ರತ್ನಮಾಲಾ ಮಾಡಿದ್ದ ವಿಲ್ ಗುಟ್ಟು ಬಯಲು; ಸಾಯಿಸಲು ಹೋದ ವರುಧಿನಿಗೆ ಗೊತ್ತಾಯ್ತು ಅಸಲಿ ವಿಚಾರ

ರತ್ನಮಾಲಾಳ ಬಗ್ಗೆ ವೈದ್ಯರಿಗೆ ಅನುಮಾನ ಒಂದು ಬಂದಿದೆ. ಆಕೆ ಆಸ್ಪತ್ರೆಯಲ್ಲಿದ್ದರೆ ಚೇತರಿಕೆ ಕಾಣುವವಳಲ್ಲ ಎಂಬುದು ಗೊತ್ತಾಗಿದೆ. ಈ ಕಾರಣಕ್ಕೆ ವೈದ್ಯರು ಹರ್ಷನ ಬಳಿ ಈ ವಿಚಾರ ಚರ್ಚೆ ಮಾಡಿದ್ದಾರೆ.

ರತ್ನಮಾಲಾ ಮಾಡಿದ್ದ ವಿಲ್ ಗುಟ್ಟು ಬಯಲು; ಸಾಯಿಸಲು ಹೋದ ವರುಧಿನಿಗೆ ಗೊತ್ತಾಯ್ತು ಅಸಲಿ ವಿಚಾರ
ವರು-ರತ್ನಮಾಲಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 03, 2022 | 6:32 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ಸದ್ಯ ಕೋಮಾ ಸ್ಥಿತಿಯಲ್ಲಿದ್ದಾಳೆ. ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ಮಧ್ಯೆ ವರುಧಿನಿ ರತ್ನಮಾಲಾಳನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. ಈ ವೇಳೆ ಆಕೆಗೆ ಒಂದು ಶಾಕಿಂಗ್ ವಿಚಾರ ಗೊತ್ತಾಗಿದೆ.

ವೈದ್ಯರು ಹೇಳಿದ್ದೂ ಅದೇ, ಆಗಿದ್ದೂ ಅದೇ:

ರತ್ನಮಾಲಾಳ ಬಗ್ಗೆ ವೈದ್ಯರಿಗೆ ಅನುಮಾನ ಒಂದು ಬಂದಿದೆ. ಆಕೆ ಆಸ್ಪತ್ರೆಯಲ್ಲಿದ್ದರೆ ಚೇತರಿಕೆ ಕಾಣುವವಳಲ್ಲ ಎಂಬುದು ಗೊತ್ತಾಗಿದೆ. ಈ ಕಾರಣಕ್ಕೆ ವೈದ್ಯರು ಹರ್ಷನ ಬಳಿ ಈ ವಿಚಾರ ಚರ್ಚೆ ಮಾಡಿದ್ದಾರೆ. ‘ರತ್ನಮಾಲಾ ಅವರನ್ನು ಮನೆಗೆ ಕರೆದುಕೊಂಡು ಹೋಗಿ. ಆಕೆ ಆಸ್ಪತ್ರೆಯಲ್ಲಿ ಇದ್ದರೆ ಚೇತರಿಕೆ ಕಾಣುವವಳು ಅಲ್ಲ. ಒಂದೊಮ್ಮೆ ಆಕ್ಸಿಜನ್ ಮಾಸ್ಕ್ ತೆಗೆದರೆ ಆಕೆ ಸುಧಾರಿಸಿದರೂ ಸುಧಾರಿಸಬಹುದು. ಈ ರೀತಿ ಆಗಿರುವ ಸಾಕಷ್ಟು ಉದಾಹರಣೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ಆದರೆ, ಇದು ಹರ್ಷನಿಗೆ ಸರಿ ಎನಿಸಿಲ್ಲ. ಆತ ಗೊಂದಲಕ್ಕೆ ಒಳಗಾಗಿದ್ದಾನೆ. ಐಸಿಯುನಲ್ಲಿರುವ ವ್ಯಕ್ತಿಗೆ ಆಕ್ಸಿಜನ್ ಮಾಸ್ಕ್ ತೆಗೆಯುವುದು ಎಂದರೆ ಹೇಗೆ ಸಾಧ್ಯ ಎಂಬುದು ಹರ್ಷನ ಪ್ರಶ್ನೆ. ಈ ರಿಸ್ಕ್ ತೆಗೆದುಕೊಳ್ಳೋಕೆ ಆತ ರೆಡಿ ಇಲ್ಲ. ಇದು ಅಸಾಧ್ಯ ಎಂದು ಆತ ಹೇಳಿದ್ದಾನೆ. ಅತ್ತ ವರುಧಿನಿ ಇದೇ ಕೆಲಸ ಮಾಡಿದ್ದಾಳೆ.

ವರುಧಿನಿಗೆ ಹೇಗಾದರೂ ಮಾಡಿ ಸಾನಿಯಾ ಹೇಳಿದ ಕೆಲಸ ಮಾಡಬೇಕಿದೆ. ಸಾನಿಯಾ ಬಾಂಡ್ ಪೇಪರ್ ಒಂದನ್ನು ನೀಡಿ ಸಹಿ ಹಾಕಿಸಿಕೊಂಡು ಬರುವಂತೆ ಹೇಳಿದ್ದಾಳೆ. ಈ ಕಾರಣಕ್ಕೆ ರತ್ನಮಾಲಾ ಬಳಿ ತೆರಳಿದ ಆಕೆ ಆಕ್ಸಿಜನ್ ಮಾಸ್ಕ್ ತೆಗೆದಿದ್ದಾಳೆ. ಇದನ್ನು ತೆಗೆಯುತ್ತಿದ್ದಂತೆ ರತ್ನಮಾಲಾಗೆ ಉಸಿರು ಬಂದಿದೆ. ಇದನ್ನು ನೋಡಿ ವರುಧಿನಿ ಶಾಕ್ ಆಗಿದ್ದಾಳೆ. ರತ್ನಮಾಲಾಗೆ ಉಸಿರು ಬಂದಿರೋದು ನೋಡಿ ಆಕೆಗೆ ಶಾಕ್ ಆಗಿದೆ.

ರತ್ನಮಾಲಾ ರಿವೀಲ್ ಮಾಡಿದ್ರು ಅಸಲಿ ವಿಚಾರ

ರತ್ನಮಾಲಾ ವಿಲ್ ವಿಚಾರವನ್ನು ಹರ್ಷನಿಗೆ ಹೇಳಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ. ಎಚ್ಚರ ತಪ್ಪುವುದಕ್ಕೂ ಮುನ್ನ ರತ್ನಮಾಲಾ ಈ ವಿಚಾರವನ್ನು ಹರ್ಷನಿಗೆ ಹೇಳುವವಳಿದ್ದಳು. ಆದರೆ, ಆತ ಸಾನಿಯಾಳನ್ನು ಕೆಲಸದಿಂದ ತೆಗೆಸಿದ ವಿಚಾರ ಹೇಳಿದ್ದಾನೆ. ಜತೆಗೆ ಆಸ್ತಿಗೆ ನಾನೇ ವಾರಸುದಾರ ಎಂದು ಹೇಳಿಕೊಂಡಿದ್ದಾನೆ. ಇದನ್ನು ಕೇಳಿ ರತ್ನಮಾಲಾಗೆ ಶಾಕ್ ಆಗಿದೆ. ಹೀಗಾಗಿ, ಆಕೆ ಎಚ್ಚರ ತಪ್ಪಿದ್ದಳು. ಎಚ್ಚರ ಬರುತ್ತಿದ್ದಂತೆ ರತ್ನಮಾಲಾ ಹರ್ಷನ ಕರೆಯುವಂತೆ ಹೇಳಿದ್ದಾಳೆ. ಆದರೆ, ಇದಕ್ಕೆ ವರು ಒಪ್ಪಿಲ್ಲ. ವೈದ್ಯರನ್ನು ಕರೆಯುತ್ತೇನೆ ಎಂದು ಹೇಳಿದ್ದಾಳೆ.

ಆದರೆ, ರತ್ನಮಾಲಾ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಆಕೆ ಹರ್ಷನೇ ಬೇಕು ಎಂದು ಹಠ ಹಿಡಿದಿದ್ದಾಳೆ. ಆ ಸಮಯಕ್ಕೆ ಸರಿಯಾಗಿ ವಿಲ್ ವಿಚಾರ ಬಾಯ್ಬಿಟ್ಟಿದ್ದಾಳೆ. ‘ಹರ್ಷ ನಾನು ನಿನಗೆ ಮೋಸ ಮಾಡಿಲ್ಲ. ಒಳ್ಳೆಯ ಕೆಲಸಕ್ಕೆ ನಾನು ಈ ರೀತಿ ಮಾಡಿದ್ದೇನೆ. ವಿಲ್​.. ವಿಲ್​..’ ಎಂದಿದ್ದಾಳೆ ರತ್ನಮಾಲಾ. ಆಗ ವರುಧಿನಿಗೆ ಅಸಲಿ ವಿಚಾರ ಗೊತ್ತಾಗಿದೆ. ಎಲ್ಲಾ ಆಸ್ತಿಯನ್ನು ರತ್ನಮಾಲಾ ಭುವಿ ಹೆಸರಿಗೆ ಬರೆದಿಟ್ಟಿದ್ದಾಳೆ ಎಂಬುದು ಗೊತ್ತಾಗಿದೆ.

ರತ್ನಮಾಲಾ ದೀರ್ಘ ನಿದ್ರೆಯಲ್ಲಿದ್ದಳು. ಆಕೆಗೆ ಚಿತ್ರ ವಿಚಿತ್ರ ಕನಸು ಬಿದ್ದಿದೆ. ‘ಭುವಿಗೆ ವಿಲ್ ವಿಚಾರ ಬರೆದಿದ್ದು ಗೊತ್ತಾದಂತೆ. ಎಲ್ಲರೂ ಭುವಿ ವಿರುದ್ಧ ತಿರುಗಿ ಬಿದ್ದಂತೆ ಕಂಡಿದೆ. ಇದರಿಂದ ರತ್ನಮಾಲಾ ಸಾಕಷ್ಟು ಆತಂಕಗೊಂಡಿದ್ದಾಳೆ. ಈ ಕಾರಣಕ್ಕೆ ವಿಲ್ ವಿಚಾರವಾಗಿ ಆಕೆ ಹರ್ಷನ ಜತೆ ಮಾತನಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಳೆ.

ಶ್ರೀಲಕ್ಷ್ಮಿ ಎಚ್.

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ