ಲತಾ ಮಂಗೇಶ್ಕರ್ ಅವರ ಕೊನೆಯ ಆಸೆಯನ್ನು ಈಡೇರಿಸಿದ ಕುಟುಂಬ; ಏನದು?

|

Updated on: Oct 10, 2023 | 1:02 PM

ಲತಾ ಮಂಗೇಶ್ಕರ್ ಅವರು ಸಾಯುವುದಕ್ಕೂ ಮೊದಲು ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಲಕ್ಷ ರೂಪಾಯಿ ದೇಣಿಗೆ ನೀಡಲು ಯೋಜಿಸಿದ್ದರು. ಅದನ್ನು ಅವರು ವಿಲ್​ನಲ್ಲೂ ಬರೆದು ಇಟ್ಟಿದ್ದರು. ಅವರ ಆಸೆಯಂತೆ ಲತಾ ಮಂಗೇಶ್ಕರ್ ಅವರ ಕುಟುಂಬವು ತಿರುಪತಿ ದೇವಸ್ಥಾನಕ್ಕೆ ಲತಾ ಪರವಾಗಿ 10 ಲಕ್ಷ ರೂ. ನೀಡಿದೆ.

ಲತಾ ಮಂಗೇಶ್ಕರ್ ಅವರ ಕೊನೆಯ ಆಸೆಯನ್ನು ಈಡೇರಿಸಿದ ಕುಟುಂಬ; ಏನದು?
ಲತಾ
Follow us on

ಲತಾ ಮಂಗೇಶ್ಕರ್ (Lata Mangeshkar) ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ನಮ್ಮನ್ನು ಅವರು ಅಗಲಿದ್ದರೂ ಹಾಡುಗಳ ಮೂಲಕ ಅವರು ಸದಾ ಜೀವಂತ. ಅವರು ಇಲ್ಲ ಎನ್ನುವ ನೋವು ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ಲತಾ ಮಂಗೇಶ್ಕರ್ ಅವರು ಮೃತಪಟ್ಟು ವರ್ಷದ ಮೇಲಾಗಿದೆ. ಈಗ ಅವರ ಕೊನೆಯ ಆಸೆಯನ್ನು ಕುಟುಂಬದವರು ನೆರವೇರಿಸಿದ್ದಾರೆ. ಈ ವಿಚಾರವನ್ನು ಕುಟುಂಬದವರೇ ತಿಳಿಸಿದ್ದಾರೆ.

ಲತಾ ಮಂಗೇಶ್ಕರ್ ಅವರು ಸಾಯುವುದಕ್ಕೂ ಮೊದಲು ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಲಕ್ಷ ರೂಪಾಯಿ ದೇಣಿಗೆ ನೀಡಲು ಯೋಜಿಸಿದ್ದರು. ಅದನ್ನು ಅವರು ವಿಲ್​ನಲ್ಲೂ ಬರೆದು ಇಟ್ಟಿದ್ದರು. ಅವರ ಆಸೆಯಂತೆ ಲತಾ ಮಂಗೇಶ್ಕರ್ ಅವರ ಕುಟುಂಬವು ತಿರುಪತಿ ದೇವಸ್ಥಾನಕ್ಕೆ ಲತಾ ಪರವಾಗಿ 10 ಲಕ್ಷ ರೂ. ನೀಡಿದೆ.

ಲತಾ ಮಂಗೇಶ್ಕರ್ ಅವರು ವೆಂಕಟೇಶ್ವರ ಸ್ವಾಮಿಯ ಮಹಾನ್ ಭಕ್ತರಾಗಿದ್ದರು. ಈ ಹಿಂದೆ ಅವರು ವೆಂಟೇಶ್ವರ ಸ್ವಾಮಿಗಾಗಿ ಅನೇಕ ಹಾಡುಗಳನ್ನು ಹಾಡಿದ್ದರು. ಇದೀಗ ಅವರ ಕುಟುಂಬ ಸದಸ್ಯರು ಟಿಟಿಡಿಗೆ ಪತ್ರ ಬರೆದಿದ್ದು, ಲತಾ ಮಂಗೇಶ್ಕರ್ ಅವರ ಪರವಾಗಿ 10 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದೇವೆ ಎಂದು ಹೇಳಿದೆ.

ಲತಾ ಮಂಗೇಶ್ಕರ್ ಅವರು ಸಾಯುವುದಕ್ಕೂ ಮೊದಲು ಒಂದಷ್ಟು ಭಜನೆಗಳನ್ನು ರೆಕಾರ್ಡ್ ಮಾಡಿಟ್ಟಿರುವ ವಿಚಾರ ಇತ್ತೀಚೆಗೆ ರಿವೀಲ್ ಆಯಿತು. ರಾಮ ಮಂದಿರ ಉದ್ಘಾಟನೆ ವೇಳೆ ಈ ಭಜನೆಗಳು ಪ್ರಸಾರ ಕಾಣಬೇಕು ಎಂಬುದು ಅವರ ಕೊನೆಯ ಆಸೆ ಆಗಿತ್ತು. 2024ರ ಜನವರಿ ವೇಳೆಗೆ ರಾಮ ಮಂದಿರ ಉದ್ಘಾಟನೆ ಆಗಲಿದೆ. ಆ ಸಂದರ್ಭದಲ್ಲಿ ಲತಾ ಮಂಗೇಶ್ಕರ್​ ಅವರು ಹಾಡಿದ ಭಜನೆಗಳು ಪ್ರಸಾರ ಕಾಣುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗಾಗಿ ವಿಶೇಷ ಹಾಡುಗಳನ್ನು ರೆಕಾರ್ಡ್ ಮಾಡಿಟ್ಟಿದ್ದ ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಅವರು 2022ರ ಫೆಬ್ರವರಿ ತಿಂಗಳಲ್ಲಿ ಮೃತಪಟ್ಟರು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಮೃತಪಟ್ಟ ಬಳಿಕ ಅನೇಕರು ಸಂತಾಪ ಸೂಚಿಸಿದರು. ಅವರನ್ನು ಕಳೆದುಕೊಂಡಿದ್ದು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ