ಉದಯ್ನಿಧಿ ಗೆಳೆತನದಿಂದ ಐಶಾರಾಮಿ ಜೀವನ, ದುಬೈನಲ್ಲಿ ಪ್ರಾಪರ್ಟಿ: ಸತ್ಯ ಬಿಚ್ಚಿಟ್ಟ ನಟಿ
Nivetha Pethuraj: ನಟಿ ನಿವೇತಾ ಪೇತುರಾಜ್ ದುಬೈನಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಇದಕ್ಕೆಲ್ಲ ರಾಜಕಾರಣಿಯೊಟ್ಟಿಗಿನ 'ಲಿಂಕ್' ಕಾರಣ ಎಂಬ ಸುದ್ದಿ ಹರಿದಾಡಿತ್ತು. ಆ ಬಗ್ಗೆ ನಟಿ ನಿವೇತಾ ಸ್ಪಷ್ಟನೆ ನೀಡಿದ್ದಾರೆ.

ಕೆಲವು ನಟಿಯರು, ಮಾಡೆಲ್ ಗಳು ಐಶಾರಾಮಿ ಜೀವನ ನಡೆಸಲು ದೊಡ್ಡ ಉದ್ಯಮಿಗಳ, ರಾಜಕಾರಣಿಗಳ ಸಖ್ಯ ಬೆಳೆಸಿದ ಉದಾಹರಣೆಗಳಿವೆ. ಕೆಲವು ಬಾಲಿವುಡ್ ನಟಿಯರು ಭೂಗತ ಪಾತಕಿಗಳಿಗೂ ಹತ್ತಿರವಾಗಿದ್ದರು. ಈಗಲೂ ಇಂಥಹಾ ಕೆಲವು ನಟಿಯರಿದ್ದಾರೆ. ತೆಲುಗು-ತಮಿಳಿನಲ್ಲಿ ಜನಪ್ರಿಯವಾಗಿರುವ ನಿವೇತಾ ಪೇತುರಾಜ್ (Nivetha) ಅದರಲ್ಲಿ ಒಬ್ಬರು ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿದೆ. ನಿವೇತಾ, ತಮಿಳುನಾಡಿನ ರಾಜಕಾರಣಿ, ನಟ ಉದಯ್ನಿಧಿ ಸ್ಟಾಲಿನ್ಗೆ (Udhayanidhi Stalin) ಹತ್ತಿರವಾಗಿದ್ದು, ಉದಯ್ನಿಧಿ ‘ಕೃಪೆ’ಯಿಂದ ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನಿವೇತಾ ಪೇತುರಾಜ್, ಭಾರಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ವಿದೇಶಗಳಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ದುಬೈನ ರೇಸ್ ಟ್ರ್ಯಾಕ್ಗಳಲ್ಲಿ ಗಾಡಿ ಓಡಿಸುತ್ತಿದ್ದಾರೆ. ಉದಯ್ನಿಧಿ ಸ್ಟಾಲಿನ್, ನಿವೇತಾಗೆ ದುಬೈನಲ್ಲಿ ಆಸ್ತಿ ಖರೀದಿಸಿ ಕೊಟ್ಟಿದ್ದಾರೆ ಎಂಬ ಮಾಹಿತಿ ಒಳಗೊಂಡ ಕೆಲವು ವಿಡಿಯೋಗಳು ಯೂಟ್ಯೂಬ್ ನಲ್ಲಿ ಹರಿದಾಡುತ್ತಿವೆ. ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಸ್ವತಃ ನಿವೇತಾ ಸ್ಪಷ್ಟನೆ ನೀಡಿದ್ದಾರೆ. ನಿವೇತಾ ಇನ್ಸ್ಟಾಗ್ರಾಂನಲ್ಲಿಯೂ ಕೆಲವು ಚಿತ್ರಗಳಿದ್ದು, ಇದರಿಂದ ಅನುಮಾನ ಹೆಚ್ಚಾಗಿದೆ.
ಇದನ್ನೂ ಓದಿ:ಜಾನ್ವಿ ಕಪೂರ್ ಜನ್ಮದಿನ: ನಟಿಯ ಬಗ್ಗೆ ನಿಮಗೆ ತಿಳಿಯದ ಅಪರೂಪದ ವಿಚಾರಗಳಿವು..
ಇನ್ ಸ್ಟಾಗ್ರಾಂ ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟಿ, ‘ಸಾಮಾನ್ಯವಾಗಿ ಸುಳ್ಳು ಸುದ್ದಿಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ಈ ಸುದ್ದಿ ಒಬ್ಬ ಯುವತಿಯ ಚಾರಿತ್ರ್ಯ ವಧೆ ಮಾಡುವಂಥಹದ್ದು, ಕಳೆದ ಕೆಲ ದಿನಗಳಿಂದ ನಾನು ಹಾಗೂ ನನ್ನ ಕುಟುಂಬ ಬಹಳ ದುಃಖದಲ್ಲಿದೆ. ಈ ರೀತಿಯ ಸುದ್ದಿಗಳ ಹರಡುವ ಮುಂಚೆ ದಯವಿಟ್ಟು ಒಮ್ಮೆ ಯೋಚಿಸಿ’ ಎಂದು ಮನವಿ ಮಾಡಿದ್ದಾರೆ ನಟಿ. ‘ನಾನು ನನ್ನ 16ನೇ ವಯಸ್ಸಿನಿಂದಲೇ ಕುಟುಂಬದ ಮೇಲೆ ಡಿಪೆಂಡ್ ಆಗದೆ ಬದುಕುತ್ತಿದ್ದೇನೆ. ನನ್ನ ಕುಟುಂಬ ಕಳೆದ 20 ವರ್ಷಗಳಿಂದಲೂ ದುಬೈನಲ್ಲಿ ನೆಲೆಸಿದೆ. ನಾನೂ ಸಹ ದುಬೈನಲ್ಲಿಯೇ ಬೆಳೆದವಳು. ದುಬೈನಲ್ಲಿ ನನ್ನ ಕುಟುಂಬ ಒಂದು ಪ್ರಾಪರ್ಟಿಯನ್ನು ಬಾಡಿಗೆಗೆ ನೀಡಿದೆ. 2013 ರಿಂದ ನಾನು ರೇಸಿಂಗ್ ನಲ್ಲಿ ಆಸಕ್ತಿ ಬೆಳೆಸಿಕೊಂಡೆ, ದುಬೈನಲ್ಲಿ ರೇಸ್ ಟ್ರ್ಯಾಕ್ ಗಳಿಗೆ ಹೋಗುತ್ತೀನಿ. ಚೆನ್ನೈನಲ್ಲಿ ನಡೆದ ರೇಸ್ ಬಗ್ಗೆ ಮಾಹಿತಿ ಇರಲಿಲ್ಲವಾದ್ದರಿಂದ ನಾನು ಅಲ್ಲಿಗೆ ಬರಲಿಲ್ಲ’ ಎಂದಿದ್ದಾರೆ ನಟಿ.
ನಾನು ಈವರೆಗೆ ಸುಮಾರು 20 ಸಿನಿಮಾಗಳಲ್ಲಿ ನಟಿಸಿದ್ದೇನೆ ಆದರೆ ಯಾವುದೇ ನಿರ್ಮಾಪಕರು, ನಟರ ಬಳಿ ‘ಸಹಾಯ’ ಕೇಳಿಲ್ಲ. ನನಗೆ ಸಿನಿಮಾದಲ್ಲಿ ಪಾತ್ರ ಕೊಡಿ ಎಂದು ಅಹ ಯಾರನ್ನೂ ಕೇಳಿಕೊಂಡಿಲ್ಲ. ನಿಮ್ಮ ಮನೆ ಹೆಣ್ಣು ಮಕ್ಕಳಂತೆ ಸರಳ ಹಾಗೂ ಗೌರವಯುತವಾಗಿ ಬದುಕುವುದು ನನಗೆ ಇಷ್ಟ. ನನ್ನ ವಿರುದ್ಧ ಹರಿಬಿಡಲಾಗಿರುವ ಈ ಸುಳ್ಳು ಸುದ್ದಿಯ ಬಗ್ಗೆ ನಾನು ಈ ಬಾರಿ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗುವುದಿಲ್ಲ. ಆದರೆ ಇದು ಮತ್ತೊಮ್ಮೆ ಮರುಕಳಿಸಿದರೆ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ’ ಎಂದಿದ್ದಾರೆ ನಿವೇತಾ ಪೇತುರಾಜ್. ‘ಅಲಾ ವೈಕುಂಟಪುರಂಲೋ’, ‘ವಿರಾಟ ಪರ್ವಂ’, ‘ರೆಡ್’, ‘ಬ್ಲಡಿಮ್ಯಾರೇಜ್’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಿವೇತಾ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




