AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ‘ಕೆಜಿಎಫ್ 2’ ಗಳಿಕೆಗೆ ಸೆಡ್ಡು ಹೊಡೆಯುತ್ತಾ ಶಾರುಖ್ ‘ಪಠಾಣ್​’? ಶುರುವಾಗಿದೆ ಚರ್ಚೆ

ಶಾರುಖ್ ಖಾನ್ ಅವರ ನಟನೆಯ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾ 2013ರಲ್ಲಿ ತೆರೆಗೆ ಬಂತು. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಶಾರುಖ್ ಖಾನ್ ಅವರು ಹೇಳಿಕೊಳ್ಳುವಂತಹ ಗೆಲುವು ಕಾಣಲಿಲ್ಲ. ಈಗ ‘ಪಠಾಣ್’ ಮೂಲಕ ಅವರು ಒಳ್ಳೆಯ ಕಂಬ್ಯಾಕ್ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ‘ಕೆಜಿಎಫ್ 2’ ಗಳಿಕೆಗೆ ಸೆಡ್ಡು ಹೊಡೆಯುತ್ತಾ ಶಾರುಖ್ ‘ಪಠಾಣ್​’? ಶುರುವಾಗಿದೆ ಚರ್ಚೆ
ಶಾರುಖ್-ಯಶ್
TV9 Web
| Edited By: |

Updated on:Nov 02, 2022 | 6:34 PM

Share

ಶಾರುಖ್ ಖಾನ್ (Shah Rukh Khan) ಅವರು ನಾಲ್ಕು ವರ್ಷಗಳ ಕಾಲ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಅವರು ಒಳ್ಳೆಯ ಕಂಬ್ಯಾಕ್ ಮಾಡಲಿ ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು. ಆ ಕೋರಿಕೆಯನ್ನು ‘ಪಠಾಣ್​’ ಚಿತ್ರ ಈಡೇರಿಸುವ ಸೂಚನೆ ನೀಡಿದೆ. ಮಸ್ತ್ ಆ್ಯಕ್ಷನ್​ನೊಂದಿಗೆ, ಸಿಕ್ಸ್ ಪ್ಯಾಕ್ ಬಾಡಿಯೊಂದಿಗೆ ‘ಪಠಾಣ್​’ (Pathan Teaser) ಟೀಸರ್​ನಲ್ಲಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಜನವರಿ 25ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಲೆಕ್ಕಾಚಾರದ ಬಗ್ಗೆ ಈಗಲೇ ಚರ್ಚೆ ಶುರುವಾಗಿದೆ.

ಶಾರುಖ್ ಖಾನ್ ಅವರ ನಟನೆಯ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾ 2013ರಲ್ಲಿ ತೆರೆಗೆ ಬಂತು. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಶಾರುಖ್ ಖಾನ್ ಅವರು ಹೇಳಿಕೊಳ್ಳುವಂತಹ ಗೆಲುವು ಕಾಣಲಿಲ್ಲ. ಈಗ ‘ಪಠಾಣ್’ ಮೂಲಕ ಅವರು ಒಳ್ಳೆಯ ಕಂಬ್ಯಾಕ್ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. 57ನೇ ವಯಸ್ಸಿನಲ್ಲೂ ಸಿಕ್ಸ್ ಪ್ಯಾಕ್ ಮೂಲಕ ಮಿಂಚಿದ್ದಾರೆ.

‘ಪಠಾಣ್​’ ಟೀಸರ್ ನೋಡಿದವರಿಗೆ ಒಂದು ನಿರೀಕ್ಷೆ ಸೃಷ್ಟಿ ಆಗಿದೆ. ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂದು ಎಲ್ಲರೂ ಭಾವಿಸುತ್ತಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಬಾಲಿವುಡ್​ನಲ್ಲಿ ಮೊದಲ ದಿನ 53.95 ಕೋಟಿ ರೂಪಾಯಿ ಬಾಚಿತ್ತು. ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕೆ ಇದೆ. ‘ಪಠಾಣ್​’ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಸಿದ್ದಾರ್ಥ್ ಆನಂದ್ ಅವರ ‘ವಾರ್’ ಸಿನಿಮಾ ಮೊದಲ ದಿನ 51.60 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈಗ ಎಲ್ಲರ ದೃಷ್ಟಿ ‘ಪಠಾಣ್’ ಮೇಲಿದೆ.

ಇದನ್ನೂ ಓದಿ: ಧೂಳೆಬ್ಬಿಸುತ್ತಿದೆ ‘ಪಠಾಣ್​’ ಟೀಸರ್​; ಶಾರುಖ್​ ಖಾನ್​ ಅವತಾರ ಕಂಡು ಫ್ಯಾನ್ಸ್​ ಫಿದಾ

‘ಪಠಾಣ್’ ಚಿತ್ರದಲ್ಲಿ ಶಾರುಖ್ ಖಾನ್ ಜತೆ ಜಾನ್ ಅಬ್ರಾಹಂ ಹಾಗೂ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಈ ಚಿತ್ರ ‘ಕೆಜಿಎಫ್ 2’ನ ಮೊದಲ ದಿನದ ಕಲೆಕ್ಷನ್ ಹಿಂದಿಕ್ಕಬಹುದೇ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಸದ್ಯ ಬಾಲಿವುಡ್​ ಸೊರಗಿದೆ. ಯಾವ ಚಿತ್ರಗಳೂ ಗೆಲ್ಲುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮೊದಲ ದಿನ 50 ಕೋಟಿ ರೂಪಾಯಿ ಬಾಚಿಕೊಳ್ಳುವುದು ಎಂದರೆ ಅದು ಸುಲಭದ ಮಾತಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ಜನವರಿ ತಿಂಗಳಲ್ಲಿ ಉತ್ತರ ಸಿಗಬೇಕಿದೆ.

Published On - 6:32 pm, Wed, 2 November 22

ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್
‘ದೊಡ್ಡದಾಗಿ ಏನೋ ಕಾಯ್ತಿರಬಹುದು, ಆಗೋದಲ್ಲ ಆಗ್ಲಿ’; ಧನುಶ್