ಹೊಂಗನಸು: ಪಟ್ಟು ಬಿಡದ ಮಹೇಂದ್ರ; ತಾಯಿಗೆ 24 ಗಂಟೆ ಟೈಂ ನೀಡಿದ ರಿಷಿ: ಸಂಕಟದಲ್ಲಿ ಜಗತಿ
Honganasu Serial Update: ಮಹೇಂದ್ರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ. ಜಗತಿ ಎಷ್ಟೇ ಕೇಳಿಕೊಂಡರೂ ತನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಮಹೇಂದ್ರ ಕೂಡ ಖಡಕ್ ಆಗಿ ಹೇಳಿದ.
ಜಗತಿಯನ್ನು ಕಾಲೇಜಿನಿಂದ ಕಿತ್ತಾಕಿದ ಕೋಪಕ್ಕೆ ಮಹೇಂದ್ರ ಕೂಡ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ. ತಂದೆಯ ನಿರ್ಧಾರದಿಂದ ಆಘಾತಕೊಂಡ ರಿಷಿ ಇದಕ್ಕೆಲ್ಲ ಕಾರಣ ಜಗತಿನೇ ಎಂದುಕೊಂಡ. ಮಹೇಂದ್ರ ರಾಜಿನಾಮೆ ನೀಡಿದ ಬೆನ್ನಲ್ಲೇ ಜಗತಿ ಕೂಡ ತನ್ನ ರಾಜಿನಾಮೆ ಪತ್ರ ಕಳುಹಿಸಿದಳು. ಎರಡು ಪತ್ರವನ್ನು ಕೈಯಲ್ಲಿ ಹಿಡಿದು ಮುಂದೇನು ಮಾಡೋದು ಅಂತ ರಿಷಿ ಯೋಚಿಸತೊಡಗಿದ. ಅಷ್ಟರಲ್ಲೇ ವಸುಧರಾ ಕಾಲೇಜಿಗೆ ಎಂಟ್ರಿ ಕೊಟ್ಟಳು. ಮಹೇಂದ್ರ ಮತ್ತು ಜಗತಿ ಇಬ್ಬರೂ ರಾಜಿನಾಮೆ ಸಲ್ಲಿಸಿದ ವಿಚಾರವನ್ನು ವಸು ಮುಂದೆ ಹೇಳಿ ಈಗ ಸಮಾಧಾನ ಆಯಿತಾ ಎಂದ ರಿಷಿ ಕೂಗಾಡಿದ. ವಿಚಾರನೇ ಗೊತ್ತಿಲ್ಲದ ವಸುಗೆ ಅಚ್ಚರಿಯಾಯಿತು. ತನಗೆ ಗೊತ್ತಿಲ್ಲ ಎಂದು ವಸು ಹೇಳಿದರೂ ನಿನಗೆ ಗೊತ್ತಿಲ್ಲದೆ ಇದೆಲ್ಲ ನಡೆದಿಲ್ಲ ಎಂದು ರಿಷಿ ರೇಗಿದ. ಬಳಿಕ ಜಗತಿ ಜೊತೆ ಮಾತನಾಡಬೇಕೆಂದು ವಸು ಕೈ ಹಿಡಿದು ಕರೆದುಕೊಂಡು ಹೋದ ರಿಷಿ.
ಎಲ್ಲರೂ ಸೇರಿ ಈ ಪ್ಲಾನ್ ಮಾಡಿದ್ದೀರಿ, ಎಲ್ಲರೂ ಒಂದೇ, ನನ್ನಿಂದ ತಂದೆಯನ್ನು ದೂರ ಮಾಡಬೇಡಿ ಎಂದು ರಿಷಿ, ಜಗತಿ ಮುಂದೆ ಬೇಡಿಕೊಂಡ. ತನಗೆ ತಂದೆಯೇ ಎಲ್ಲಾ, ಅವರನ್ನು ದೂರ ಮಾಡಬೇಡಿ ಎಂದು ಗಜತಿ ಬಳಿ ಬೇಡಿಕೊಂಡ. ಆದರೆ ಜಗತಿ ಈ ವಿಚಾರ ತನಗೆ ಗೊತ್ತಿಲ್ಲ ಎಂದು ಎಷ್ಟೇ ಹೇಳಿದರೂ ರಿಷಿ ನಂಬುತ್ತಿಲ್ಲ. ತಂದೆ-ಮಗನನ್ನು ದೂರ ಮಾಡಬೇಡಿ, ನನ್ನ ತಂದೆಯನ್ನು ಪಾವಾಸ್ ಕೊಡಿ ಎಂದು ಜಗತಿಗೆ ಕೈ ಮುಗಿದು ಕೇಳಿಕೊಂಡ. 24 ಗಂಟೆಯೊಳಗೆ ಅಪ್ಪ ರಾಜಿನಾಮೆ ನಿರ್ಧಾರ ವಾಪಾಸ್ ಪಡೆಯುಂತೆ ಮಾಡಬೇಕೆಂದು ಜಗತಿಗೆ ಖಡಕ್ ಆಗಿ ಹೇಳಿದ ರಿಷಿ.
ಮಹೇಂದ್ರ ರಾಜಿನಾಮೆ ನೀಡಿ ಗೌತಮ್ ಜೊತೆ ಮನೆಯಲ್ಲಿ ಕೇರಮ್ ಆಡುತ್ತಿದ್ದ. ಜಗತಿ ನೇರವಾಗಿ ಅಲ್ಲಿಗೆ ಎಂಟ್ರಿ ಕೊಟ್ಟಳು. ಮಾತನಾಡಬೇಕೆಂದು ಮಹೇಂದ್ರನನ್ನು ಕರೆದುಕೊಂಡು ಹೋದಳು. ಜಗತಿ ಮನೆ ಬಾಗಿಲಿಗೆ ಬಂದಿದ್ದು ನೋಡಿ ದೇವಯಾನಿ ಶಾಕ್ ಆದಳು. ತಲೆಕೆಡಿಸಿಕೊಳ್ಳದ ಜಗತಿ ಪತಿಯನ್ನು ಕರೆದುಕೊಂಡು ಹೊರಟಳು. ರಾಜಿನಾಮೆ ನೀಡಿದ್ದೇಕೆ ಎಂದು ಪತಿಗೆ ಕ್ಲಾಸ್ ತೆಗೆದುಕೊಂಡಳು. ಆದರೆ ಮಹೇಂದ್ರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ. ಜಗತಿ ಎಷ್ಟೇ ಕೇಳಿಕೊಂಡರೂ ತನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಮಹೇಂದ್ರ ಕೂಡ ಖಡಕ್ ಆಗಿ ಹೇಳಿದ.
ಇತ್ತ ದೇವಯಾನಿ ರಿಷಿ ಮುಂದೆ ತನ್ನ ನಾಟಕ ಶುರು ಮಾಡಿಕೊಂಡಿದ್ದಳು. ಜಗತಿ ಮನೆ ಮುಂದೆಯೇ ಬಂದಿದ್ದಳು, ನೋಡಿದವರು ಏನು ಹೇಳುತ್ತಾರೋ, ನಿನ್ನಿಂದ ಮಹೇಂದ್ರನ ದೂರ ಮಾಡುವ ಭಯ ಕಾಡ್ತಿದೆ ಎಂದು ರಿಷಿ ತಲೆಗೆ ಹುಳ ಬಿಟ್ಟಳು. ದೊಡ್ಡಮ್ಮನ ಮಾತಿನಿಂದ ಮತ್ತಷ್ಟು ತಲೆಕೆಡಿಸಿಕೊಂಡ ರಿಷಿ ಹಾಗೆಲ್ಲ ಏನು ಹಾಗಲ್ಲ ಎಂದು ಸಮಾಧಾನ ಹೇಳಿದ. ಅಷ್ಟರಲ್ಲೇ ಮಹೇಂದ್ರ ವಸುಧರಾಳನ್ನು ಮನೆಗೆ ಕರೆದುಕೊಂಡು ಬಂದ. ವಸು ಮನೆಗೆ ಬಂದಿದ್ದು ನೋಡಿ ರಿಷಿಗೆ ಶಾಕ್ ಆಯಿತು. ಯಾಕೆ ಬಂದಿದ್ದು ಎಂದು ರಿಷಿ ವಸುನ ಕೇಳಿದ. ಮಹೇಂದ್ರ ಸರ್‌ನ ಕೇಳಬೇಕೆಂದು ವಸು ಹೇಳಿದಳು. ಏನ್ ನಡೀತಿದಿ ಎಂದು ರಿಷಿ ತಲೆಕೆಡಿಸಿಕೊಂಡ. ವಸು ರಿಷಿ ಸರ್ ಮನೆಗೆ ಎಂಟ್ರಿ ಕೊಟ್ಟಿದ್ದೇಕೆ? ಮಹೇಂದ್ರ ತನ್ನ ರಾಜಿನಾಮೆ ನಿರ್ಧಾರ ಕೈಬಿಡುತ್ತಾನಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.