
ನಟ ಶಾರುಖ್ ಖಾನ್(shah rukh khan)ಅವರು ಮತ್ತೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಯುಎಇ(UAE)ಯ ಶಾರ್ಜಾದಲ್ಲಿರುವ ಎಕ್ಸ್ಪೋ ಸೆಂಟರ್ನಲ್ಲಿ ಶಾರ್ಜಾ ಇಂಟರ್ನ್ಯಾಷನಲ್ ಬುಕ್ ಫೇರ್(SIBF) 2022 ರ 41 ನೇ ಆವೃತ್ತಿಯಲ್ಲಿ ಅವರಿಗೆ ಶುಕ್ರವಾರ(ನವೆಂಬರ್ 11) ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನಿರೂಪಣೆ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಇವೆಂಟ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕಾಣಿಸಿಕೊಂಡಿದ್ದರು. ಇದರ ವಿಡಿಯೋಗಳು ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇನ್ನು ಶಾರುಖ್ ಅವರು ಕಾರ್ಯಕ್ರಮದಲ್ಲಿ ನಾವು ಎಲ್ಲೇ ವಾಸಿಸುತ್ತಿದ್ದರೂ, ನಾವು ಯಾವ ಬಣ್ಣದಲ್ಲಿದ್ದರೂ, ನಾವು ಯಾವ ಧರ್ಮವನ್ನು ಅನುಸರಿಸುತ್ತಿದ್ದೇವೆ, ಯಾವ ಹಾಡಿಗೆ ಡ್ಯಾನ್ಸ್ ಮಾಡುತ್ತೇವೆ ಇವೆಲ್ಲ ಮುಖ್ಯವಲ್ಲ, ‘ನಾವೆಲ್ಲರೂ ಪ್ರೀತಿ, ಶಾಂತಿ, ಸಂಸ್ಕೃತಿಯಿಂದ ಬೆಳೆಯಬೇಕು ಅದನ್ನು ರೂಢಿಸಿಕೊಳ್ಳಬೇಕು’ ಎಂದಿದ್ದಾರೆ. ವೇದಿಕೆಯಲ್ಲಿ ಅವರು ತಮ್ಮ ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದಲ್ಲಿನ ಸೀನ್ನಂತೆ ಕೈ ತೋಳುಗಳನ್ನ ಚಾಚುವ ಮೂಲಕ ಮತ್ತೊಮ್ಮೆ ಅದನ್ನು ಮರುಸೃಷ್ಟಿಸಿದರು.
ಇದನ್ನೂ ಓದಿ:Pathaan Teaser: ಧೂಳೆಬ್ಬಿಸುತ್ತಿದೆ ‘ಪಠಾಣ್’ ಟೀಸರ್; ಶಾರುಖ್ ಖಾನ್ ಅವತಾರ ಕಂಡು ಫ್ಯಾನ್ಸ್ ಫಿದಾ
ಈ ಸಮಾರಂಭದಲ್ಲಿ ಶಾರುಖ್ ಕಪ್ಪು ಅವತಾರದಲ್ಲಿ ಕಾಣಿಸಿಕೊಂಡಿದ್ದರು, ತಮ್ಮ ‘ಓಂ ಶಾಂತಿ ಓಂ’ ಸಿನಿಮಾದ ಜೊತೆ ಬಾಜಿಗರ್ನ ಡೈಲಾಗ್ಗಳಿಂದ ಅಭಿಮಾನಿಗಳನ್ನ ರಂಜಿಸಿದರು. ಇನ್ನು ಅವರ ಅಭಿಮಾನಿಯೊಬ್ಬರು ಈ ಇವೆಂಟ್ನ ಎಲ್ಲಾ ದೃಶ್ಯಗಳಿಗೆ ‘ಅವರು ಎಲ್ಲಾ ಪ್ರಶಸ್ತಿಗೆ ಅರ್ಹರು’ ಎಂದು ಟ್ವಿಟರ್ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು ‘ಜಸ್ಟ್ ಕಿಂಗ್ ಬೀಯಿಂಗ್ ಕಿಂಗ್’ ಎಂದು ಹೇಳಿದ್ದಾರೆ.
ಇನ್ನು ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು, ಈಗ ‘ಪಠಾಣ್’ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ. ಈ ಚಿತ್ರದ ಟೀಸರ್ನಲ್ಲಿ ಶಾರುಖ್ ಸಿಕ್ಸ್ಪ್ಯಾಕ್ನೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಸಿನಿಮಾವು ಜನವರಿ 25 ರಂದು ರಿಲೀಸ್ ಆಗಲಿದ್ದು ದೊಡ್ಡ ಮಟ್ಟದ ಸಕ್ಸಸ್ ಕಾಣುವ ನಿರೀಕ್ಷೆಯಲ್ಲಿದೆ ಚಿತ್ರತಂಡ.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:44 pm, Sat, 12 November 22