ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಸ್ಪೂರ್ತಿ ದಿನವಾಗಿ ಆಚರಣೆ: ಸಿದ್ದರಾಮಯ್ಯ
Puneeth Rajkumar: ಪುನೀತ್ ರಾಜ್ಕುಮಾರ್ ಅವರ ಪ್ರತಿಮೆ ಅನಾವರಣ ಹಾಗೂ ಸಂಗ್ರಹ ಶಿಲ್ಪಗಳ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
”ಕರ್ನಾಟಕ ಕಂಡಂತ ಅಪರೂಪದ ವ್ಯಕ್ತಿತ್ವ ಪುನೀತ್ ರಾಜ್ಕುಮಾರ್ (Puneeth Rajkumar) ಅವರದ್ದು, ಬಹಳ ಎತ್ತರದ ನಟ ಆಗಿದ್ದರೂ ಸಹ ಸ್ವಲ್ಪವೂ ಅಹಂ ಇರ್ಲಿಲ್ಲ. ಸಮಾಜದಲ್ಲಿನ ಸಮಾನ್ಯ ಜನರು, ಬಡವರಿಗೆ ಸ್ಪಂದಿಸುತ್ತಿದ್ದಂತಹ ವ್ಯಕ್ತಿ. ಇಡೀ ಕರ್ನಾಟಕದಲ್ಲಿ ಇವರಷ್ಟು ಅಭಿಮಾನಿಗಳನ್ನು ಯಾರೂ ಪಡೆದುಕೊಂಡಿರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅಪ್ಪು ಮರಣ ಹೊಂದಿದಾಗ, ಪ್ರತಿಯೊಬ್ಬರ ಮನೆಯವರೂ ತಮ್ಮ ಮನೆಯ ಸದಸ್ಯನೇ ಅಗಲಿದಂತೆ ಭಾವಿಸಿದ್ದರು. ಕರ್ನಾಟಕದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಪುನೀತ್ ಅವರ ಭಾವ ಚಿತ್ರ ಇವೆ, ಅಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದರು. ಇನ್ನೊಬ್ಬ ಪುನೀತ್ ರಾಜ್ಕುಮಾರ್ ಅಂತ ವ್ಯಕ್ತಿ ನೋಡೋಕೆ ಕಷ್ಟ” ಎಂದರು ಸಿಎಂ ಸಿದ್ದರಾಮಯ್ಯ.
ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ಪುನೀತ್ ಪ್ರತಿಮೆ ಅನಾವರಣ ಹಾಗೂ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ಆಯೋಜಿಸಿದ್ದ ಪುನೀತ್ ರಾಜ್ಕುಮಾರ್ ಅವರು ಸಂಗ್ರಹಣೀಯ ಶಿಲ್ಪಗಳ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ” ರಾಜ್ ಕುಟುಂಬ ತುಂಬಾ ವಿನಯವಂತರು, ರಾಜ್ ಕುಟುಂಬ ಮಾನವೀಯತೆ ಇರುವಂತಹ ವ್ಯಕ್ತಿಗಳು ಎಲ್ಲರು. ಪುನೀತ್ ರಾಜ್ ಕುಮಾರ್ ಅವರಿಗಿಂತ ಒಂದು ಹೆಜ್ಜೆಮುಂದೆ ಹೋಗಿದ್ದರು. ಪುನೀತ್ ನಿಧನ ಹೊಂದಿದಾಗ ಅವರ ಜನಪ್ರಿಯತೆ ನೋಡಿ, ರಾಜ್ ಕುಮಾರ್ ಅವರಿಗಿಂತಲೂ ಜನಪ್ರಿಯತೆ ಹೆಚ್ಚಿತ್ತು ಅನ್ನಿಸಿತು. ಪ್ರತಿ ಊರಿನಲ್ಲಿ ಜನ ಕಟೌಟ್ಗಳನ್ನು ಹಾಕಿದ್ದನ್ನು ನೋಡಿದಾಗ ಹೆಮ್ಮೆ ಅನ್ನಿಸಿತು. ಪುನೀತ್ ಬದುಕಿದ್ದರೆ ಬಹುಶಃ ಇನ್ನೂ ಎತ್ತರಕ್ಕೆ ಬೆಳೀತಿದ್ದರು. ಈ ಪ್ರತಿಮೆ ಅನಾವರಣ ಇಡೀ ಜಗತ್ತಿನಲ್ಲಿರೋ ಕನ್ನಡಿಗರು ನೋಡ್ತಿರೋದು ಸಂತೋಷದ ವಿಚಾರ” ಎಂದರು.
ಇದನ್ನೂ ಓದಿ: ಗರುಡ ಪುರಾಣ ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್
”ಪುನೀತ್ ಎಲ್ಲರ ಮನೆ ಮಗ ಅವರನ್ನು ಗೌರವಿಸದೇ ಇರೋರೇ ಇಲ್ಲ ಎಲ್ಲರೂ ಗೌರವಿಸ್ತಾರೆ. ಈ ಪ್ರತಿಮೆ ಅತ್ಯಂತ ಸಂತೋಷದಿಂದ ಅನವರಣ ಮಾಡಿದ್ದೇನೆ, ಅಶ್ವಿನಿ ಅವರ ಮನವಿಗೆ ಸ್ಪಂದಿಸ್ತಿನಿ ರಾಜ್ ಕುಮಾರ್ ಅವರ ಸ್ಮಾರಕ ಪುನರಾಭಿವೃದ್ದಿ ಮಾಡೋ ಮನವಿ ಅದಕ್ಕೆ ಸ್ಪಂದಿಸ್ತಿವಿ, ನನಗೆ ಯಾವಾಗ್ಲೂ ತುಂಬಾ ಗೌರವ ಕೊಡ್ತಿದ್ರು. ನಮ್ಮನೆಯವರಿಗಿಂತಲೂ ಹೆಚ್ಚು ಗೌರವ ಕೊಡ್ತಿದ್ರು, ಪುನೀತ್ ಸಾವು ಕರುನಾಡಿಗೆ ಆಗಿರೋ ನಷ್ಟ, ಆನಷ್ಟ ತುಂಬಲಿಕ್ಕೆ ಸಾಧ್ಯವೇಇಲ್ಲ , ಮಾರ್ಚ್ 17 ಪುನೀತ್ ಹುಟ್ಟುಹಬ್ಬದ ದಿನವನ್ನು ಸ್ಪೂರ್ತಿ ದಿನ ಆಚರಣೆ ಮಾಡ್ತಿವಿ” ಎಂದರು.
ಸಚಿವ ಭೈರತಿ ಬಸವರಾಜು ಸಹ ಪುನೀತ್ ರಾಜ್ಕುಮಾರ್ ಅವರ ಕುರಿತು ಮಾತನಾಡಿ, ”ಅಪ್ಪು ಅವರ ಅಗಲಿಕೆಯನ್ನು ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾನು ಹಾಗೂ ಅಪ್ಪು ಒಂದೇ ವಯಸ್ಸಿನವರೇ ಆದರೂ ನನ್ನ ಅಣ್ಣ ಎಂದೇ ಕರೆಯುತ್ತಿದ್ದರು. ಅಷ್ಟು ವಿನಯವಂತರಾಗಿದ್ದರು ಅಪ್ಪು. ಪುನೀತ್ ಅವರ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದುವರೆಸಿಕೊಂಡು ಹೋಗುತ್ತಿರುವುದು ಖುಷಿಯ ವಿಚಾರ” ಎಂದರು. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಮಂಗಳಾ ರಾಘವೇಂದ್ರ, ಯುವರಾಜ್ಕುಮಾರ್ ಉಪಸ್ಥಿತರಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ