
ತೆಲುಗು ಸೂಪರ್ಸ್ಟಾರ್ ಮಹೇಶ್ ಬಾಬು (Mahesh Babu) ಹಾಗೂ ಕನ್ನಡದ ನಟಿ ಶ್ರೀಲೀಲಾ ಅಭಿನಯದ ‘ಗುಂಟೂರು ಖಾರಂ’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕೆ ಎಸ್. ಥಮನ್ ಅವರು ಸಂಗೀತ ಸಂಯೋಜನೆ ಮಾಡಿದ್ದರು. ‘ಕುರ್ಚಿ ಮಾಡತಾ ಪೆಟ್ಟಿ..’ ಹಾಡು ಸಖತ್ ಫೇಮಸ್ ಆಗಿದೆ. ಈ ಹಾಡನ್ನು ಎನ್ಬಿಎ ಗೇಮ್ನಲ್ಲಿ ಪ್ಲೇ ಮಾಡಲಾಗಿದೆ. ಈ ಮೂಲಕ ತೆಲುಗು ಹಾಡಿನ ಕಂಪು ಅಮೆರಿಕದಲ್ಲೂ ಹರಡಿದೆ.
ಅಮೆರಿಕದ ಹೌಸ್ಟನ್ ಟೊಯೊಟಾ ಸೆಂಟರ್ನಲ್ಲಿ ಎನ್ಬಿಎ ಗೇಮ್ ನಡೆಯುತ್ತಿತ್ತು. ಅಲ್ಲಿ ‘ಗುಂಟೂರು ಖಾರಂ’ ಸಿನಿಮಾದ ಹಾಡನ್ನು ಪ್ಲೇ ಮಾಡಲಾಗಿದೆ. ಈ ಸಿನಿಮಾದ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಿಂದ ಮಹೇಶ್ ಬಾಬು ಖ್ಯಾತಿ ಹೆಚ್ಚುವಂತೆ ಆಗಿದೆ. ವಿದೇಶದಲ್ಲಿ ಮಹೇಶ್ ಬಾಬು ಹಾಡು ಸದ್ದು ಮಾಡುತ್ತಿರುವುದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ಕುರ್ಚಿ ಮಡತಾ ಪೆಟ್ಟಿ’ ಹಾಡಿಗೆ ಎಸ್ಎಸ್ ಥಮನ್ ಸಂಗೀತ ಸಂಯೋಜನೆ ಮಾಡಿದ್ದರು. ಅವರ ಹಾಡು ಗಮನ ಸೆಳೆದಿದೆ. ತ್ರಿವಿಕ್ರಂ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಯೂಟ್ಯೂಬ್ನಲ್ಲಿ ಈ ಹಾಡು 15 ಕೋಟಿಗೂ ಅಧಿಕ ಜನರು ಈ ಹಾಡನ್ನು ವೀಕ್ಷಣೆ ಮಾಡಿದ್ದಾರೆ.
‘ಗುಂಟೂರು ಖಾರಂ’ ಸಿನಿಮಾ 2024ರ ಜನವರಿ 12ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ. ಈ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಹಾಡಿನಲ್ಲಿ ಮಹೇಶ್ ಬಾಬು ಹಾಗೂ ಶ್ರೀಲೀಲಾ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ಜಗಪತಿ ಬಾಬು, ಪ್ರಕಾಶ್ ರಾಜ್, ಜಯರಾಮ್ ಮತ್ತು ಮೀನಾಕ್ಷಿ ಚೌಧರಿ ಈ ಸಿನಿಮಾದಲ್ಲಿ ನಟಿಸಿದ್ದರು.
ಇದನ್ನೂ ಓದಿ: ತಾವು ನಟಿಸಿದ ಸಿನಿಮಾಗಳಲ್ಲಿ ಈ ಮೂರು ಸಿನಿಮಾಗಳು ಬಹಳ ವಿಶೇಷವಂತೆ ಮಹೇಶ್ ಬಾಬುಗೆ
ಮಹೇಶ್ ಬಾಬು ಅವರು ರಾಜಮೌಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಭರ್ಜರಿ ಟ್ರೇನಿಂಗ್ ಪಡೆಯುತ್ತಿದ್ದಾರೆ. ಈ ಸಿನಿಮಾಗಾಗಿ ಅವರು ದೇಹದ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ