Liger: ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಚಿತ್ರಕ್ಕೆ ಹೈಪ್ ಹೆಚ್ಚಲು ಇಲ್ಲಿದೆ 5 ಕಾರಣ
Vijay Deverakonda | Ananya Panday: ಹಾಡು ಮತ್ತು ಟ್ರೇಲರ್ ಮೂಲಕ ಸದ್ದು ಮಾಡಿದ ‘ಲೈಗರ್’ ಸಿನಿಮಾ ಇಂದು (ಆಗಸ್ಟ್ 25) ಬಿಡುಗಡೆ ಆಗಿದೆ. ವಿಜಯ್ ದೇವರಕೊಂಡ ನಟನೆಯ ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ.
ಅದ್ದೂರಿ ಬಜೆಟ್ನಲ್ಲಿ ‘ಲೈಗರ್’ ಸಿನಿಮಾ (Liger Movie) ಮೂಡಿಬಂದಿದೆ. ಈ ಚಿತ್ರವನ್ನು ನೋಡಬೇಕು ಎಂದು ಅಭಿಮಾನಿಗಳು ಸಾಕಷ್ಟು ದಿನದಿಂದ ತುದಿಗಾಲಿನಲ್ಲಿ ನಿಂತು ಕಾದಿದ್ದರು. ಇಂದು (ಆಗಸ್ಟ್ 25) ಎಲ್ಲೆಡೆ ‘ಲೈಗರ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ವಿಜಯ್ ದೇವರಕೊಂಡ (Vijay Deverakonda) ವೃತ್ತಿಜೀವನದಲ್ಲಿ ಈ ಚಿತ್ರ ತುಂಬ ಡಿಫರೆಂಟ್ ಆಗಿದೆ. ಪುರಿ ಜಗನ್ನಾಥ್ ಅವರು ಬಹಳ ಕಾಳಜಿ ವಹಿಸಿ ನಿರ್ದೇಶನ ಮಾಡಿದ್ದಾರೆ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾ ಬಗ್ಗೆ ಭರ್ಜರಿ ಹೈಪ್ ಹೆಚ್ಚಿದೆ. ಇಷ್ಟೊಂದು ಕ್ರೇಜ್ ಸೃಷ್ಟಿ ಆಗಲು ಕಾರಣವಾದ 5 ಅಂಶಗಳು ಬಗ್ಗೆ ಇಲ್ಲಿದೆ ವಿವರ.
ಕಾರಣ 1: ಬಾಕ್ಸರ್ ಆದ ವಿಜಯ್ ದೇವರಕೊಂಡ
ನಟ ವಿಜಯ್ ದೇವರಕೊಂಡ ಅವರು ‘ಲೈಗರ್’ ಚಿತ್ರದಲ್ಲಿ ಬಾಕ್ಸರ್ ಪಾತ್ರ ಮಾಡಿದ್ದಾರೆ. ಟ್ರೇಲರ್ನಲ್ಲಿ ಅವರ ಪಾತ್ರದ ಝಲಕ್ ತೋರಿಸಲಾಗಿದೆ. ಇಷ್ಟು ದಿನ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅವರನ್ನು ಬಾಕ್ಸರ್ ಅವತಾರದಲ್ಲಿ ನೋಡುವ ಅವಕಾಶ ಈ ಸಿನಿಮಾದಿಂದ ಸಿಕ್ಕಿದೆ.
ಕಾರಣ 2: ಮೈಕ್ ಟೈಸನ್ ಆರ್ಭಟ
ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಅವರು ‘ಲೈಗರ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರ ಪಾತ್ರ ಹೇಗಿದೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಕಾರಣ 3: ಅದ್ದೂರಿ ಮೇಕಿಂಗ್
ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ‘ಲೈಗರ್’ ಸಿನಿಮಾ ಮೂಡಿಬಂದಿದೆ. ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಮುಂತಾದವರು ಜೊತೆಗೂಡಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ವಿದೇಶದಲ್ಲೂ ಇದರ ಚಿತ್ರೀಕರಣ ನಡೆದಿದೆ.
ಕಾರಣ 4: ಭರ್ಜರಿ ಪ್ರಚಾರ
ಪ್ರಚಾರದ ವಿಚಾರದಲ್ಲಿ ‘ಲೈಗರ್’ ಚಿತ್ರತಂಡ ಕಿಂಚಿತ್ತೂ ರಾಜಿ ಮಾಡಿಕೊಂಡಿಲ್ಲ. ದೇಶದ ಎಲ್ಲ ಪ್ರಮುಖ ನಗರಗಳಿಗೂ ತೆರಳಿ ಪ್ರಮೋಷನ್ ಮಾಡಲಾಗಿದೆ. ಹೋದಲ್ಲೆಲ್ಲ ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ.
ಕಾರಣ 5: ಸೌತ್ ಸಿನಿಮಾ ಮೇಲೆ ನಿರೀಕ್ಷೆ
ಬಾಲಿವುಡ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುತ್ತಿವೆ. ಆದರೆ ಈ ನಡುವೆ ದಕ್ಷಿಣ ಭಾರತದ ಹೈ ಬಜೆಟ್ ಸಿನಿಮಾಗಳು ಗಮನ ಸೆಳೆಯುತ್ತಿವೆ. ಹಾಗಾಗಿ ಹಿಂದಿ ಭಾಷಿಕ ರಾಜ್ಯಗಳಲ್ಲಿ ‘ಲೈಗರ್’ ಸಿನಿಮಾಗೆ ದೊಡ್ಡ ಮಟ್ಟದ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ಇಂದು (ಆಗಸ್ಟ್ 25) ರಾತ್ರಿಯಿಂದ ಹಿಂದಿ ವರ್ಷನ್ ಶೋ ಆರಂಭ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.