, ‘ಇಂದಿನ ಶೋನಲ್ಲಿ ಅತ್ಯಂತ ಮುದ್ದಾದ ಮತ್ತು ಆತ್ಮೀಯತೆಯುಳ್ಳ ಮೀರಾ ಕಪೂರ್’ ಎಂದು ಬರೆದುಕೊಂಡಿದ್ದರು. ಕರೀನಾ ಪೋಸ್ಟ್ ಕೂಡಲೇ ವೈರಲ್ ಆಯ್ತು. ಇದಕ್ಕೆ ಮುಖ್ಯ ಕಾರಣ, ಮೀರಾ ಕಪೂರ್ ಪತಿ ಶಾಹಿದ್ ಕಪೂರ್ ಅವರೊಟ್ಟಿಗೆ ಕರೀನಾ ಕಪೂರ್ ಅವರಿಗೆ ಇದ್ದ ಸಂಬಂಧ.

ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಬಹು ಸಮಯದ ವರೆಗೆ ಪ್ರೀತಿಯಲ್ಲಿದ್ದರು. ಇಬ್ಬರೂ ಬಾಲಿವುಡ್​​ನ ಹಾಟ್ ಜೋಡಿ ಆಗಿದ್ದರು. ಈ ಇಬ್ಬರೂ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಈ ಇಬ್ಬರ ‘ಆಪ್ತ’ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಆದರೆ ಆಗಿದ್ದೇ ಬೇರೆ. 2012 ರಲ್ಲಿ ಕರೀನಾ ಕಪೂರ್, ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. 2015 ರಲ್ಲಿ ಶಾಹಿದ್ ಕಪೂರ್ ಮೀರಾ ಕಪೂರ್ ಅವರನ್ನು ವಿವಾಹವಾದರು. ಕರೀನಾ ಮತ್ತು ಸೈಫ್​​ಗೆ ಇಬ್ಬರು ಮಕ್ಕಳಿದ್ದಾರೆ. ಅಂತೆಯೇ ಶಾಹಿದ್ ಹಾಗೂ ಮೀರಾಗೂ ಸಹ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ:ಬಾಲಿವುಡ್​​ ಜನಪ್ರಿಯ ಟಾಕ್ ಶೋಗೆ ರಶ್ಮಿಕಾ ಮಂದಣ್ಣ ಅತಿಥಿ: ಯಾವುದದು?

ಬ್ರೇಕಪ್ ಬಳಿಕ ಶಾಹಿದ್ ಮತ್ತು ಕರೀನಾ ಒಟ್ಟಿಗೆ ಕಾಣಿಸಿಕೊಂಡಿದ್ದೇ ಇಲ್ಲ. ಇಬ್ಬರು ಪರಸ್ಪರ ಪರಿಚಯವೇ ಇಲ್ಲದಂತೆ ವರ್ತಿಸಿದ್ದೂ ಸಹ ಇದೆ. ಆದರೆ ಇದೀಗ ಕರೀನಾ ಕಪೂರ್ ಅವರು ಹಠಾತ್ತನೆ ತಮ್ಮ ಮಾಜಿ ಬಾಯ್​ಫ್ರೆಂಡ್ ಪತ್ನಿಯನ್ನು ಶೋಗೆ ಆಹ್ವಾನಿಸುವ ಮೂಲಕ ಸ್ನೇಹದ ಹಸ್ತ ಚಾಚಿದ್ದಾರೆ.

ಬಾಲಿವುಡ್​​ನಲ್ಲಿ ಯಾವುದೂ ಸಹ ಶಾಶ್ವತ ಅಲ್ಲ ಎಂಬುದಕ್ಕೆ ಇದು ತಾಜಾ ಉದಾಹರಣೆ. ದೀಪಿಕಾ ಪಡುಕೋಣೆ ಮತ್ತು ರಣ್​​ಬೀರ್ ಕಪೂರ್ ಸಹ ಪ್ರೀತಿಯಲ್ಲಿದ್ದರು. ಆದರೆ ಬಳಿಕ ದೀಪಿಕಾ ರಣ್​​ವೀರ್ ಸಿಂಗ್​ ಅನ್ನು ವಿವಾಹವಾದರೆ ರಣ್​​ಬೀರ್ ಆಲಿಯಾರನ್ನು ಮದುವೆಯಾದರು. ಈಗ ಎಲ್ಲರೂ ಆತ್ಮೀಯ ಗೆಳೆಯರಂತೆ ಇದ್ದಾರೆ. ಈಗ ಕರೀನಾ ಸಹ ಮಾಜಿ ಬಾಯ್​​ಫ್ರೆಂಡ್ ಕುಟುಂಬದೊಟ್ಟಿಗೆ ಸ್ನೇಹ ಬೆಳೆಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More