ಪುನೀತ್ ರಾಜ್ಕುಮಾರ್ ಬರ್ತ್ಡೇಗೆ ರಿಲೀಸ್ ಆಗಲಿದೆ ಅಪ್ಪು ಅಭಿಮಾನಿಯ ಸಿನಿಮಾ ಟ್ರೇಲರ್
‘ರತ್ನ’ ಚಿತ್ರವನ್ನು ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಾಯಕಿ ಪುನೀತ್ ರಾಜಕುಮಾರ್ ಫ್ಯಾನ್ ಆಗಿರುತ್ತಾಳೆ ಅನ್ನೋದು ವಿಶೇಷ. ಅಪ್ಪು ಅಭಿಮಾನಿಯ ಸುತ್ತ ಈ ಚಿತ್ರದ ಕಥೆ ಸಾಗಲಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಜನ್ಮದಿನ ಸಮೀಪಿಸಿದೆ. ಮಾರ್ಚ್ 17ರಂದು ಅದ್ದೂರಿಯಾಗಿ ಪುನೀತ್ ಜನ್ಮದಿನ ಆಚರಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ. ಅಂದು ಸಾಕಷ್ಟು ಸಾಮಾಜಿಕ ಕಾರ್ಯಗಳು ನಡೆಯಲಿವೆ. ಈ ಮಧ್ಯೆ ಪುನೀತ್ ಅಭಿಮಾನಿಯೊಬ್ಬರು ಕಥೆ ಇರುವ ಸಿನಿಮಾದ ಟ್ರೇಲರ್ನ ಮಾರ್ಚ್ 17ರಂದು ರಿಲೀಸ್ ಮಾಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಮೂಲಕ ಪುನೀತ್ ಮೇಲಿನ ಅಭಿಮಾನ ಮೆರೆಯಲು ತಂಡ ಮುಂದಾಗಿದೆ.
‘ರತ್ನ’ ಚಿತ್ರವನ್ನು ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಾಯಕಿ ಪುನೀತ್ ರಾಜಕುಮಾರ್ ಫ್ಯಾನ್ ಆಗಿರುತ್ತಾಳೆ ಅನ್ನೋದು ವಿಶೇಷ. ಅಪ್ಪು ಅಭಿಮಾನಿಯ ಸುತ್ತ ಈ ಚಿತ್ರದ ಕಥೆ ಸಾಗಲಿದೆ ಎಂದು ತಂಡ ಮಾಹಿತಿ ನೀಡಿದೆ.
‘ರತ್ನ’ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಪ್ರಮಾಣಪತ್ರ ನೀಡಿದೆ. ಹೀಗಾಗಿ, ಎಲ್ಲರೂ ಈ ಸಿನಿಮಾ ವೀಕ್ಷಿಸಬಹುದಾಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ ಬಸವರಾಜ್ ಬಳ್ಳಾರಿ. ಇದರ ಜೊತೆಗೆ ಗೀತರಚನೆ ಕೂಡ ಅವರದ್ದೇ. ಸತೀಶ್ ಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ್ ಗಂಗಾವತಿ ಛಾಯಾಗ್ರಹಣ ಸಿನಿಮಾಗೆ ಇದೆ. ನಾಗೇಂದ್ರ ಅರಸ್ ಅವರ ಸಂಕಲನ ಇರುವ ಈ ಚಿತ್ರಕ್ಕೆ ಮಂಜುನಾಥ್ ಎಂ ಹಾಗೂ ರಾಘವೇಂದ್ರ ಕರೂರ್ ಸಹ ನಿರ್ಮಾಪಕರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವಾಗಿ ಆಚರಣೆ: ಸಿದ್ದರಾಮಯ್ಯ
ಹರ್ಷಲ ಹನಿ ‘ರತ್ನ’ ಸಿನಿಮಾಗೆ ನಾಯಕಿ. ಇದಲ್ಲದೆ ವರ್ಧನ್, ಆನಂದ್ ಅಪ್ಪು, ನಾಗೇಂದ್ರ ಅರಸ್, ಬಾಲರಾಜ್ ಒಡೆಯರ್, ಸಾರಿಕಮ್ಮ, ಅಮಿತ್ ರಾವ್, ರಾಣಿ ಬಸವರಾಜ್, ರಾಮು ಕರೂರ್, ಸುಚಿತ್ ಚೌಹಾಣ್, ಮಂಜು ದೈವಜ್ಞ ಮುಂತಾದವರು ತಾರಾ ಬಳಗದಲ್ಲಿ ಇದ್ದಾರೆ.
ಮಾರ್ಚ್ 17ಕ್ಕೆ ‘ಜಾಕಿ’
ಮಾರ್ಚ್ 17ರಂದು ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಅವರ ನಟನೆಯ ‘ಜಾಕಿ’ ಸಿನಿಮಾ ಮಾರ್ಚ್ 17ರಂದು ಬಿಡುಗಡೆ ಆಗಲಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಭಾವನಾ ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ದುನಿಯಾ ಸೂರಿ ನಿರ್ದೇಶನ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ