Lakshana Serial: ವೈಷ್ಣವಿಯ ಆಟ, ನಕ್ಷತ್ರಳಿಗೆ ಒದ್ದಾಟ, ಮುಂದೆ ಕಾದಿದೆ ಮಾರಿಹಬ್ಬ
ನನಗೆ ನಮ್ಮ ಮನೆಯನ್ನು ತೋರಿಸಲ್ವಾ ಅಂತ ಹೇಳಿ ವೈಷ್ಣವಿ ಭೂಪತಿಯ ಕೈ ಹಿಡಿದುಕೊಂಡು ಎಳೆದುಕೊಂಡು ಹೋಗುತ್ತಾಳೆ. ತನ್ನ ಗಂಡನ ಜೊತೆ ಬೇರೊಬ್ಬ ಹುಡುಗಿ ಸಲುಗೆಯಿಂದ ಇದ್ದರೆ ಯಾವ ಹೆಂಡತಿಯಾದರೂ ಸಹಿಸುತ್ತಾಳಾ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥೆಯ ಮೂಲಕ ವೀಕ್ಷಕರ ಮನ ಗೆದ್ದಿದೆ. ವೈಷ್ಣವಿ ಮನೆಗೆ ಬಂದಾಗಿನಿಂದ ನಕ್ಷತ್ರಳ ಒದ್ದಾಟ ಹೇಳತೀರದಾಗಿದೆ. ಅದರಲ್ಲೂ ವೈಷ್ಣವಿಗೆ ಆಕೆಯನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿದ್ದು ಸತ್ಯ ಎಂದು ಭೂಪತಿ ಹೇಳಿದಾಗ ಮನೆಯವರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಕ್ಷತ್ರಳ ಪರಿಸ್ಥಿತಿಯಂತೂ ಬಿಸಿ ತುಪ್ಪವನ್ನು ಬಾಯಿಗೆ ಇಟ್ಟಂತಾಗಿದೆ. ನುಂಗೋಕು ಆಗದೆ ಉಗುಲೋಕು ಆಗದಿರುವ ಪರಿಸ್ಥಿತಿಯಾಗಿದೆ. ನನ್ನ ಗಂಡ ಈ ರೀತಿ ಮಾಡಿರಲು ಸಾಧ್ಯವೇ ಇಲ್ಲ, ನೀನು ಸುಳ್ಳು ಹೇಳುತ್ತಿದ್ದೀಯಾ ಎಂದು ನಕ್ಷತ್ರ ಎಷ್ಟೇ ವಾದಿಸಿದರೂ ಸ್ವತಃ ಭೂಪತಿನೇ ವೈಷ್ಣವಿಗೆ ಮಾತು ಕೊಟ್ಟಿದ್ದು ನಿಜ ಎನ್ನುವ ಮೂಲಕ ಎಲ್ಲರ ಗೊಂದಲಕ್ಕೂ ತೆರೆ ಎಳೆದಿದ್ದಾನೆ. ಆದರೆ ಶಕುಂತಳಾದೇವಿಗೆ ಭೂಪತಿಯ ಮಾತು ಕೇಳಿ ತುಂಬಾ ಬೇಸರವಾಗುತ್ತದೆ.
ಒಂದು ಮಾತು ಹೇಳಬಾರದಿತ್ತಾ ನಾನು ಪ್ರೀತಿ ಮಾಡುತ್ತೇನೆ ಎಂದು. ಈ ಅಮ್ಮನ ಬಳಿಯೇ ಸುಳ್ಳು ಹೇಳಿದ್ನಾ ನನ್ನ ಮಗ ಎಂದು ಅಳುತ್ತಾರೆ. ಅಳುತ್ತಿರುವ ಶಕುಂತಳಾದೇವಿಗೆ ಸಮಧಾನ ಮಾಡುತ್ತಾ ಅಮ್ಮ ನಿಮಗೆ ನೋವು ಕೊಡುವುದು ಏಕೆ ಎನ್ನುವ ಉದ್ದೇಶದಿಂದ ಪ್ರೀತಿ ವಿಷಯ ಮುಚ್ಚಿಟ್ಟಿರಬಹುದಲ್ವಾ ಅಮ್ಮ ಎಂದು ಮುನ್ನ ಸಮಾಧಾನ ಮಾಡುತ್ತಾನೆ. ವೈಷ್ಣವಿ ನಕ್ಷತ್ರಳನನ್ನು ಮನೆಯಿಂದ ಓಡಿಸುತ್ತೇನೆ ಎಂದು ಎಲ್ಲರ ಮುಂದೆ ರಾಜರೋಷವಾಗಿ ಮಾತನಾಡಿಕೊಳ್ಳುತ್ತಾಳೆ.
ನನಗೆ ನಮ್ಮ ಮನೆಯನ್ನು ತೋರಿಸಲ್ವಾ ಅಂತ ಹೇಳಿ ವೈಷ್ಣವಿ ಭೂಪತಿಯ ಕೈ ಹಿಡಿದುಕೊಂಡು ಎಳೆದುಕೊಂಡು ಹೋಗುತ್ತಾಳೆ. ತನ್ನ ಗಂಡನ ಜೊತೆ ಬೇರೊಬ್ಬ ಹುಡುಗಿ ಸಲುಗೆಯಿಂದ ಇದ್ದರೆ ಯಾವ ಹೆಂಡತಿಯಾದರೂ ಸಹಿಸುತ್ತಾಳಾ, ಹಾಗೆನೇ ನಕ್ಷತ್ರಳಿಗೂ ವೈಷ್ಣವಿಯ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿದೆ. ಸಮಾಜದಲ್ಲಿ ಅವರಿಗೆ ಒಳ್ಳೆಯ ಗೌರವ ಇದೆ ಅಂತ ಇಲ್ಲಿಯವರೆಗೆ ಸುಮ್ಮನಿದ್ದೆ. ಆದರೆ ಅವಳು ನನ್ನ ಸಂಸಾರವನ್ನು ಒಡೆದರೆ ನಾನು ಸುಮ್ಮನಿರಬೇಕಾ ಸಾಧ್ಯನೇ ಇಲ್ಲ ಎಂದು ಮನಸ್ಸಿನಲ್ಲಿ ಮಾತನಾಡಿಕೊಳ್ಳುತ್ತಾಳೆ ನಕ್ಷತ್ರ.
ಇದನ್ನು ಓದಿ: ನಕ್ಷತ್ರಳ ಪಾಲಿಗೆ ಬಂದೊದಗಿದೆ ಇನ್ನೊಂದು ಕಂಟಕ: ಭೂಪತಿ ಇನ್ನು ಮುಂದೆ ನನ್ನವನ್ನು ಅಂತಿದ್ದಾಳೆ ವೈಷ್ಣವಿ
ಹೀಗೆ ಮಾತನಾಡುವಾಗ ಈ ಕೆಲಸ ಶ್ವೇತಾ ಮಾಡಿರಬಹುದಾ ಎನ್ನುವ ಸಣ್ಣ ಅನುಮಾನ ಕಾಡುತ್ತದೆ ನಕ್ಷತ್ರಳಿಗೆ, ಆ ತಕ್ಷಣವೇ ಶ್ವೇತಾಳ ಬಳಿ ಹೋಗಿ ಇದೆಲ್ಲ ನಿನ್ನ ಕೆಲಸನಾ ಎಂದು ಪ್ರಶ್ನೆ ಮಾಡುತ್ತಾಳೆ. ನನಗೇನು ಹುಚ್ಚು ಹಿಡಿದಿದೆಯಾ, ಅಥವಾ ಅಷ್ಟು ದೊಡ್ಡ ಸೆಲೆಬ್ರಿಟಿ ಚಿಲ್ಲರೆ ಹಣಕ್ಕಾಗಿ ನನಗೆ ಕೆಲಸ ಮಾಡುತ್ತಾಳಾ. ಸರಿಯಾಗಿ ಯೋಚನೆ ಮಾಡಿ ಮಾತನಾಡು ಎಂದು ಶ್ವೇತಾ ನಕ್ಷತ್ರಳಿಗೆ ಹೇಳುತ್ತಾಳೆ.
ಆಗ ಈ ಕೆಲಸ ಶ್ವೇತಾ ಮಾಡಿಲ್ಲ ಅಂತ ನಕ್ಷತ್ರಳಿಗೆ ಗೊತ್ತಾಗುತ್ತದೆ. ನನ್ನ ಗಂಡನ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಅದು ವೈಷ್ಣವಿಯಾದರೂ ಸರಿ ನೀನಾದರೂ ಸರಿ ಎಂದು ಶ್ವೇತಾಳಿಗೆ ಎಚ್ಚರಿಕೆ ಕೊಡುತ್ತಾಳೆ.
ವೈಷ್ಣವಿ ಹೀಗೆಲ್ಲಾ ನನ್ನ ಮಾತನ್ನು ಕೇಳಲ್ಲ. ಅವಳಿಗೆ ವಠಾರದ ನಕ್ಷತ್ರಳ ವರಸೆನೇ ತೋರಿಸಬೇಕು ಅಂತಾ ಸಿಟ್ಟಿನಿಂದ ಶಕುಂತಾಳದೇವಿ ಜೊತೆ ಮಾತನಾಡುತ್ತಿದ್ದ ವೈಷ್ಣವಿಯ ಬಳಿ ಹೋಗುತ್ತಾಳೆ. ಅತ್ತೆ ಇವಳನ್ನು ನನಗೆ ಬಿಟ್ಟು ಬಿಡಿ, ಅದು ಹೇಗೆ ಮನೆ ಬಿಟ್ಟು ಇವಳು ಹೊಗುವುದಿಲ್ಲ ಎಂದು ನಾನು ನೋಡುತ್ತೇನೆ. ಎಂದು ಹೇಳಿ ವೈಷ್ಣವಿಯ ಕೈ ಹಿಡಿದುಕೊಂಡು ಹೋಗಿ ಆಕೆಯನ್ನು ಮನೆಯಿಂದ ಹೊರ ದಬ್ಬುತ್ತಾಳೆ. ನಕ್ಷತ್ರಳ ಈ ಆವೇಷವನ್ನು ಕಂಡು ಮನೆಯವರೆಲ್ಲರೂ ಒಂದು ಬಾರಿ ತಬ್ಬಿಬ್ಬಾಗುತ್ತಾರೆ. ವೈಷ್ಣವಿಯನ್ನು ಮನೆಯಿಂದ ಹೊರ ಹಾಕಿದ ಪರಿಣಾಮ ಏನಾಗುತ್ತದೆ ಎಂಬುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ
Published On - 11:06 am, Wed, 2 November 22