AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾವು ನಟಿಸಿದ ಸಿನಿಮಾಗಳಲ್ಲಿ ಈ ಮೂರು ಸಿನಿಮಾಗಳು ಬಹಳ ವಿಶೇಷವಂತೆ ಮಹೇಶ್ ಬಾಬುಗೆ

Mahesh Babu: ಮಹೇಶ್ ಬಾಬು ತಮ್ಮ 25 ವರ್ಷಗಳ ವೃತ್ತಿ ಜೀವನದಲ್ಲಿ ತಮಗೆ ಬಹಳ ಪ್ರಿಯವಾದ, ವಿಶೇಷವಾದ ಮೂರು ಸಿನಿಮಾಗಳು ಯಾವುವೆಂದು ಹೇಳಿದ್ದಾರೆ.

ತಾವು ನಟಿಸಿದ ಸಿನಿಮಾಗಳಲ್ಲಿ ಈ ಮೂರು ಸಿನಿಮಾಗಳು ಬಹಳ ವಿಶೇಷವಂತೆ ಮಹೇಶ್ ಬಾಬುಗೆ
ಮಂಜುನಾಥ ಸಿ.
|

Updated on: Mar 06, 2024 | 10:01 AM

Share

ಟಾಲಿವುಡ್ ಸ್ಟಾರ್ ಮಹೇಶ್ ಬಾಬು (Mahesh Babu) ಕಳೆದ 25 ವರ್ಷಗಳಿಂದಲೂ ಚಿತ್ರರಂಗದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಅದಕ್ಕೆ ಮುನ್ನ ಬಾಲನಟನಾಗಿಯೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. 2000 ರಲ್ಲಿ ಬಿಡುಗಡೆ ಆದ ‘ರಾಜಕುಮಾರುಡು’ ಸಿನಿಮಾ ಮೂಲಕ ಮಹೇಶ್ ಬಾಬು ಹೀರೋ ಆದರು. ಮಹೇಶ್ ಬಾಬು ನಾಯಕ ನಟನಾಗಿ 28 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ 28 ರಲ್ಲಿ ಸುಮಾರು 20 ಸಿನಿಮಾಗಳು ಸೂಪರ್ ಹಿಟ್. ಕೆಲವಂತೂ ಬ್ಲಾಕ್ ಬಸ್ಟರ್ ಸಿನಿಮಾಗಳು. ತಮ್ಮ 25 ವರ್ಷಗಳ ಸಿನಿ ಜರ್ನಿಯಲ್ಲಿ ತಾವು ನಟಿಸಿದ ಮೂರು ಸಿನಿಮಾಗಳು ಮಹೇಶ್ ಬಾಬುಗೆ ಬಹಳ ವಿಶೇಷವಂತೆ. ತಮ್ಮದೇ ಕೆಲವು ದೊಡ್ಡ ಬ್ಲಾಕ್ ಬಸ್ಟರ್​ ಸಿನಿಮಾಗಳನ್ನು ಸಹ ಮಹೇಶ್ ಬಾಬು ಗಣನೆಗೆ ತೆಗೆದುಕೊಂಡಿಲ್ಲ.

ಮಹೇಶ್ ಬಾಬು ನಾಯಕನಾಗಿ ನಟಿಸಿದ ಮೊದಲ ಐದು ಸಿನಿಮಾಗಳು ಸೂಪರ್ ಹಿಟ್ ಆದರೆ. ತಮ್ಮ ಸಿನಿಮಾ ಜರ್ನಿಯ ಆರಂಭದಲ್ಲಿ ನಟಿಸಿದ ‘ಮುರಾರಿ’ ಸಿನಿಮಾ ಮಹೇಶ್ ಬಾಬುಗೆ ಬಹಳ ವಿಶೇಷವಂತೆ. ‘ಮುರಾರಿ’ ಸಿನಿಮಾ ಆ ಕಾಲಕ್ಕೆ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು. ‘ಮುರಾರಿ’ಗೆ ಮುನ್ನ ಮಹೇಶ್ ಬಾಬು ‘ರಾಜಕುಮಾರುಡು’, ‘ಯುವರಾಜ’, ‘ವಂಶಿ’ ಸಿನಿಮಾಗಳಲ್ಲಿ ನಟಿಸಿದ್ದರು. ಈ ಮೂರು ಸಹ ಹಿಟ್ ಆಗಿದ್ದರು. ಆದರೆ ‘ಮುರಾರಿ’ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು.

ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಸರಳವಾದ ಹೆಸರು: ಆ ಎರಡರಲ್ಲಿ ಯಾವುದು ಅಂತಿಮ?

‘ಮುರಾರಿ’ ಬಳಿಕ ಮಹೇಶ್ ಬಾಬುಗೆ ಬಹಳ ಪ್ರಿಯವಾದ ಸಿನಿಮಾ ಎಂದರೆ ಅದು ‘ಪೋಕಿರಿ’. ಮಹೇಶ್ ಬಾಬು ಪ್ರಕಾರ ‘ಪೋಕಿರಿ’ ಸಿನಿಮಾ ಅವರನ್ನು ಸೂಪರ್ ಸ್ಟಾರ್ ಅನ್ನಾಗಿ ಮಾಡಿದ ಸಿನಿಮಾ ಅಂತೆ. ‘ಪೋಕಿರಿ’ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದ ಸಿನಿಮಾ. ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಿಗೆ ರೀಮೇಕ್ ಆದ ಸಿನಿಮಾ ‘ಪೋಕಿರಿ’. ಈ ಸಿನಿಮಾ ಮಹೇಶ್ ಬಾಬುಗೆ ಬಹಳ ವಿಶೇಷವಾದುದ್ದಂತೆ. ‘ಪೋಕಿರಿ’ ಬಳಿಕ ‘ಶ್ರೀಮಂತುಡು’ ಸಿನಿಮಾ ಸಹ ಮಹೇಶ್ ಬಾಬು ಪಾಲಿಗೆ ಬಹಳ ವಿಶೇಷವಾದುದಂತೆ. ಕೇವಲ ಮಾಸ್ ಕಮರ್ಶಿಯಲ್ ಸಿನಿಮಾಗಳನ್ನು ಮಾಡುತ್ತಿದ್ದ ಅವರು ಸಾಮಾಜಿಕ ಸಂದೇಶದ ಕಡೆಗೆ ಹೊರಳುವಂತೆ ಮಾಡಿದ ಸಿನಿಮಾ ‘ಶ್ರೀಮಂತುಡು’ ಹಾಗಾಗಿ ಅದು ಅವರಿಗೆ ಬಹಳ ಇಷ್ಟವಂತೆ.

ಮಹೇಶ್ ಬಾಬು ನಟಿಸಿರುವ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿರುವ ‘ಒಕ್ಕಡು’, ‘ಅತಡು’ ಸಿನಿಮಾಗಳನ್ನು ಮಹೇಶ್ ಬಾಬು ಗಣನೆಗೆ ತೆಗೆದುಕೊಂಡಿಲ್ಲ. ಇವುಗಳ ಹೊರತಾಗಿ ಭಿನ್ನ ರೀತಿಯ ಸಿನಿಮಾಗಳಾದ ‘ಅರ್ಜುನ್’, ‘ನಿಜಂ’, ‘ನಾನಿ’ ಸಿನಿಮಾಗಳನ್ನೂ ಸಹ ಮಹೇಶ್ ಬಾಬು ಹೆಸರಿಸಿಲ್ಲ. ‘ದೂಕುಡು’, ‘ಖಲೇಜ’ ಅಂತಹಾ ಸೂಪರ್ ಹಿಟ್ ಸಿನಿಮಾಗಳ ಹೆಸರನ್ನೂ ಸಹ ಮಹೇಶ್ ಬಾಬು ಹೇಳಿಲ್ಲ. ಮಹೇಶ್ ಬಾಬು ಪ್ರಸ್ತುತ ಎಸ್​ಎಸ್ ರಾಜಮೌಳಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಇಬ್ಬರ ವೃತ್ತಿ ಜೀವನದಲ್ಲಿಯೂ ಅತ್ಯಂತ ದೊಡ್ಡ ಬಜೆಟ್​ನ ಸಿನಿಮಾ ಇದಾಗಿರಲಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿದ್ದು, ಶೀಘ್ರವೇ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್​ನಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ