Vijay Deverakonda: ಕನಸಿನ ಹುಡುಗಿ ಮತ್ತು ಕ್ರಶ್​ ಬಗ್ಗೆ ಓಪನ್​ ಆಗಿ ಮಾತನಾಡಿದ ವಿಜಯ್​ ದೇವರಕೊಂಡ

| Updated By: ಮದನ್​ ಕುಮಾರ್​

Updated on: Aug 25, 2022 | 7:55 AM

Vijay Deverakonda Interview: ‘ಲೈಗರ್​’ ಸಿನಿಮಾ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಚಿತ್ರದ ಬಿಡುಗಡೆಯ ಹೊಸ್ತಿಲಿನಲ್ಲಿ ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯ್​ ದೇವರಕೊಂಡ ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಖ್ಯಾತ ನಟ ವಿಜಯ್​ ದೇವರಕೊಂಡ (Vijay Deverakonda) ಅವರನ್ನು ಕಂಡರೆ ಹುಡುಗಿಯರಿಗೆ ಸಖತ್ ಇಷ್ಟ. ದೇಶಾದ್ಯಂತ ಅವರಿಗೆ ಮಹಿಳಾಭಿಮಾನಿಗಳು ಇದ್ದಾರೆ. ಅವರೆಲ್ಲರೂ ತಮ್ಮನ್ನು ಯಾಕೆ ಇಷ್ಟಪಡುತ್ತಾರೆ ಎಂಬುದು ನಿಜಕ್ಕೂ ತಿಳಿದಿಲ್ಲ ಎಂದು ದೇವರಕೊಂಡ ಹೇಳಿದ್ದಾರೆ. ‘ಕನಸಿನ ಹುಡುಗಿಯ ಮುಖ ಸರಿಯಾಗಿ ಕಾಣುತ್ತಿಲ್ಲ’ ಎಂದು ಅವರು ಹೇಳಿದ್ದಾರೆ. ಮೂರನೇ ಕ್ಲಾಸ್​ನಲ್ಲೇ ಒಬ್ಬರ ಮೇಲೆ ಕ್ರಶ್​ ಆಗಿತ್ತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ‘ಲೈಗರ್​’ (Liger) ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿ ‘ಟಿವಿ9 ಕನ್ನಡ’ಕ್ಕೆ ನೀಡಿದ ಎಕ್ಸ್​ಕ್ಲೂಸೀವ್​ ಸಂದರ್ಶನದಲ್ಲಿ ವಿಜಯ್​ ದೇವರಕೊಂಡ ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

 

Published on: Aug 25, 2022 07:55 AM