Guntur Kaaram: ಮಾಹಿತಿ ಲೀಕ್​ ಆಗುವುದಕ್ಕೂ ಮುನ್ನವೇ ಎಚ್ಚರಿಕೆ ವಹಿಸಿದ ನಟಿ ಮೀನಾಕ್ಷಿ ಚೌಧರಿ; ವಿಡಿಯೋ ವೈರಲ್​

Meenakshi Chaudhary: ಜಾಸ್ತಿ ಮಾತನಾಡಿದರೆ ವಿಷಯ ಲೀಕ್​ ಆಗುತ್ತದೆ ಎಂಬುದು ಮೀನಾಕ್ಷಿ ಚೌಧರಿ ಅವರಿಗೆ ಅರ್ಥವಾಯ್ತು. ಹಾಗಾಗಿ ಅವರು ‘ನೋ ಲೀಕ್ಸ್​’ ಎಂದು ಜೋರಾಗಿ ಹೇಳಿದರು.

Guntur Kaaram: ಮಾಹಿತಿ ಲೀಕ್​ ಆಗುವುದಕ್ಕೂ ಮುನ್ನವೇ ಎಚ್ಚರಿಕೆ ವಹಿಸಿದ ನಟಿ ಮೀನಾಕ್ಷಿ ಚೌಧರಿ; ವಿಡಿಯೋ ವೈರಲ್​
ಮೀನಾಕ್ಷಿ ಚೌಧರಿ
Follow us
ಮದನ್​ ಕುಮಾರ್​
|

Updated on: Jul 17, 2023 | 6:54 PM

ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ (Guntur Kaaram) ಸಿನಿಮಾಗೆ ನಾಯಕಿ ಯಾರು? ಮೊದಲು ಪೂಜಾ ಹೆಗ್ಡೆ ಆಯ್ಕೆ ಆಗಿದ್ದರು. ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಅವರು ಚಿತ್ರತಂಡದಿಂದ ಹೊರನಡೆದರು. ಕನ್ನಡದ ಹುಡುಗಿ ಶ್ರೀಲೀಲಾ (Sreeleela) ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಪೂಜಾ ಹೆಗ್ಡೆ ಅವರು ಬಿಟ್ಟುಹೋದ ಸ್ಥಾನಕ್ಕೆ ಮೀನಾಕ್ಷಿ ಚೌಧರಿ (Meenakshi Chaudhary) ಅವರನ್ನು ಕರೆತರಲಾಗಿದೆ ಎಂದು ಸುದ್ದಿ ಹರಡಿತ್ತು. ಅದನ್ನು ಈಗ ಸ್ವತಃ ಮೀನಾಕ್ಷಿ ಚೌಧರಿ ಅವರು ಖಚಿತಪಡಿಸಿದ್ದಾರೆ. ಅದು ಕೂಡ ಓಪನ್​ ವೇದಿಕೆಯಲ್ಲೇ ಅವರು ಒಪ್ಪಿಕೊಂಡಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ಲೀಕ್​ ಆಗುವುದಕ್ಕೂ ಮುನ್ನವೇ ಅವರು ಬುದ್ಧಿವಂತಿಕೆ ತೋರಿಸಿದ್ದಾರೆ.

ಇತ್ತೀಚೆಗೆ ಮೀನಾಕ್ಷಿ ಚೌಧರಿ ಅವರು ಸಿನಿಮಾವೊಂದರ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಈ ವೇಳೆ ವೇದಿಕೆ ಏರಿದ ಅವರಿಗೆ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಕೇಳಲಾಯಿತು. ‘ಆ ಸಿನಿಮಾದಲ್ಲಿ ನಾನು ಇರುವುದು ಖುಷಿಯ ವಿಚಾರ. ನಾನು ಮೊದಲಿನಿಂದಲೂ ಮಹೇಶ್​ ಬಾಬು ಅವರ ಅಭಿಮಾನಿ. ಈಗತಾನೇ ಮೊದಲ ಹಂತದ ಶೂಟಿಂಗ್​ ಮುಗಿಸಿದ್ದೇವೆ. ಮೊದಲ ದಿನ ನನ್ನ ಚಿತ್ರೀಕರಣ ಮಹೇಶ್​ ಬಾಬು ಜೊತೆಗೆ ಇತ್ತು. ಈ ಅವಕಾಶ ನೀಡಿದ್ದಕ್ಕೆ ಮಹೇಶ್​ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್​ ಅವರಿಗೆ ಧನ್ಯವಾದಗಳು. ಅವರಿಬ್ಬರದ್ದು ಹಿಟ್​ ಕಾಂಬಿನೇಷನ್​’ ಎಂದು ಮೀನಾಕ್ಷಿ ಚೌಧರಿ ಹೇಳಿದ್ದಾರೆ.

ವೇದಿಕೆ ಮೇಲೆ ಮೀನಾಕ್ಷಿ ಚೌಧರಿ ಅವರು ಇನ್ನಷ್ಟು ಮಾತನಾಡಲಿ ಎಂಬುದು ಎಲ್ಲರ ಬಯಕೆ ಆಗಿತ್ತು. ಆದರೆ ಜಾಸ್ತಿ ಬಾಯಿ ಬಿಟ್ಟರೆ ವಿಷಯ ಲೀಕ್​ ಆಗುತ್ತದೆ ಎಂಬುದು ಮೀನಾಕ್ಷಿಗೆ ಅರ್ಥವಾಯ್ತು. ಹಾಗಾಗಿ ಅವರು ‘ನೋ ಲೀಕ್ಸ್​’ ಎಂದು ಜೋರಾಗಿ ಹೇಳಿದರು. ಆ ಮೂಲಕ ಸಿನಿಮಾದ ಬಗೆಗಿನ ಯಾವುದೇ ಪ್ರಮುಖ ವಿಷಯಗಳನ್ನು ಅವರು ಬಿಟ್ಟುಕೊಟ್ಟಿಲ್ಲ. ಅಷ್ಟರಮಟ್ಟಿಗೆ ಮೀನಾಕ್ಷಿ ಎಚ್ಚರಿಕೆ ವಹಿಸಿದ್ದಾರೆ. ಅವರು ಮಹೇಶ್​ ಬಾಬು ಬಗ್ಗೆ ಮಾತನಾಡುವಾಗ ಅಭಿಮಾನಿಗಳು ಖುಷಿಯಿಂದ ಜೈಕಾರ ಹಾಕಿದ್ದಾರೆ.

ಮಹೇಶ್​ ಬಾಬು ಪುತ್ರಿ ಸಿತಾರಾ ಚಿತ್ರರಂಗಕ್ಕೆ ಬರೋದು ಯಾವಾಗ? ಮಗಳ ಪರವಾಗಿ ಉತ್ತರಿಸಿದ ನಮ್ರತಾ

ಕೆಲವು ವರದಿಗಳ ಪ್ರಕಾರ, ಪೂಜಾ ಹೆಗ್ಡೆ ಬಿಟ್ಟುಹೋದ ಪಾತ್ರವನ್ನು ಶ್ರೀಲೀಲಾ ಮಾಡುತ್ತಿದ್ದಾರೆ. ಎರಡನೇ ನಾಯಕಿಯ ಪಾತ್ರವನ್ನು ಮೀನಾಕ್ಷಿ ಚೌಧರಿ ಅವರಿಗೆ ನೀಡಲಾಗಿದೆ. ಆದರೆ ಈ ಕುರಿತು ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಸದ್ಯಕ್ಕಂತೂ ಫಸ್ಟ್​ ಲುಕ್​ ಮತ್ತು ಟೈಟಲ್​ ಮೂಲಕ ‘ಗುಂಟೂರು ಖಾರಂ’ ಸಿನಿಮಾ ಗಮನ ಸೆಳೆಯುತ್ತಿದೆ. ಮಹೇಶ್​ ಬಾಬು ಜೊತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ