‘ಇಂಥವರಿಗೆಲ್ಲ ತ್ರಿಷಾ ಉತ್ತರಿಸಬೇಕಿಲ್ಲ’; ಖಡಕ್ ಆಗಿ ಹೇಳಿದ ಖುಷ್ಬೂ ಸುಂದರ್

ದಳಪತಿ ವಿಜಯ್ ಮತ್ತು ತ್ರಿಷಾ ಸಂಬಂಧದ ಕುರಿತು ನಡೆಯುತ್ತಿರುವ ಆರೋಪಗಳ ಬಗ್ಗೆ ನಟಿ ಖುಷ್ಬೂ ಸುಂದರ್ ಪ್ರತಿಕ್ರಿಯಿಸಿದ್ದಾರೆ. ವಿಜಯ್ ಪತ್ನಿ ಆರೋಪದ ನಂತರ ತ್ರಿಷಾ ಟೀಕೆಗೆ ಗುರಿಯಾಗಿದ್ದರು. ಖುಷ್ಬೂ, ತ್ರಿಷಾ ಅವರನ್ನು ಗೌರವಾನ್ವಿತ ಮತ್ತು ಸೌಮ್ಯ ಸ್ವಭಾವದ ಮಹಿಳೆ ಎಂದು ಬಣ್ಣಿಸಿದ್ದಾರೆ. ಇಂತಹ ಆರೋಪಗಳಿಗೆ ಪ್ರತಿಕ್ರಿಯಿಸಿ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿ, ತ್ರಿಷಾ ಪರವಾಗಿ ಖಡಕ್ ಆಗಿ ಬ್ಯಾಟ್ ಬೀಸಿದ್ದಾರೆ.

‘ಇಂಥವರಿಗೆಲ್ಲ ತ್ರಿಷಾ ಉತ್ತರಿಸಬೇಕಿಲ್ಲ’; ಖಡಕ್ ಆಗಿ ಹೇಳಿದ ಖುಷ್ಬೂ ಸುಂದರ್
ತ್ರಿಷಾ, ವಿಜಯ್-ಖುಷ್ಬೂ, ತ್ರಿಷಾ

Updated on: Mar 17, 2026 | 8:03 AM

ನಟ ದಳಪತಿ ವಿಜಯ್ ಹಾಗೂ ನಟಿ ತ್ರಿಷಾ (Trisha) ಮಧ್ಯೆ ಸಂಬಂಧ ಇದೆ ಎಂಬ ವಿಷಯ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ವಿಜಯ್​ ವಿರುದ್ಧ ಅವರ ಪತ್ನಿ ಗಂಭೀರ ಆರೋಪ ಮಾಡಿದ್ದು, ಪತಿಗೆ ನಟಿಯ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ವಿಜಯ್ ಹಾಗೂ ತ್ರಿಷಾ ಒಟ್ಟಾಗಿ ಮದುವೆ ಒಂದರಲ್ಲಿ ಕಾಣಿಸಿಕೊಂಡಿದ್ದು ಚರ್ಚೆ ಹುಟ್ಟುಹಾಕಿದೆ. ಈ ಬೆಳವಣಿಗೆಯಿಂದ ತ್ರಿಷಾ ಅವರು ಟೀಕೆ ಎದುರಿಸಬೇಕಾಗಿ ಬಂದಿದೆ. ಈ ಎಲ್ಲ ವಿಷಯಗಳಿಗೆ ಖುಷ್ಬೂ ಸುಂದರ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನಟಿಯ ಪರ ಬ್ಯಾಟ್ ಬೀಸಿದ್ದಾರೆ.

ಖುಷ್ಬೂ ಅವರು ಕನ್ನಡ, ತಮಿಳು ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ನಟಿಸಿದವರು. ಅವರು ಈಗ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಖುಷ್ಬೂ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹೊರ ಹಾಕುತ್ತಾ ಇರುತ್ತಾರೆ. ಈಗ ಅವರು ತ್ರಿಷಾ ವಿಷಯದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ದುರದೃಷ್ಟವಶಾತ್, ನೀವು ಸೀನಿದರೂ ಸಹ ಅದನ್ನು ಬೇರೆಯವರನ್ನು ದೂಷಿಸಲು ಬಯಸುವ ಕಾಲದಲ್ಲಿ ನಾವಿದ್ದೇವೆ. ಅವರಿಬ್ಬರ (ವಿಜಯ್ ಹಾಗೂ ತ್ರಿಷಾ) ಬಗ್ಗೆ ನನಗೆ ತಿಳಿದಿದೆ. ಟ್ರ್ಯಾಶ್ (ತ್ರಿಶಾ) ನನಗೆ ತುಂಬಾ ಹತ್ತಿರವಾದವರು. ನಾನು ಭೇಟಿಯಾದ ಅತ್ಯಂತ ಗೌರವಾನ್ವಿತ ಮಹಿಳೆಯರಲ್ಲಿ ತ್ರಿಷಾ ಕೂಡ ಒಬ್ಬರು ಮತ್ತು ಅತ್ಯಂತ ಸೌಮ್ಯ ಸ್ವಭಾವದವರು’ ಎಂದು ಖುಷ್ಬೂ ಹೇಳಿದ್ದಾರೆ.

ತ್ರಿಷಾ ಅವರನ್ನು ಆಪ್ತ ಸ್ನೇಹಿತೆ ಎಂದು ಬಣ್ಣಿಸಿರುವ ಖುಷ್ಬು ಅವರು, ಸಾರ್ವಜನಿಕ ವ್ಯಕ್ತಿಗಳ ವೈಯಕ್ತಿಕ ಜೀವನದಲ್ಲಿ ಜನರು ಅನಗತ್ಯ ಆಸಕ್ತಿ ವಹಿಸುವುದರಿಂದ ಹೆಚ್ಚಿನ ಟೀಕೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತ್ರಿಷಾ ಬರ್ತ್​​​ಡೇ ದಿನ ದಳಪತಿ ವಿಜಯ್ ರಾಜಕೀಯ ಭವಿಷ್ಯ; ಚುನಾವಣೆಗೂ ಮುನ್ನವೇ ಡಿವೋರ್ಸ್?

‘ಕುಳಿತು ಕಾಮೆಂಟ್ ಮಾಡುವವರಿಗೆ ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದು ಬೇಕಾಗಿಲ್ಲ. ಅವರಿಗೆ ಬೇರೆಯವರ ಜೀವನ ನೋಡುವುದರಲ್ಲೇ ಖುಷಿ ಸಿಗುತ್ತದೆ. ಅವರು ಬೇರೆಯವರ ಬಗ್ಗೆ ಕಾಮೆಂಟ್ ಮಾಡುವುದರಲ್ಲಿ ಆನಂದ ಪಡೆಯುತ್ತಾರೆ. ನಾವು ಅವರಿಗೆ ಪ್ರತಿಕ್ರಿಯಿಸಲು ನಮ್ಮ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us