ಲತಾ ಮಂಗೇಶ್ಕರ್ (Latha Mangeshkar) ಅವರು 2022ರಲ್ಲಿ ನಮ್ಮನ್ನು ಅಗಲಿದರು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇಂದು (ಸೆಪ್ಟೆಂಬರ್ 28) ಲತಾ ಮಂಗೇಶ್ಕರ್ ಅವರ ಜನ್ಮದಿನ. ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಹಲವು ಅಪರೂಪದ ವಿಚಾರಗಳನ್ನು ಹುಡುಕಿ ತೆಗೆಯಲಾಗುತ್ತಿದೆ. ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಎಂದು ಕೂಡ ಕರೆಯಲಾಗುತ್ತಿತ್ತು. ಅವರ ಕುರಿತ ಅಪರೂಪದ ವಿಚಾರಗಳು.
ಲತಾ ಮಂಗೇಶ್ಕರ್ ಅವರ ತಂದೆ ರಂಗಭೂಮಿ ತಂಡವೊಂದನ್ನು ಕಟ್ಟಿದ್ದರು. ಇದರ ಜೊತೆ ಲತಾ ಬೆಳೆದರು. ಈ ಕಾರಣದಿಂದ ಅವರಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಯಿತು. ಆ ಬಳಿಕ ಅವರು ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡರು.
ಲತಾ ಮಂಗೇಶ್ಕರ್ ಅವರು ಸಿನಿಮಾಗಾಗಿ ಹಾಡಿದ ಮೊದಲ ಸಾಂಗ್ ‘ನಾಚು ಯಾ..’. ಮರಾಠಿ ಸಿನಿಮಾ ‘ಕಿತಿ ಹಾಸಲ್’ ಚಿತ್ರದ ಹಾಡು ಇದು. 1942ರಲ್ಲಿ ಸಿನಿಮಾ ರಿಲೀಸ್ ಆಯಿತು. ಆದರೆ, ಈ ಹಾಡನ್ನು ಸಿನಿಮಾದಿಂದ ತೆಗೆಯಲಾಯಿತು.
ಲತಾ ಮಂಗೇಶ್ಕರ್ ಅವರು ಹಾಡೊಂದನ್ನು ರೆಕಾರ್ಡ್ ಮಾಡುವಾಗ ಮೂರ್ಛೆ ಹೋಗಿದ್ದರು. ಅಂದಿನ ಕಾಲದಲ್ಲಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಎಸಿ ಇರುತ್ತಿರಲಿಲ್ಲ. ಇರುವ ಒಂದು ಫ್ಯಾನ್ನ ರೆಕಾರ್ಡಿಂಗ್ ಸಂದರ್ಭದಲ್ಲಿ ಆಫ್ ಮಾಡಲಾಗುತ್ತಿತ್ತು. ತಾಪಮಾನ ಹೆಚ್ಚಾಗಿ ಉಸಿರಾಡಲು ಆಗದೇ ಅವರು ಮೂರ್ಛೆ ಹೋಗಿದ್ದರು.
ತಾವೇ ಹಾಡಿದ ಹಾಡನ್ನು ಲತಾ ಅವರು ಎಂದಿಗೂ ಕೇಳುವುದಿಲ್ಲ. ಇದಕ್ಕೆ ಕಾರಣವೂ ಇದೆ. ‘ನಾನು ಹಾಡಿದ ಹಾಡನ್ನು ಕೇಳಿದರೆ ನನಗೆ ಸಾಕಷ್ಟು ತಪ್ಪುಗಳು ಕಾಣಿಸುತ್ತವೆ’ ಎಂದು ಲತಾ ಹೇಳಿದ್ದರು.
ಲತಾ ಅವರ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್ ಎಂದರೆ ಅದು ಮದನ್ ಮೋಹನ್. ‘ಅವರು ನನಗೆ ಸಹೊದರ ಇದ್ದಂತೆ’ ಎಂದು ಲತಾ ಹೇಳಿಕೊಂಡಿದ್ದರು.
ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಜನ್ಮದಿನ; ಗಾನ ಕೋಗಿಲೆಗೆ ಕೋಟ್ಯಂತರ ಅಭಿಮಾನಿಗಳ ನಮನ
ಲತಾ ಅವರು ರಾಜ್ಯಸಭಾ ಸದಸ್ಯೆ ಆಗಿದ್ದರು. 1999ರಿಂದ 2005ರವರೆಗೆ ಲತಾ ಅವರು ರಾಜ್ಯಸಭಾ ಸದಸ್ಯೆ ಆಗಿ ಸೇವೆ ಸಲ್ಲಿಸಿದ್ದರು.
ಲತಾ ಮಂಗೇಶ್ಕರ್ ಅವರು ಕೊನೆಯದಾಗಿ ರೆಕಾರ್ಡ್ ಮಾಡಿದ್ದು ಮಾರ್ಚ್ 30, 2019ರಲ್ಲಿ. ‘ಸೌಗಂಧ್ ಮುಜೆ ಇಸ್ ಮಿಟ್ಟೀ ಕಿ’ ಅವರು ರೆಕಾರ್ಡ್ ಮಾಡಿದ ಕೊನೆಯ ಹಾಡು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ