ಪ್ರಭಾಸ್ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ಕತ್ರಿನಾ ಕೈಫ್; ಕೌತುಕ ಮೂಡಿಸಿದ ಬಿಗ್ ಬಜೆಟ್ ಚಿತ್ರ

| Updated By: ಮದನ್​ ಕುಮಾರ್​

Updated on: May 02, 2021 | 4:21 PM

ಈಗ ಸಿದ್ಧಾರ್ಥ್​ ಮತ್ತೊಂದು ಆ್ಯಕ್ಷನ್​ ಸಿನಿಮಾಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಶೇಷ ಕಥೆಯನ್ನು ಹೆಣೆದಿರುವ ಅವರು, ಪ್ರಭಾಸ್​ಗೆ ಆ್ಯಕ್ಷನ್​-ಕಟ್ ಹೇಳಲು ಮುಂದಾಗಿದ್ದಾರೆ.

ಪ್ರಭಾಸ್ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ ಕತ್ರಿನಾ ಕೈಫ್; ಕೌತುಕ ಮೂಡಿಸಿದ ಬಿಗ್ ಬಜೆಟ್ ಚಿತ್ರ
ಪ್ರಭಾಸ್​-ಕತ್ರಿನಾ ಕೈಫ್​
Follow us on

ಬಾಹುಬಲಿ ಸಿನಿಮಾ ತೆರೆಕಂಡ ನಂತರದಲ್ಲಿ ಪ್ರಭಾಸ್​ ಸ್ಟಾರ್​​ಗಿರಿ ದೊಡ್ಡದಾಗಿದೆ. ಅವರಿಗೆ ಬಾಲಿವುಡ್​ನಿಂದಲೂ ಆಫರ್​ ಬರುತ್ತಿವೆ. ಸದ್ಯ, ಪ್ರಭಾಸ್​ ಮೂರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಮತ್ತೊಂದು ಸಿನಿಮಾವನ್ನು ಅವರು ಸೈಲೆಂಟ್​ ಆಗಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಕತ್ರಿನಾ ಕೈಫ್​ ನಾಯಕಿ ಎನ್ನಲಾಗುತ್ತಿದೆ. ಸದ್ಯ ಈ ವಿಚಾರ ಕೇಳಿ ಪ್ರಭಾಸ್​ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

​ರಾಧೆ ಶ್ಯಾಮ್​, ಆದಿಪುರುಷ್​ ಹಾಗೂ ಸಲಾರ್​ ಸಿನಿಮಾಗಳಲ್ಲಿ ಪ್ರಭಾಸ್ ಬ್ಯುಸಿ ಆಗಿದ್ದಾರೆ. ಈ ಎಲ್ಲಾ ಚಿತ್ರಗಳ ಕೆಲಸವನ್ನು ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ ಪ್ರಭಾಸ್​. ಹೀಗಿರುವಾಗಲೇ ಅವರಿಗೆ ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್​ ಆನಂದ್​ ಕಥೆ ಒಂದನ್ನು ಹೇಳಿದ್ದಾರೆ. ಈ ಕಥೆ ಪ್ರಭಾಸ್​ಗೆ ಇಷ್ಟವಾಗಿದ್ದು, ಅವರ ಜತೆ ಕೆಲಸ ಮಾಡೋಕೆ ಉತ್ಸಾಹ ತೋರಿದ್ದಾರೆ.

ಸಿದ್ಧಾರ್ಥ್​ ಆನಂದ್​ ಕಾರ್ಯವೈಖರಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ನಿರ್ದೇಶನದ ‘ವಾರ್​’ ಸಿನಿಮಾ ದೊಡ್ಡ ಮೊಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾದಲ್ಲಿ ಆ್ಯಕ್ಷನ್​ ದೃಶ್ಯಗಳು ಹೇರಳವಾಗಿದ್ದವು. ಸದ್ಯ ‘ಪಠಾಣ್​’ ಚಿತ್ರದ ಕೆಲಸದಲ್ಲಿ ಸಿದ್ಧಾರ್ಥ್​ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮೂಲಕ ಶಾರುಖ್​ ಖಾನ್​ ಕಂಬ್ಯಾಕ್​ ಮಾಡುತ್ತಿರುವುದು ವಿಶೇಷ.

ಈಗ ಸಿದ್ಧಾರ್ಥ್​ ಮತ್ತೊಂದು ಆ್ಯಕ್ಷನ್​ ಸಿನಿಮಾಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಶೇಷ ಕಥೆಯನ್ನು ಹೆಣೆದಿರುವ ಅವರು, ಪ್ರಭಾಸ್​ಗೆ ಆ್ಯಕ್ಷನ್​ ಕಟ್ ಹೇಳಲು ಮುಂದಾಗಿದ್ದಾರೆ.  ಬಹುದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಕತ್ರಿನಾ ನಾಯಕಿ ಎನ್ನಲಾಗುತ್ತಿದೆ.

2014ರಲ್ಲಿ ತೆರೆಗೆ ಬಂದ ಬ್ಯಾಂಗ್​ ಬ್ಯಾಂಗ್​ ಸಿನಿಮಾದಲ್ಲಿ ಸಿದ್ಧಾರ್ಥ್​ ಹಾಗೂ ಕತ್ರಿನಾ ಒಟ್ಟಾಗಿ ಕೆಲಸ ಮಾಡಿದ್ದರು. ಕತ್ರಿನಾ ನಟನೆಯನ್ನು ಸಿದ್ಧಾರ್ಥ್​ ತುಂಬಾನೇ ಮೆಚ್ಚಿದ್ದರು. ಹೀಗಾಗಿ ಮತ್ತೊಮ್ಮೆ ಅವರ ಜತೆ ಕೆಲಸ ಮಾಡುವ ಆಲೋಚನೆಯಲ್ಲಿ ಸಿದ್ಧಾರ್ಥ್​ ಇದ್ದಾರೆ.

ಪ್ರಭಾಸ್​ ಸಿನಿಮಾ ಕೆಲಸಗಳು ಪೂರ್ಣಗೊಳ್ಳಲು ಇನ್ನೂ ಸಾಕಷ್ಟು ಸಮಯಬೇಕು. ಸಿದ್ಧಾರ್ಥ್​ ನಿರ್ದೇಶನದ ಪಠಾಣ್​ ಚಿತ್ರದ ಕೆಲಸಗಳು ಸಾಕಷ್ಟು ಬಾಕಿ ಉಳಿದಿವೆ. ಹೀಗಾಗಿ, ಸದ್ಯಕ್ಕಂತೂ ಸಿನಿಮಾ ಸೆಟ್ಟೇರುವುದು ಅನುಮಾನವೇ. ಆದರೆ, ಸಿನಿಮಾ ಸೆಟ್ಟೇರುವ ಮೊದಲೇ ಸಾಕಷ್ಟು ಕುತೂಹಲ ಸೃಷ್ಟಿಸಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ: ಪ್ರಭಾಸ್, ರಾಮ್​ ಚರಣ್​, ಮಹೇಶ್​ ಬಾಬು​ ಕ್ವಾರಂಟೈನ್​; ಟಾಲಿವುಡ್​ನಲ್ಲಿ ಹೆಚ್ಚಾಯ್ತು ಕೊರೊನಾ ಕಾಟ