ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದ ಬೆನ್ನಲ್ಲೇ ಮಹೇಶ್ ಬಾಬು ಹಳೆಯ ಟ್ವೀಟ್ ವೈರಲ್; ಏನಿದೆ ಇದರಲ್ಲಿ?

ಸುಕುಮಾರ್ ಅವರು ಮಹೇಶ್ ಬಾಬು ಜೊತೆ ಸಿನಿಮಾ ಮಾಡಬೇಕಿತ್ತು. ಮಹೇಶ್ ಬಾಬುಗಾಗಿ ಅವರು ವರ್ಷಕ್ಕೂ ಅಧಿಕ ಕಾಲ ಕಾದರು. ಆದರೆ, ಮಹೇಶ್ ಬಾಬು ಕೊನೆಯ ಕ್ಷಣದಲ್ಲಿ ಸಿನಿಮಾದಿಂದ ಹೊರ ಬಂದರು. 2019ರಲ್ಲಿ ‘ಪುಷ್ಪ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಈ ವೇಳೆ ಮಹೇಶ್ ಬಾಬು ಟ್ವೀಟ್ ಒಂದನ್ನು ಮಾಡಿದ್ದರು.

ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದ ಬೆನ್ನಲ್ಲೇ ಮಹೇಶ್ ಬಾಬು ಹಳೆಯ ಟ್ವೀಟ್ ವೈರಲ್; ಏನಿದೆ ಇದರಲ್ಲಿ?
ಮಹೇಶ್ ಬಾಬು

Updated on: Aug 25, 2023 | 7:09 AM

2021ರಲ್ಲಿ ರಿಲೀಸ್ ಆಗಿ ಭರ್ಜರಿ ಕಮಾಯಿ ಮಾಡಿದ ‘ಪುಷ್ಪ’ ಸಿನಿಮಾದ (Pushpa Movie) ನಟನೆಗೆ ಅಲ್ಲು ಅರ್ಜುನ್ (Allu Arjun) ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅಲ್ಲು ಕುಟುಂಬದ ಖುಷಿ ಹೆಚ್ಚಾಗಿದೆ. ಟಾಲಿವುಡ್ ಮಂದಿ ಇದನ್ನು ಸಂಭ್ರಮಿಸಿದ್ದಾರೆ. ಈ ಚಿತ್ರದ ನಿರ್ದೇಶಕ ಸುಕುಮಾರ್ ಅವರಿಗೆ ಮತ್ತಷ್ಟು ಚೈತನ್ಯ ಸಿಕ್ಕಿದೆ. ಈ ಮಧ್ಯೆ ಮಹೇಶ್ ಬಾಬು ಅವರ ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ. ಈ ಟ್ವೀಟ್ ನೋಡಿದ ಅನೇಕರು ಮಹೇಶ್ ಬಾಬು ರಾಷ್ಟ್ರಪ್ರಶಸ್ತಿ ಮಿಸ್ ಮಾಡಿಕೊಂಡರು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಏನಿದು ವಿಚಾರ? ಇಲ್ಲಿದೆ ಮಾಹಿತಿ.

2018ರಲ್ಲಿ ‘ರಂಗಸ್ಥಳಂ’ ಸಿನಿಮಾ ರಿಲೀಸ್ ಆದ ಬಳಿಕ ಸುಕುಮಾರ್ ಅವರು ಮಹೇಶ್ ಬಾಬು ಜೊತೆ ಸಿನಿಮಾ ಮಾಡಬೇಕಿತ್ತು. ಮಹೇಶ್ ಬಾಬುಗಾಗಿ ಅವರು ವರ್ಷಕ್ಕೂ ಅಧಿಕ ಕಾಲ ಕಾದರು. ಆದರೆ, ಮಹೇಶ್ ಬಾಬು ಕೊನೆಯ ಕ್ಷಣದಲ್ಲಿ ಸಿನಿಮಾದಿಂದ ಹೊರ ಬಂದರು. 2019ರಲ್ಲಿ ‘ಪುಷ್ಪ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಿತು. ಈ ವೇಳೆ ಮಹೇಶ್ ಬಾಬು ಟ್ವೀಟ್ ಒಂದನ್ನು ಮಾಡಿದ್ದರು.

‘ವಿಚಾರಗಳು ಹೊಂದಿಕೆ ಆಗದ ಕಾರಣ ಸುಕುಮಾರ್ ಜೊತೆಗಿನ ನನ್ನ ಸಿನಿಮಾ ಸೆಟ್ಟೇರುತ್ತಿಲ್ಲ. ಅವರ ಹೊಸ ಪ್ರಾಜೆಕ್ಟ್​ಗೆ ನಾನು ವಿಶ್ ತಿಳಿಸುತ್ತಿದ್ದೇನೆ. 1: ನೀನೊಕ್ಕಡೆನೆ ಸಿನಿಮಾ ಯಾವಾಗಲೂ ಕಲ್ಟ್ ಕ್ಲಾಸಿಕ್ ಸಿನಿಮಾ ಆಗಿರುತ್ತದೆ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಕ್ಷಣವನ್ನು ಆನಂದಿಸಿದ್ದೆ’ ಎಂದು ಟ್ವೀಟ್ ಮಾಡಿದ್ದರು ಮಹೇಶ್ ಬಾಬು.

ಇದನ್ನೂ ಓದಿ: ಜನವರಿಯಲ್ಲೂ ‘ಗುಂಟೂರು ಖಾರಂ’ ರಿಲೀಸ್ ಆಗೋದು ಅನುಮಾನ ಎಂದವರಿಗೆ ಮಹೇಶ್ ಬಾಬು ಉತ್ತರ

‘ಮಹೇಶ್ ಬಾಬು ಈ ಮೊದಲು ‘ಪುಷ್ಪ’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಅವರು ಒಪ್ಪದ ಕಾರಣ ಅಲ್ಲು ಅರ್ಜುನ್ ಕೈ ಸೇರಿತು. ಮಹೇಶ್ ಬಾಬು ರಾಷ್ಟ್ರಪ್ರಶಸ್ತಿ ಮಿಸ್ ಮಾಡಿಕೊಂಡರು’ ಎಂದೆಲ್ಲ ಕೆಲವರು ಟ್ವೀಟ್ ಮಾಡಿದ್ದಾರೆ. ಆದರೆ, ಮಹೇಶ್ ಬಾಬು ಅವರಿಗೆ ಹೇಳಿದ್ದ ಕಥೆ ‘ಪುಷ್ಪ’ ಚಿತ್ರದ್ದಲ್ಲ ಎನ್ನಲಾಗಿದೆ. ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ.

ಅಲ್ಲು ಅರ್ಜುನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಪುಷ್ಪ’ ಚಿತ್ರದಲ್ಲಿ ಅವರು ನಟಿಸಿದ ರೀತಿಗೆ ಎಲ್ಲರೂ ಫಿದಾ ಆಗಿದ್ದಾರೆ. ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಅರ್ಹವಾಗಿದೆ ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:08 am, Fri, 25 August 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us