ಬಾಲಿವುಡ್ ನಟಿ ಆಥಿಯಾ ಶೆಟ್ಟಿ (Athiya Shetty) ಹಾಗೂ ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ (KL Rahul) ಇಬ್ಬರೂ ರಿಲೇಶನ್ಶಿಪ್ನಲ್ಲಿದ್ದು ಕೆಲವು ವರ್ಷಗಳು ಕಳೆದಿವೆ. ಇಬ್ಬರೂ ಸಾಕಷ್ಟು ಬಾರಿ ಸುತ್ತಾಟ ನಡೆಸಿದ್ದಾರೆ. ಈ ವಿಚಾರದಲ್ಲಿ ಅವರು ಮುಚ್ಚುಮರೆ ಮಾಡುತ್ತಿಲ್ಲ. ಐಪಿಎಲ್ನಲ್ಲಿ ಲಖನೌ ತಂಡವನ್ನು ರಾಹುಲ್ ಮುನ್ನಡೆಸುತ್ತಿದ್ದಾರೆ. ಈ ಪಂದ್ಯ ನೋಡೋಕೆ ಆಥಿಯಾ ಹಾಗೂ ಅವರ ತಂದೆ ಸುನೀಲ್ ಶೆಟ್ಟಿ ಆಗಾಗ ಆಗಮಿಸುತ್ತಾರೆ. ಈಗ ಇವರ ಮದುವೆ ಬಗ್ಗೆ ಸುದ್ದಿಯೊಂದು ಹರಿದಾಡಿದೆ. ಡಿಸೆಂಬರ್ ವೇಳೆಗೆ ಈ ಜೋಡಿ ಮದುವೆ ಆಗಲಿದೆ ಎಂದು ವರದಿ ಆಗಿದೆ. ಆದರೆ, ಆಥಿಯಾ ಆಪ್ತರು ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ.
ಆಥಿಯಾ ಹಾಗೂ ರಾಹುಲ್ 2019ರಲ್ಲಿ ಪರಸ್ಪರ ಭೇಟಿ ಆದರು. ಮ್ಯೂಚುವಲ್ ಫ್ರೆಂಡ್ಸ್ ಮೂಲಕ ಇವರು ಪರಿಚಯಗೊಂಡರು ಎನ್ನಲಾಗಿದೆ. ನಂತರ ಇವರ ನಡುವೆ ಗೆಳೆತನ ಮೂಡಿತ್ತು. ಬಳಿಕ ಈ ಗೆಳೆತನ ಪ್ರೀತಿಗೆ ತಿರುಗಿತು. ನಂತರ ಇಬ್ಬರೂ ಸುತ್ತಾಡೋಕೆ ಆರಂಭಿಸಿದರು. ಇವರ ಪ್ರೀತಿಗೆ ಆಥಿಯಾ ತಂದೆ ಬೆಂಬಲವೂ ಇದೆ. ಸುನೀಲ್ ಶೆಟ್ಟಿ ಕೂಡ ಅನೇಕ ಬಾರಿ ಈ ಜೋಡಿಯನ್ನು ಬೆಂಬಲಿಸಿ ಮಾತನಾಡಿದ್ದಿದೆ. ಈಗ ಆಥಿಯಾ ಹಾಗೂ ರಾಹುಲ್ ಮದುವೆ ಸುದ್ದಿ ಹರಿದಾಡುತ್ತಿದೆ.
ಡಿಸೆಂಬರ್ ವೇಳೆಗೆ ಆಥಿಯಾ ಹಾಗೂ ರಾಹುಲ್ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ರಾಹುಲ್ ಕರ್ನಾಟಕದವರು. ಸುನೀಲ್ ಶೆಟ್ಟಿ ಮೂಲ ಮಂಗಳೂರು. ಈ ಕಾರಣಕ್ಕೆ ದಕ್ಷಿಣ ಭಾರತದ ಶೈಲಿಯಲ್ಲೇ ಮದುವೆ ನಡೆಯಲಿದೆ ಎನ್ನಲಾಗಿದೆ. ವಿವಾಹ ಕಾರ್ಯ ಎಲ್ಲಿ ನಡೆಯಲಿದೆ ಎಂಬ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ.
ಆದರೆ ಕೆಲ ವರದಿಗಳು ಇದನ್ನು ಅಲ್ಲಗಳೆದಿದೆ. ‘ಇದು ಸತ್ಯವಲ್ಲ. ಈ ವರ್ಷ ಅವರ ಮದುವೆ ನಡೆಯುತ್ತಿಲ್ಲ. ಆಥಿಯಾ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ವರ್ಷದ ಮಧ್ಯಂತರದಲ್ಲಿ ಇದರ ಕೆಲಸಗಳು ಆರಂಭವಾಗಲಿದೆ. ಒಂದು ಒಟಿಟಿ ಸಿನಿಮಾ ಮತ್ತೊಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ರಾಹುಲ್ ವಿಶ್ವಕಪ್ಗೆ ಸಿದ್ಧರಾಗುತ್ತಿದ್ದಾರೆ. ಅದಕ್ಕೂ ಮೊದಲು ಹಲವು ಪಂದ್ಯಗಳನ್ನು ಅವರು ಆಡಲಿದ್ದಾರೆ. ಅವರಿಗೆ ಮದುವೆ ಆಗೋಕೆ ಸಮಯವೇ ಇಲ್ಲ’ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಥಿಯಾ ಶೆಟ್ಟಿ ಇತ್ತೀಚೆಗೆ ದುಬಾರಿ ಬೆಲೆಯ ಕಾರು ಖರೀದಿ ಮಾಡಿದ್ದರು. ಆಥಿಯಾ ಶೆಟ್ಟಿ Audi Q7 ಖರೀದಿ ಮಾಡಿದ್ದಾರೆ. ಎಸ್ಯುವಿ ಮಾದರಿಯ ಕಾರು ಇದಾಗಿದ್ದು, ಇದರ ಎಕ್ಸ್ ಶೋ ರೂಂ ಬೆಲೆ, 80 ಲಕ್ಷ ರೂಪಾಯಿ ಇದೆ. ಆನ್ ರೋಡ್ ಬೆಲೆ ಸುಮಾರು ಒಂದು ಕೋಟಿ ರೂಪಾಯಿ ಆಗಲಿದೆ. ಆಥಿಯಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.
ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಆಥಿಯಾ ಶೆಟ್ಟಿ; ಇಲ್ಲಿವೆ ಚಿತ್ರಗಳು