ಜನವರಿಯಲ್ಲೂ ‘ಗುಂಟೂರು ಖಾರಂ’ ರಿಲೀಸ್ ಆಗೋದು ಅನುಮಾನ ಎಂದವರಿಗೆ ಮಹೇಶ್ ಬಾಬು ಉತ್ತರ

‘ಗುಂಟೂರು ಖಾರಂ’ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ತ್ರಿವಿಕ್ರಂ ಶ್ರೀನಿವಾಸ್. ಇವರ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಎದುರಾದ ಅಡ್ಡಿಗಳು ಒಂದೆರಡಲ್ಲ. ಮಹೇಶ್ ಬಾಬು ತಂದೆ-ತಾಯಿ ನಿಧನ ಹೊಂದಿದ್ದರಿಂದ ಶೂಟಿಂಗ್ ವಿಳಂಬ ಆಯಿತು. ನಟಿ ಪೂಜಾ ಹೆಗ್ಡೆ ಚಿತ್ರದಿಂದ ಹೊರ ನಡೆದಿದ್ದೂ ಸಮಸ್ಯೆ ಆಗಿದೆ.

ಜನವರಿಯಲ್ಲೂ ‘ಗುಂಟೂರು ಖಾರಂ’ ರಿಲೀಸ್ ಆಗೋದು ಅನುಮಾನ ಎಂದವರಿಗೆ ಮಹೇಶ್ ಬಾಬು ಉತ್ತರ
ಮಹೇಶ್ ಬಾಬು
Follow us
ರಾಜೇಶ್ ದುಗ್ಗುಮನೆ
|

Updated on: Aug 21, 2023 | 7:06 AM

ನಟ ಮಹೇಶ್ ಬಾಬು (Mahesh Babu) ಅವರು ಸಿನಿಮಾ ಜೊತೆಗೆ ಕುಟುಂಬಕ್ಕೂ ಹೆಚ್ಚು ಆದ್ಯತೆ ನೀಡುತ್ತಾರೆ. ವರ್ಷಕ್ಕೆ ಒಂದು ಸಿನಿಮಾ ರಿಲೀಸ್ ಮಾಡೋದು ಅವರ ವಾಡಿಕೆ ಆಗಿತ್ತು. ಆದರೆ, ‘ಸರ್ಕಾರು ವಾರಿ ಪಾಟ’ ಸಿನಿಮಾ ಬಳಿಕ ಅವರು ತುಂಬಾನೇ ನಿಧಾನಗತಿಯಲ್ಲಿ ಶೂಟಿಂಗ್ ಮಾಡಿದರು. ಇದಕ್ಕೆ ಅವರ ಕುಟುಂಬದಲ್ಲಿ ನಡೆದ ಹಲವು ಘಟನೆಗಳೂ ಕಾರಣ. ಈಗ ಅವರು ‘ಗುಂಟೂರು ಖಾರಂ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಈ ಚಿತ್ರ ರಿಲೀಸ್ ಆಗಬೇಕಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಮಹೇಶ್ ಬಾಬು ಬ್ರೇಕ್ ಮೇಲೆ ಬ್ರೇಕ್ ತೆಗೆದುಕೊಳ್ಳುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಈಗ ಎಲ್ಲಾ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

‘ಗುಂಟೂರು ಖಾರಂ’ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ತ್ರಿವಿಕ್ರಂ ಶ್ರೀನಿವಾಸ್. ಇವರ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರಕ್ಕೆ ಎದುರಾದ ಅಡ್ಡಿಗಳು ಒಂದೆರಡಲ್ಲ. ಮಹೇಶ್ ಬಾಬು ತಂದೆ-ತಾಯಿ ನಿಧನ ಹೊಂದಿದ್ದರಿಂದ ಶೂಟಿಂಗ್ ವಿಳಂಬ ಆಯಿತು. ನಟಿ ಪೂಜಾ ಹೆಗ್ಡೆ ಚಿತ್ರದಿಂದ ಹೊರ ನಡೆದಿದ್ದೂ ಸಮಸ್ಯೆ ಆಗಿದೆ. ಇದರ ಜೊತೆಗೆ ಎಸ್​. ಥಮನ್ ಸಂಗೀತ ಸಂಯೋಜನೆ ಮಹೇಶ್ ಬಾಬುಗೆ ಖುಷಿ ನೀಡುತ್ತಿಲ್ಲ ಎನ್ನಲಾಗಿದೆ. ಇನ್ನು, ಮಹೇಶ್ ಬಾಬು ಅವರು ಸಖತ್ ಸುತ್ತಾಟ ನಡೆಸುತ್ತಿದ್ದಾರೆ. ಇದು ಕೂಡ ಸಿನಿಮಾ ವಿಳಂಬಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ಮಹೇಶ್ ಬಾಬು ಫ್ಯಾಮಿಲಿ ಟ್ರೀ: ಸ್ಟಾರ್ ನಟನ ಕುಟುಂಬದ ಬಗ್ಗೆ ನಿಮಗೆಷ್ಟು ಗೊತ್ತು?

ಸದ್ಯ ಮಹೇಶ್ ಬಾಬು ಮತ್ತೆ ಸೆಟ್​ಗೆ ಮರಳಿದ್ದಾರೆ. ಅವರು ಇನ್ನು ಯಾವುದೇ ಬ್ರೇಕ್ ಪಡೆಯದೇ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಭಾನುವಾರ (ಆಗಸ್ಟ್ 20) ಅವರು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಬಂದಿದ್ದು ಸೆಟ್​ನಿಂದ. ಭಾನುವಾರವೂ ಮಹೇಶ್ ಬಾಬು ಶೂಟಿಂಗ್​ನಲ್ಲಿ ಭಾಗಿ ಆಗಿರುವು ವಿಚಾರಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಈ ಕಾರ್ಯಕ್ರಮದ ವೇದಿಕೆ ಮೇಲೆ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಅವರು ಮಾತನಾಡಿದ್ದಾರೆ ಎನ್ನಲಾಗಿದೆ. ಅಂದುಕೊಂಡ ದಿನಾಂಕದಂದೇ ಸಿನಿಮಾ ತೆರೆಗೆ ತರುವುದಾಗಿ ಹೇಳಿಕೊಂಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ