AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಿಂಗಿಚಕ ಜಿಂಗಿಚಕ..’ ಹಾಡನ್ನು ಹಾಡಿದ್ದು ‘ಸೀತಾ ರಾಮ’ ಅಶೋಕ್​; ಆಫರ್ ಬಂದಿದ್ದು ಹೇಗೆ?

‘ಸೀತಾ ರಾಮ’ ಧಾರಾವಾಹಿಯಲ್ಲಿ ಕಥಾ ನಾಯಕ ರಾಮ್ನ (ಗಗನ್ ಚಿನ್ನಪ್ಪ) ಫ್ರೆಂಡ್ ಆಗಿ ನಟಿಸುತ್ತಿರುವ ಅಶೋಕ್ ಶರ್ಮಾ ಈ ಹಾಡನ್ನು ಹಾಡಿದವರು! ವೈಷ್ಣವಿ ಗೌಡ ಅವರು ಇತ್ತೀಚೆಗೆ ಯೂಟ್ಯೂಬ್ನಲ್ಲಿ ವಿಡಿಯೋ ಹಂಚಿಕೊಂಡು ಈ ವಿಚಾರ ರಿವೀಲ್ ಮಾಡಿದ್ದಾರೆ.

‘ಜಿಂಗಿಚಕ ಜಿಂಗಿಚಕ..’ ಹಾಡನ್ನು ಹಾಡಿದ್ದು ‘ಸೀತಾ ರಾಮ’ ಅಶೋಕ್​; ಆಫರ್ ಬಂದಿದ್ದು ಹೇಗೆ?
ಜಿಂಗಿಚಕ ಸಾಂಗ್- ಅಶೋಕ್ ಶರ್ಮಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Aug 21, 2023 | 8:15 AM

Share

‘ಜಿಂಗಿಚಕ ಜಿಂಗಿಚಕ.. ಕುಚ್‌ ಕುಚ್‌ ಟುವಿ ಟುವಿ.. ತನನಂ ಗಿಲ್‌ ಗಿಲಕಿ ತಂನಂ ಬುಲ್‌ ಬುಲಕಿ.. ದಿದ್ದೀರಿ ದಿದ್ದೀರಿ ದಿದ್ದೀರಿ ಥೈ.. ಜಿಂಗ ಜಿಂಗಾಲೇ.. ದಿದ್ದೀರಿ ದಿದ್ದೀರಿ ದಿದ್ದೀರಿ ಥೈ..’ ಈ ಹಾಡು ಇತ್ತೀಚೆಗೆ ಸಖತ್ ವೈರಲ್ ಆಗುವುದರ ಜೊತೆ ಟ್ರೋಲ್ ಕೂಡ ಆಗಿದೆ. ರೀಲ್ಸ್ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಈ ಹಾಡಿನದ್ದೇ ಸದ್ದು. ಸಾಹಿತ್ಯವೇ ಇಲ್ಲದೆ ಹಾಡು ಸೃಷ್ಟಿ ಆಗಿದ್ದನ್ನು ನೋಡಿ ಎಲ್ಲರೂ ಅಚ್ಚರಿಗೊಂಡಿದ್ದರು. ಇದು ಮಾಸ್ಟರ್ ಆನಂದ್ ನಿರ್ದೇಶನದ ‘5 ಈಡಿಯಟ್ಸ್’ ಚಿತ್ರದ ಹಾಡು. ‘ಯಾರು ಗುರು ಈ ಹಾಡನ್ನು ಹಾಡಿದ್ದು’ ಎಂದೆಲ್ಲ ಅನೇಕರು ಪ್ರಶ್ನೆ ಮಾಡಿದ್ದಿದೆ. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ (Seetha Raama Serial) ಕಥಾ ನಾಯಕ ರಾಮ್​​ನ (ಗಗನ್ ಚಿನ್ನಪ್ಪ) ಫ್ರೆಂಡ್ ಆಗಿ ನಟಿಸುತ್ತಿರುವ ಅಶೋಕ್ ಶರ್ಮಾ ಈ ಹಾಡನ್ನು ಹಾಡಿದವರು! ವೈಷ್ಣವಿ ಗೌಡ ಅವರು ಇತ್ತೀಚೆಗೆ ಯೂಟ್ಯೂಬ್​ನಲ್ಲಿ ವಿಡಿಯೋ ಹಂಚಿಕೊಂಡು ಈ ವಿಚಾರ ರಿವೀಲ್ ಮಾಡಿದ್ದಾರೆ.

ಅಶೋಕ್ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ‘ಗೂಗ್ಲಿ’, ‘ರಾಮಾಚಾರಿ’, ಸಿನಿಮಾದಲ್ಲಿ ಯಶ್ ಗೆಳೆಯನಾಗಿ ನಟಿಸಿದ್ದರು. ‘ಕೆಜಿಎಫ್’ ಸಿನಿಮಾದಲ್ಲಿ ಆನಂದ್ ಇಂಗಳಗಿ (ಅನಂತ್ ನಾಗ್) ಯುವಕನಾಗಿದ್ದಾಗಿನ ಪಾತ್ರವನ್ನು ಇವರೇ ನಿರ್ವಹಿಸಿದ್ದರು. ಇನ್ನೂ ಹಲವು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಅವರು ಸಿಂಗರ್ ಕೂಡ ಹೌದು ಎನ್ನುವ ವಿಚಾರ ರಿವೀಲ್ ಆಗಿದೆ. ‘ಜಿಂಗಿಚಕ ಜಿಂಗಿಚಕ..’ ಹಾಡನ್ನು ಅಶೋಕ್ ಅವರೇ ಹಾಡಿದ್ದಾರೆ ಎಂಬ ವಿಚಾರ ಕೇಳಿ ಅನೇಕರು ಅಚ್ಚರಿಪಟ್ಟಿದ್ದಾರೆ.

ಇತ್ತೀಚೆಗೆ ವೈಷ್ಣವಿ ಗೌಡ ಅವರು ಯೂಟ್ಯೂಬ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು ‘ಬಿಗ್ ರಿವೀಲ್’ ಎಂಬ ಶೀರ್ಷಿಕೆ ನೀಡಿದ್ದಾರೆ. ‘ಜಿಂಗಿಚಕ ಜಿಂಗಿಚಕ..’ ಹಾಡನ್ನು ಹಾಡಿದ್ದು ಅಶೋಕ್ ಎಂದಿದ್ದಾರೆ. ಅಶೋಕ್ ಅವರು ತಮಗೆ ಆಫರ್ ಬಂದಿದ್ದು ಹೇಗೆ ಎಂಬುದನ್ನು ಹೇಳಿಕೊಂಡಿದ್ದಾರೆ.

‘ಫ್ರೆಂಡ್ಸ್ ಚಿತ್ರದ ‘ತಿರುಪತಿ ತಿರುಮಲ..’ ಹಾಡನ್ನು ನಾನು ಮೊದಲು ಹಾಡಿದೆ. ಅದಾದ ಬಳಿಕ ಯಾರನ್ನೂ ಕಾಂಟ್ಯಾಕ್ಟ್ ಮಾಡಿಲ್ಲ. ಆ್ಯಕ್ಟಿಂಗ್ ಕಡೆ ಗಮನಕೊಟ್ಟೆ. ಮಾಸ್ಟರ್ ಆನಂದ್ ಅವರು ಒಂದು ಸಿನಿಮಾ ನಿರ್ದೇಶನ ಮಾಡಿದರು. ಅದೇ ‘5 ಈಡಿಯಟ್ಸ್​’. ಈ ಚಿತ್ರದ ‘ಜಿಂಗಿಚಕ ಜಿಂಗಿಚಕ..’ ಹಾಡಿಗೆ ಸಾಹಿತ್ಯ ಬರೆದಿದ್ದು ರಾಮ್ ನಾರಾಯಣ್. ಅವರು ಕರೆದು ಒಂದು ಹಾಡು ಹಾಡುವಂತೆ ಕೋರಿದರು. ನಾನು ಖುಷಿಯಿಂದ ಒಪ್ಪಿಕೊಂಡೆ ಮತ್ತು ಹಾಡು ಯಾವುದು ಎಂಬುದನ್ನೂ ಕೇಳಲಿಲ್ಲ’ ಎಂದರು ಅಶೋಕ್.

‘ಒಂದು ಪ್ರಯೋಗ ಮಾಡುತ್ತಾ ಇದ್ದೇವೆ. ನಾವು ಬರೆದಿರುವ ಹಾಡಿಗೆ ಸಾಹಿತ್ಯ ಇರಲ್ಲ. ಆಡು ಭಾಷೆಯಾದ ಜಿಂಗಿಚಕ ಮೊದಲಾದ ಪದ ಬಳಸಿ ಸಾಂಗ್ ಬರೆಯುತ್ತೇವೆ. ಈ ಹಾಡು ಒಂದೋ ಸೂಪರ್ ಹಿಟ್ ಆಗುತ್ತದೆ. ಇಲ್ಲವಾದರೆ ಕಳೆದೇ ಹೋಗುತ್ತದೆ’ ಎಂದು ರಾಮ್ ನಾರಾಯಣ್ ಅವರು ಅಶೋಕ್​ಗೆ ಹೇಳಿದ್ದರಂತೆ. ‘ವಿಶೇಷ ಎಂದರೆ ಈ ಹಾಡು ಫ್ಲಾಪ್ ಹಾಗೂ ವೈರಲ್ ಎರಡೂ ಆಗಿದೆ. ಆಗ ಪತ್ತೆ ಇಲ್ಲದ ಹಾಗೆ ಹೋದ ಹಾಡು, ಈಗ ವೈರಲ್ ಆಗುತ್ತಿದೆ’ ಎಂದರು ಅಶೋಕ್. ಜೊತೆಗೆ ಟ್ರೋಲ್ ಮಾಡಿ ಫೇಮಸ್ ಮಾಡಿದ ಎಲ್ಲರಿಗೂ ಅಶೋಕ್ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಎರಡನೇ ಸ್ಥಾನಕ್ಕೆ ಜಿಗಿದ ‘ಸೀತಾ ರಾಮ’; ಟಿಆರ್​ಪಿ ರೇಸ್​ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ

ಗಗನ್ ಚಿನ್ನಪ್ಪ ಹಾಗೂ ಅಶೋಕ್ ಅವರು ಕಾರಿನಲ್ಲಿ ತೆರಳುವಾಗ ಹಾಡಿನ ಬಗ್ಗೆ ಚರ್ಚೆ ಆಗಿತ್ತಂತೆ. ‘ಮಗಾ ಒಂದು ಹಾಡಿದೆ. ಯಾವ್​ ನನ್ನ ಮಗನೇನೋ ಈ ಹಾಡನ್ನು ಹಾಡಿದ್ದೇನೋ’ ಎಂದು ಅಶೋಕ್​ ಬಳಿ ಗಗನ್ ಹೇಳಿದ್ದರು. ‘ಆ ಹಾಡನ್ನು ಹಾಡಿದ್ದು ನಾನೇ ಮಗ’ ಎಂದು ಅಶೋಕ್ ಅವರು ಹೇಳಿಕೊಂಡಿದ್ದರು. ಇದನ್ನು ಕೇಳಿ ಗಗನ್ ಕೂಡ ಅಚ್ಚರಿಪಟ್ಟಿದ್ದರು.

‘ಸೀತಾ ರಾಮ’ ಧಾರಾವಾಹಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ರೀತು ಸಿಂಗ್, ಅಶೋಕ್, ಪೂಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದಾರೆ. ನಾಯಕನ ಗೆಳೆತನ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರ ಪಾತ್ರ ಗಮನ ಸೆಳೆಯುತ್ತಿದೆ. ಟಿಆರ್​ಪಿಯಲ್ಲಿ ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:15 am, Mon, 21 August 23

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​