Thaman S: ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರತಂಡದಿಂದ ತಮನ್​ಗೆ ಗೇಟ್​ ಪಾಸ್​?

Guntur Kaaram: ತಮನ್​ ಎಸ್​. ಅವರಿಗೆ ಬೇಡಿಕೆ ಇದೆ. ಹಾಗಿದ್ದರೂ ಕೂಡ ‘ಗುಂಟೂರು ಖಾರಂ’ ಸಿನಿಮಾ ತಂಡದಿಂದ ಅವರಿಗೆ ಗೇಟ್​ ಪಾಸ್​ ನೀಡುತ್ತಿರುವ ಗಾಸಿಪ್​ ಹಬ್ಬಿದೆ.

Thaman S: ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರತಂಡದಿಂದ ತಮನ್​ಗೆ ಗೇಟ್​ ಪಾಸ್​?
ಮಹೇಶ್​ ಬಾಬು, ತಮನ್​ ಎಸ್​.
Follow us
ಮದನ್​ ಕುಮಾರ್​
|

Updated on: Jul 24, 2023 | 7:48 PM

ಟಾಲಿವುಡ್​ನ ‘ಗುಂಟೂರು ಖಾರಂ’ (Guntur Kaaram) ಸಿನಿಮಾ ಕೇವಲ ಗಾಸಿಪ್​ಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಈ ಚಿತ್ರ ಸೆಟ್ಟೇರಿದ ದಿನದಿಂದಲೂ ಒಂದಿಲ್ಲೊಂದು ವದಂತಿ ಕೇಳಿಬರುತ್ತಲೇ ಇದೆ. ಅಲ್ಲದೇ ಚಿತ್ರತಂಡದಲ್ಲಿ ಆಗುತ್ತಿರುವ ಕೆಲವು ಬದಲಾವಣೆಗಳು ಅನವಶ್ಯಕ ಚರ್ಚೆಗೆ ಎಡೆಮಾಡಿಕೊಟ್ಟಿವೆ. ಮಹೇಶ್​ ಬಾಬು (Mahesh Babu) ನಟನೆಯ ಈ ಸಿನಿಮಾಗೆ ನಾಯಕಿಯಾಗಿ ಈ ಮೊದಲು ಪೂಜಾ ಹೆಗ್ಡೆ ಆಯ್ಕೆ ಆಗಿದ್ದರು. ಆದರೆ ನಂತರ ಅವರು ಚಿತ್ರತಂಡದಿಂದ ಹೊರನಡೆದರು. ಇನ್ನು, ಸಂಗೀತ ನಿರ್ದೇಶಕ ತಮನ್​ ಎಸ್​. (Thaman S) ಅವರನ್ನೂ ಗುಂಟೂರು ಖಾರಂ ಸಿನಿಮಾ ತಂಡದಿಂದ ಹೊರಗೆ ಇಡಲಾಗುತ್ತಿದೆ ಎಂದು ಸುದ್ದಿ ಹರಡಿದೆ. ಈ ಬಗ್ಗೆ ಚಿತ್ರತಂಡದವರು ಶೀಘ್ರದಲ್ಲೇ ಅಧಿಕೃತವಾಗಿ ಹೇಳಿಕೆ ನೀಡುವ ಸಾಧ್ಯತೆ ಇದೆ.

ತಮನ್​ ಎಸ್​. ಅವರಿಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಇದೆ. ಹಾಗಿದ್ದರೂ ಕೂಡ ‘ಗುಂಟೂರು ಖಾರಂ’ ಸಿನಿಮಾ ತಂಡದಿಂದ ಅವರಿಗೆ ಗೇಟ್​ ಪಾಸ್​ ನೀಡುತ್ತಿರುವುದು ಯಾಕೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸ್ಟಾರ್​ ನಟರ ಸಿನಿಮಾ ಎಂದಾಗ ಗಾಸಿಪ್​ ಹರಡುವುದು ಸಹಜ. ಆದರೆ ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ. ತಮನ್​ ಅವರನ್ನು ಚಿತ್ರತಂಡದಿಂದ ಹೊರಗೆ ಇಡಲಾಗಿದೆ ಎಂಬ ಬಗ್ಗೆ ತೆಲುಗು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ. ಆದರೆ ಎಲ್ಲವೂ ಅಂತೆ-ಕಂತೆಗಳ ರೂಪದಲ್ಲಿ ಇವೆ.

ಇದನ್ನೂ ಓದಿ: Mahesh Babu: ‘ಗುಂಟೂರು ಖಾರಂ’ ಚಿತ್ರದಲ್ಲಿ ಮಹೇಶ್​ ಬಾಬು ಜೊತೆ ನಟಿಸ್ತಾರಾ ಶಿವಗಾಮಿ ಅಲಿಯಾಸ್ ರಮ್ಯಾ ಕೃಷ್ಣನ್​?

‘ಗುಂಟೂರು ಖಾರಂ’ ಸಿನಿಮಾದ ಹಾಡುಗಳಿಗೆ ಸಂಗೀತ ನೀಡದಿದ್ದರೂ ಹಿನ್ನೆಲೆ ಸಂಗೀತಕ್ಕಾದರೂ ತಮನ್​ ಎಸ್​. ಕೆಲಸ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ಅವರಿಗೆ ನೀಡುವುದು ಅನುಮಾನ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಈ ಸಿನಿಮಾಗೆ ತ್ರಿವಿಕ್ರಮ್​ ಶ್ರೀನಿವಾಸ್​ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Guntur Kaaram: ಮಾಹಿತಿ ಲೀಕ್​ ಆಗುವುದಕ್ಕೂ ಮುನ್ನವೇ ಎಚ್ಚರಿಕೆ ವಹಿಸಿದ ನಟಿ ಮೀನಾಕ್ಷಿ ಚೌಧರಿ; ವಿಡಿಯೋ ವೈರಲ್​

‘ಹೃದಯಂ’, ‘ಖುಷಿ’ ಸಿನಿಮಾಗಳ ಖ್ಯಾತಿಯ ಹೇಷಮ್​ ಅಬ್ದುಲ್​ ವಹಾಬ್​ ಅವರು ‘ಗುಂಟೂರು ಖಾರಂ’ ಸಿನಿಮಾಗೆ ಸಂಗೀತ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಚಿತ್ರತಂಡದಲ್ಲಿ ಇಷ್ಟೆಲ್ಲ ಗೊಂದಲಗಳು ಸೃಷ್ಟಿಯಾಗಲು ಕಾರಣ ಏನು ಎಂಬುದು ಮಾತ್ರ ಇನ್ನೂ ಬಹಿರಂಗ ಆಗಿಲ್ಲ. ಮಹೇಶ್​ ಬಾಬು ಅವರ ಫಸ್ಟ್​ ಲುಕ್​ ಗಮನ ಸೆಳೆದಿದೆ. ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.