ಜಾನ್ವಿ ಕಪೂರ್ ಜನ್ಮದಿನ: ನಟಿಯ ಬಗ್ಗೆ ನಿಮಗೆ ತಿಳಿಯದ ಅಪರೂಪದ ವಿಚಾರಗಳಿವು..

ಪ್ರತಿ ಪಾಲಕರಿಗೂ ತಮ್ಮ ಮಕ್ಕಳು ಏನಾಗಬೇಕು ಎನ್ನುವ ಬಗ್ಗೆ ಒಂದು ಆಸೆ ಇರುತ್ತದೆ. ಅದೇ ರೀತಿ ಜಾನ್ವಿ ಕಪೂರ್ ಅವರಿಗೆ ತಮ್ಮ ಮಗಳು ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದರು. ಆದರೆ, ಅದು ತಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಜಾನ್ವಿಗೆ ಅರಿವಾಗಿತ್ತು. ವೈದ್ಯೆ ಆಗಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಮನವರಿಕೆ ಆಗಿತ್ತು.  ಹೀಗಾಗಿ ನಟನೆ ಆಯ್ಕೆ ಮಾಡಿಕೊಂಡರು

ಜಾನ್ವಿ ಕಪೂರ್ ಜನ್ಮದಿನ: ನಟಿಯ ಬಗ್ಗೆ ನಿಮಗೆ ತಿಳಿಯದ ಅಪರೂಪದ ವಿಚಾರಗಳಿವು..
ಜಾನ್ವಿ ಕಪೂರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 06, 2024 | 8:07 AM

ಜಾನ್ವಿ ಕಪೂರ್ (Janhvi Kapoor) ಅವರಿಗೆ ಇಂದು (ಮಾರ್ಚ್ 6) ಜನ್ಮದಿನದ ಸಂಭ್ರಮ. ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅಂದುಕೊಂಡಷ್ಟು ದೊಡ್ಡ ಗೆಲುವು ಕಂಡಿಲ್ಲ.  ಅವರು ‘ದೋಸ್ತಾನಾ 2’, ‘ತಕ್ತ್’ ಮೊಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಾನ್ವಿ ಕಪೂರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಬೋನಿ ಕಪೂರ್ ಹಾಗೂ ಶ್ರೀದೇವಿ ಮಗಳು ಎನ್ನುವ ಕಾರಣಕ್ಕೆ ಅವರಿಗೆ ಸಿನಿಮಾ ರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿತು. ಆದರೆ, ಅಂದುಕೊಂಡಷ್ಟು ದೊಡ್ಡ ಗೆಲುವು ಸಿಕ್ಕಿಲ್ಲ. ಬೋಲ್ಡ್ ಫೋಟೋ ಮೂಲಕ ಅವರು ಗಮನ ಸೆಳೆಯುತ್ತಾರೆ. ಜಾನ್ವಿ ಕಪೂರ್ ಕುರಿತ ಅಪರೂಪದ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

ಜಾನ್ವಿ ಹೆಸರು ಬಂದಿದ್ದು ಹೇಗೆ?

‘ಜುದಾಯಿ’ 1997ರಲ್ಲಿ ರಿಲೀಸ್ ಆದ ಸಿನಿಮಾ. ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದರೆ, ಶ್ರೀದೇವಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಊರ್ಮಿಳಾ ಮಾಡಿದ್ದ ಜಾನ್ವಿ ಪಾತ್ರ ಶ್ರೀದೇವಿಗೆ ಸಾಕಷ್ಟು ಇಷ್ಟ ಆಗಿತ್ತು. ಹೀಗಾಗಿ, ಈ ಹೆಸರನ್ನು ಆಯ್ಕೆ ಮಾಡಿಕೊಂಡರು.

ವೈದ್ಯೆ ಆಗಬೇಕಿತ್ತು..

ಪ್ರತಿ ಪಾಲಕರಿಗೂ ತಮ್ಮ ಮಕ್ಕಳು ಏನಾಗಬೇಕು ಎನ್ನುವ ಬಗ್ಗೆ ಒಂದು ಆಸೆ ಇರುತ್ತದೆ. ಅದೇ ರೀತಿ ಜಾನ್ವಿ ಕಪೂರ್ ಅವರಿಗೆ ತಮ್ಮ ಮಗಳು ವೈದ್ಯೆ ಆಗಬೇಕು ಎಂದು ಕನಸು ಕಂಡಿದ್ದರು. ಆದರೆ, ಅದು ತಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಜಾನ್ವಿಗೆ ಅರಿವಾಗಿತ್ತು. ವೈದ್ಯೆ ಆಗಲು ಸಾಧ್ಯವೇ ಇಲ್ಲ ಎಂಬುದು ಅವರಿಗೆ ಮನವರಿಕೆ ಆಗಿತ್ತು.  ಹೀಗಾಗಿ ನಟನೆ ಆಯ್ಕೆ ಮಾಡಿಕೊಂಡರು

ಕಥಕ್ ಕಲಿತ ನಟಿ

‘ಧಡಕ್’ ಜಾನ್ವಿ ಕಪೂರ್ ನಟನೆಯ ಮೊದಲ ಸಿನಿಮಾ. ಈ ಚಿತ್ರಕ್ಕಾಗಿ ಅವರು ಕಥಕ್ ಕಲಿತರು. ಈ ಬಗ್ಗೆ ಅವರಿಗೆ ಸಾಕಷ್ಟು ಖುಷಿ ಇತ್ತು. ಶ್ರದ್ಧೆಯಿಂದ ಅವರು ಕಥಕ್ ಕಲಿಯುವ ಪ್ರಯತ್ನ ಮಾಡಿದ್ದರು.

 ಪಿಂಕ್ ಬಾಟಲಿ

ಜಾನ್ವಿ ಕಪೂರ್ ಅವರು ಮನುಷ್ಯರನ್ನು ಮಾತ್ರವಲ್ಲ ವಸ್ತುಗಳನ್ನು ಪ್ರೀತಿಸುತ್ತಾರೆ. ಅವರಿಗೆ ತಮ್ಮ ಪಿಂಕ್ ವಾಟರ್ ಬಾಟಲಿ ಬಗ್ಗೆ ವಿಶೇಷ ಪ್ರೀತಿ ಇದೆ. ಇದಕ್ಕೆ ಚುಸ್ಕಿ ಎಂದು ಹೆಸರು ಇಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿತ್ತು.

ಫೇವರಿಟ್ ಜಾಗ

ಜಾನ್ವಿ ಕಪೂರ್ ಅವರಿಗೆ ಸುತ್ತಾಟ ಅಂದರೆ ಎಲ್ಲಿಲ್ಲದ ಪ್ರಿತಿ. ಅವರು ಸಮಯ ಸಿಕ್ಕಾಗಲೆಲ್ಲ ಸುತ್ತಾಟ ಮಾಡುತ್ತಲೇ ಇರುತ್ತಾರೆ. ಅವರಿಗೆ ಉದಯ್​ಪುರ್ ಹಾಗೂ ಫ್ಲೋರೆನ್ಸ್ ಎಂದರೆ ಎಲ್ಲಿಲ್ಲದ ಪ್ರೀತಿ.

ಸೀಕ್ರೆಟ್​ ಆಗಿ ವೇಗಸ್​ಗೆ ತೆರಳಿದ್ದರು

ಜಾನ್ವಿ ಕಪೂರ್ ಅವರು ಒಂದು ಮುಚ್ಚಿಟ್ಟ ವಿಚಾರವನ್ನು ‘ಕರೀನಾ ಕಪೂರ್ ಖಾನ್’ ಟಾಕ್ ಶೋನಲ್ಲಿ ರಿವೀಲ್ ಮಾಡಿದ್ದರು. ‘ನಾನು ಸಿನಿಮಾಗೆ ಹೋಗುತ್ತೇನೆ ಎಂದು ಹೇಳಿದ್ದೆ. ನಂತರ ನಾನು ವಿಮಾನ ಏರಿ ಲಾಸ್ ಏಂಜಲೀಸ್​ನಿಂದ ವೇಗಸ್​ಗೆ ತೆರಳಿದ್ದೆ. ವೇಗಸ್​ ಸುತ್ತಾಡಿ ಮತ್ತೆ ಮನೆಗೆ ಮರಳಿದ್ದೆ ಎಂದಿದ್ದರು ಅವರು.

ಸುತ್ತಾಟ

ಜಾನ್ವಿ ಕಪೂರ್ ಅವರು ಶಿಖರ್ ಪಹರಿಯಾ ಜೊತೆ ಸುತ್ತಾಟ ನಡೆಸುತ್ತಾ ಇರುತ್ತಾರೆ. ಅವರು ಇತ್ತೀಚೆಗೆ ತಿರುಪತಿಗೆ ಶಿಖರ್ ಜೊತೆ ಆಗಮಿಸಿ ಸುದ್ದಿ ಆಗಿದ್ದರು. ಇಬ್ಬರೂ ಶೀಘ್ರವೇ ಮದುವೆ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಪ್ರೀ-ವೆಡ್ಡಿಂಗ್​ ಸಂಭ್ರಮದಲ್ಲಿ ಜಾನ್ವಿ ಕಪೂರ್​

ಮದುವೆ ಹೇಗಿರಬೇಕು

‘ನನ್ನ ಮದುವೆಗೆ ಆಪ್ತರು ಮಾತ್ರ ಬರಬೇಕು. ಮತ್ಯಾರೂ ಇರಬಾರದು. ನನ್ನ ಮದುವೆ ಟ್ರೆಡಿಷನಲ್​ ಆಗಿ ತಿರುಪತಿಯಲ್ಲಿ ನಡೆಯುತ್ತದೆ ಅನ್ನೋದು ಗೊತ್ತು. ನಾನು ಕಾಂಜೀವರಂ ಸೀರೆ ಧರಿಸುತ್ತೇನೆ’ ಎಂದು ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್