Lakshana Serial: ನಕ್ಷತ್ರಳ ನೋವನ್ನು ನೋಡಲಾರದೆ ಇದು ಪ್ರಾಂಕ್ ಎಂದ ವೈಷ್ಣವಿ
ನಕ್ಷತ್ರಳ ನೋವನ್ನು ನೋಡಲಾರದೆ ವೈಷ್ಣವಿಯು ನಿಜಾಂಶವನ್ನು ಹೇಳುತ್ತಾಳೆ. ನಾನು ಮಾಡಿದ್ದು ಪ್ರಾಂಕ್. ನಾವಿಬ್ಬರು ಪ್ರೇಮಿಗಳಲ್ಲ ಬದಲಾಗಿ ಒಳ್ಳೆಯ ಸ್ನೇಹಿತರು.
ಧಾರಾವಾಹಿ: ಲಕ್ಷಣ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ವೈಷು ನೀನೇನು ಇಲ್ಲಿ ಎಂದು ಭೂಪತಿ ಹೇಳಿದ ಒಂದು ಮಾತಿಗೆ ಮನೆಯವರೆಲ್ಲರೂ ಕಣ್ಣು ಬಾಯಿ ಬಿಟ್ಟು ನೋಡುತ್ತಾರೆ. ನಗುತ್ತಲೇ ನನಗೆ ಪ್ರಾಮಿಸ್ ಮಾಡಿದ್ದೀಯಾ ತಾನೆ, ಅದನ್ನು ಮನೆಯವರಿಗೆ ಹೇಳು ಎಂದು ವೈಷ್ಣವಿ ಭೂಪತಿಗೆ ಹೇಳುತ್ತಾಳೆ. ನಂತರ ನಕ್ಷತ್ರ ತನ್ನ ಗಂಡನ ತಂಟೆಗೆ ಬಂದ ವೈಷ್ಣವಿಯನ್ನು ತರಾಟೆಗೆ ತಗೆದುಕೊಂಡು ಮನೆಯಿಂದ ಹೊರ ದಬ್ಬುತ್ತಾಳೆ.
ಭೂಪತಿನ್ನು ವೈಷ್ಣವಿಯು ತನ್ನಿಂದ ಕಿತ್ತುಕೊಳ್ಳುತ್ತಾಳೆ ಎಂಬ ಭಯ ನಕ್ಷತ್ರಳಿಗೆ
ನಕ್ಷತ್ರ ಹೊರಗೆ ಹಾಕಿದ ವೈಷ್ಣವಿಯನ್ನು ಮನೆಯ ಒಳಗೆ ಕರೆದುಕೊಂಡು ಬಂದು ಅಥಿತಿಗಳ ಜೊತೆ ಹೀಗೆಲ್ಲಾ ನಡೆದುಕೊಳ್ಳಬಾರದು ಎಂದು ಭೂಪತಿ ನಕ್ಷತ್ರಳಿಗೆ ಬುದ್ಧಿವಾದ ಹೇಳುತ್ತಾನೆ. ಭೂಪತಿನ್ನು ವೈಷ್ಣವಿಯು ತನ್ನಿಂದ ಕಿತ್ತುಕೊಳ್ಳುತ್ತಾಳೆ ಎನ್ನುವ ಸಂಕಟದಲ್ಲಿ ವೈಷ್ಣವಿಯ ಮೇಲೆ ಬೆಟ್ಟದಷ್ಟು ಸಿಟ್ಟಿದ್ದರೂ ನಕ್ಷತ್ರ ಹೋಗಿ ಆಕೆಯ ಕಾಲಿಗೆ ಬಿದ್ದು ಜೋರಾಗಿ ಅಳುತ್ತಾಳೆ. ದಯವಿಟ್ಟು ನನ್ನ ಗಂಡನನ್ನು ನನ್ನಿಂದ ದೂರ ಮಾಡಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಾಳೆ.
ನಕ್ಷತ್ರಳ ನೋವನ್ನು ನೋಡಲಾರದೆ ವೈಷ್ಣವಿಯು ನಿಜಾಂಶವನ್ನು ಹೇಳುತ್ತಾಳೆ. ನಾನು ಮಾಡಿದ್ದು ಪ್ರಾಂಕ್. ನಾವಿಬ್ಬರು ಪ್ರೇಮಿಗಳಲ್ಲ ಬದಲಾಗಿ ಒಳ್ಳೆಯ ಸ್ನೇಹಿತರು. ನಿಮ್ಮಿಬ್ಬರ ಮದುವೆಗೆ ನನಗೆ ಬರಲು ಆಗಿರಲಿಲ್ಲ, ನಾನು ಶೂಟಿಂಗ್‌ಲ್ಲಿ ಬ್ಯುಸಿ ಇದ್ದೆ. ಆದ ಕಾರಣ ನಿಮ್ಮನ್ನೆಲ್ಲರನ್ನು ನೋಡಲು ಈ ದಿನ ಬಂದಿದ್ದು. ನಿನ್ನ ಮತ್ತು ಮನೆಯವರ ರಿಯಾಕ್ಷನ್ ಹೇಗಿರುತ್ತದೆ ಎಂದು ನೋಡಲು ಜಸ್ಟ್ ಒಂದು ಪ್ರಾಂಕ್ ಮಾಡಿದ್ದು ನಕ್ಷತ್ರ. ಇದಕ್ಕೆ ಭೂಪತಿಯ ಸಹಾಯ ಕೂಡಾ ಇತ್ತು ಎಂದು ವೈಷ್ಣವಿಯು ನಗುತ್ತಾ ತಾನು ಮಾಡಿದ ಚೇಷ್ಟೆಯ ಬಗ್ಗೆ ವಿವರಿಸುತ್ತಾಳೆ.
ವೈಷ್ಣವಿಯ ಈ ಮಾತುಗಳನ್ನು ಕೇಳಿದ ನಕ್ಷತ್ರಳ ಮನಸ್ಸು ನಿರಾಳವಾಗುತ್ತದೆ. ತಾನು ವೈಷ್ಣವಿಯ ಜೊತೆಗೆ ಕಠೋರವಾಗಿ ವರ್ತಿಸಿದ್ದಕ್ಕೆ ಕ್ಷಮೆಯನ್ನು ಕೂಡಾ ಕೇಳುತ್ತಾಳೆ. ನಿನ್ನ ಕೋಪದಲ್ಲಿ ಕೂಡಾ ಒಂದು ನ್ಯಾಯ ಇತ್ತು ಅಲ್ವಾ. ಯಾವ ಹೆಂಡತಿ ತಾನೆ ತನ್ನ ಗಂಡನ ಬಾಳಲ್ಲಿ ಬೇರೊಬ್ಬ ಹೆಣ್ಣು ಬಂದರೆ ಸುಮ್ಮನಿರುತ್ತಾಳೆ ಹೇಳು, ನಿನ್ನ ಮಾತಿನಿಂದ ನನಗೆ ಏನು ಬೇಸರವಾಗಿಲ್ಲ ನಕ್ಷತ್ರ. ಆದರೆ ನೀನು ಭೂಪತಿಯನ್ನು ಎಷ್ಟು ಪ್ರೀತಿ ಮಾಡುತ್ತೀಯಾ ಎನ್ನುಂವತಹದ್ದು ಆ ನಿನ್ನ ಒದ್ದಾಟವನ್ನು ನೋಡಿ ನನಗೆ ಗೊತ್ತಾಗಿದೆ ಅಂತ ವೈಷ್ಣವಿಯು ಹೇಳುತ್ತಾಳೆ. ನಕ್ಷತ್ರ ಭೂಪತಿಯ ಮೇಲೆ ಇಟ್ಟಿರುವ ನಿಷ್ಕಲ್ಮಶ ಪ್ರೀತಿಗೆ ಹಾಗೂ ಅವಳ ಒಳ್ಳೆಯ ಗುಣಕ್ಕೆ, ವೈಷ್ಣವಿ ಕಪ್ಪು ಕಸ್ತೂರಿ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ಅದು ನಿನ್ನ ಗುಣದಲ್ಲೇ ಇದೆ. ಎಂದು ಹೊಗಳಿಕೆಯ ಮಾತುಗಳನ್ನಾಡುತ್ತಾಳೆ.
ಹೀಗೆ ಮಾತನಾಡುತ್ತಾ ನೀನೇನು ಸುಮ್ಮನೆ ಇದ್ದೆ ನಕ್ಷತ್ರ. ಆದರೆ ಶಕುಂತಳಾ ಅಮ್ಮ ನನ್ನನ್ನು ಕ್ಷಮಿಸುತ್ತಾರಾ. ಮೊದಲೇ ಅವರು ತುಂಬಾ ಸ್ಟಿಕ್ಟ್ ಅಲ್ವಾ ಎಂದು ವೈಷ್ಣವಿ ಹೇಳಿದಾಗ ಅತ್ತೆ ಸ್ಟಿಕ್ಟ್ ಇರಬಹುದು ಆದರೆ ಅವರ ಮನಸ್ಸು ತುಂಬಾನೇ ಮೃದು. ನಿಮ್ಮ ಚೇಷ್ಟೆಗೆ ಅವರು ಬೈಯುವುದಿಲ್ಲ ವೈಷ್ಣವಿಯವರೇ ಎಂದು ನಕ್ಷತ್ರ ಹೇಳುತ್ತಾಳೆ.
ಸ್ವಲ್ಪ ಹೊತ್ತಿನ ಬಳಿಕ ಮನೆಯವರಿಗೆಲ್ಲ ವೈಷ್ಣವಿ ಮಾಡಿದ ಚೇಷ್ಟೆಯ ಬಗ್ಗೆ ಭೂಪತಿ ಹೇಳುತ್ತಾನೆ. ಆಕೆ ಮಾಡಿದ ತರ್ಲೆ ಕೆಲಸಕ್ಕೆ ಮೊದಲು ಗಾಬರಿಯಾದರೂ ನಂತರ ಇದೆಲ್ಲ ಪ್ರಾಂಕ್ ಅಂತ ಗೊತ್ತಾದ ಮೇಲೆ ನಗೆಗಡಲಲ್ಲಿ ತೇಳುತ್ತಾರೆ. ವೈಷ್ಣವಿ ಮಾಡಿದ ಚೇಷ್ಟೆಗೆ ಹೊಟ್ಟೆ ತುಂಬಾ ಊಟ ಮಾಡುವ ಶಿಕ್ಷೆಯನ್ನು ಕೊಡುತ್ತಾರೆ ಶಕುಂತಳಾದೇವಿ. ನಕ್ಷತ್ರ, ಶಕುಂತಳಾದೇವಿ ಸೇರಿ ವೈಷ್ಣವಿಗೆ ಕೈತುತ್ತು ನೀಡುತ್ತಾರೆ. ಊಟ ಆದ ಬಳಿಕ ಮನೆಗೆ ಹೊರಡುವಾಗ ತಾನು ಮಾಡಿದ ಚೇಷ್ಟೆಗೆ ಮತ್ತೊಮ್ಮೆ ಮನೆಯವರಿಗೆಲ್ಲ ಕ್ಷಮೆ ಕೇಳುತ್ತಾಳೆ ವೈಷ್ಣವಿ. ಹಾಗೂ ಭೂಪತಿಯನ್ನು ಕರೆದು ನಕ್ಷತ್ರನೇ ನಿನಗೆ ಸರಿಯಾದ ಜೋಡಿ, ಅವಳು ತುಂಬಾ ಇನೋಸೆಂಟ್, ಆಕೆಯ ಮನಸ್ಸು ತುಂಬಾ ಪರಿಶುದ್ಧವಾದ್ದು ಎಂದು ಹೇಳಿ ತನ್ನ ಮನೆಗೆ ಹೊರಡುತ್ತಾಳೆ ವೈಷ್ಣವಿ. ವೈಷ್ಣವಿ ಹೇಳಿದ ಮಾತಿನಿಂದಾದರೂ ಭೂಪತಿಗೆ ನಕ್ಷತ್ರಳ ಮೇಲೆ ಪ್ರೀತಿ ಮೂಡುತ್ತಾ ಎಂದು ಮುಂದೆ ನೋಡಬೇಕಾಗಿದೆ.
ಮಧುಶ್ರೀ
Published On - 11:00 am, Thu, 3 November 22