ಇತಿಹಾಸ ಬರೆದ ‘ಬ್ರಮಯುಗಂ’ ಆಸ್ಕರ್​​ನಿಂದ ವಿಶೇಷ ಗೌರವ

Bramayugam movie: ಮಮ್ಮುಟಿ ನಟನೆಯ ‘ಬ್ರಮಯುಗಂ’ ಸಿನಿಮಾವನ್ನು ಈಗಾಗಲೇ ವಿದೇಶದ ಕೆಲವು ಸಿನಿಮಾ ತರಗತಿಗಳಲ್ಲಿ ಪಠ್ಯವಾಗಿ ಬಳಸಾಗುತ್ತಿದೆ. ಇದೀಗ ಈ ಸಿನಿಮಾಕ್ಕೆ ಮತ್ತೊಂದು ವಿಶೇಷ ಗೌರವ ಲಭಿಸಿದೆ, ಅದೂ ಆಸ್ಕರ್​​ ಅಥವಾ ಅಕಾಡೆಮಿ ಆಫ್ ಮೋಷನ್ ಪಿಕ್ಚರ್​ ಆರ್ಟ್ಸ್ ಆಂಡ್ ಸೈನ್ಸ್ ಕಡೆಯಿಂದ. ಏನದು ಗೌರವ? ಇಲ್ಲಿದೆ ಮಾಹಿತಿ...

ಇತಿಹಾಸ ಬರೆದ ‘ಬ್ರಮಯುಗಂ’ ಆಸ್ಕರ್​​ನಿಂದ ವಿಶೇಷ ಗೌರವ
Bramayugam

Updated on: Jan 29, 2026 | 6:57 PM

ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ಭಿನ್ನವಾದ ಚಿತ್ರರಂಗವೆಂದರೆ ಅದು ಮಲಯಾಳಂ (Malayalam) ಚಿತ್ರರಂಗ. ಇತರೆ ಕೆಲ ಜನಪ್ರಿಯ ಮತ್ತು ದೊಡ್ಡ ಚಿತ್ರರಂಗಗಳು ಕಮರ್ಶಿಯಲ್, ಮಾಸ್ ಸಿನಿಮಾಗಳು, ಪ್ಯಾನ್ ಇಂಡಿಯಾ ರೀಚ್, ಭರ್ಜರಿ ಮಾರ್ಕೆಟಿಂಗ್​​ಗಳ ಕಡೆ ಗಮನ ವಹಿಸಿದ್ದರೆ ಮಲಯಾಳಂ ಸಿನಿಮಾಗಳು ಇದೆಲ್ಲವನ್ನೂ ಬದಿಗೆ ಸರಿಸಿ ಕೇವಲ ಭಿನ್ನ ಕತೆ, ಮಾನವೀಯ ಮೌಲ್ಯಗಳು, ಸ್ವಚ್ಛ ಮನರಂಜನೆಗೆ ಒತ್ತು ನೀಡಿ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಹಲವು ಅತ್ಯದ್ಭುತ ಸಿನಿಮಾಗಳನ್ನು ಮಲಯಾಳಂ ಚಿತ್ರರಂಗ ನೀಡುತ್ತಾ ಬಂದಿದೆ. ಅವುಗಳಲ್ಲಿ ಇತ್ತೀಚೆಗಿನ ‘ಬ್ರಮಯುಗಂ’ ಸಹ ಒಂದು. ಇದೀಗ ಈ ಸಿನಿಮಾಕ್ಕೆ ಸ್ವತಃ ಆಸ್ಕರ್ ಗೌರವ ಸಲ್ಲಿಸುತ್ತಿದೆ.

ಮಮ್ಮುಟಿ ನಟನೆಯ ‘ಬ್ರಮಯುಗಂ’ ಸಿನಿಮಾವನ್ನು ಈಗಾಗಲೇ ವಿದೇಶದ ಕೆಲವು ಸಿನಿಮಾ ತರಗತಿಗಳಲ್ಲಿ ಪಠ್ಯವಾಗಿ ಬಳಸಾಗುತ್ತಿದೆ. ಇದೀಗ ಈ ಸಿನಿಮಾಕ್ಕೆ ಮತ್ತೊಂದು ವಿಶೇಷ ಗೌರವ ಲಭಿಸಿದೆ, ಅದೂ ಆಸ್ಕರ್​​ ಅಥವಾ ಅಕಾಡೆಮಿ ಆಫ್ ಮೋಷನ್ ಪಿಕ್ಚರ್​ ಆರ್ಟ್ಸ್ ಆಂಡ್ ಸೈನ್ಸ್ ಕಡೆಯಿಂದ.

ಇತ್ತೀಚೆಗಷ್ಟೆ ಆಸ್ಕರ್ಸ್ 2026ರ ನಾಮಿನೇಷನ್ ಘೋಷಣೆ ಆಯ್ತು. ಭಾರಿ ನಿರೀಕ್ಷೆ ಹುಟ್ಟಿಸಿದ್ದ ‘ಹೋಮ್​​ಬೌಂಡ್’ ಸಿನಿಮಾ ಆಸ್ಕರ್ ರೇಸಿನಿಂದ ಹೊರಬಿದ್ದಿದ್ದು ಭಾರತೀಯ ಸಿನಿಮಾ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿತ್ತು. ಆದರೆ ಭಾರತೀಯ ಸಿನಿಮಾ ಪ್ರೇಮಿಗಳು ಪೂರ್ಣವಾಗಿ ನಿರಾಶರಾಗಬೇಕಿಲ್ಲ. ಆಸ್ಕರ್ಸ್​​ನ ವಿಶೇಷ ಸಿನಿಮಾ ಸ್ಕ್ರೀನಿಂಗ್​​ಗೆ ಭಾರತದ ಅದರಲ್ಲೂ ಮಲಯಾಳಂನ ‘ಬ್ರಮಯುಗಂ’ ಆಯ್ಕೆ ಆಗಿದೆ. ಫೆಬ್ರವರಿ 12 ರಂದು ಲಾಸ್ ಏಂಜಲ್ಸ್​ನ ಆಸ್ಕರ್ಸ್​ ಮ್ಯೂಸಿಯಂನಲ್ಲಿ ವಿಶೇಷ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ:Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ

ಈ ವಿಶೇಷ ಪ್ರದರ್ಶನಕ್ಕೆ ಸಿನಿಮಾದ ನಿರ್ದೇಶಕ ರಾಹುಲ್ ಸದಾಶಿವನ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ‘ಬ್ರಮಯುಗಂ’ ಸಿನಿಮಾದ ತಂತ್ರಜ್ಞಾನ ನೈಪುಣ್ಯತೆ ಮತ್ತು ಸಿನಿಮಾದ ಮುಖ್ಯ ಪಾತ್ರಧಾರಿಯಾದ ಮಮ್ಮುಟಿ ಅವರ ಅದ್ಭುತ ನಟನೆಗಾಗಿ ಈಗಾಗಲೇ ಸಾಕಷ್ಟು ಪ್ರಶಂಸೆ ಮನ್ನಣೆಯನ್ನು ಸಿನಿಮಾ ಗಳಿಸಿಕೊಂಡಿದೆ. ಇದೀಗ ಆಸ್ಕರ್ಸ್ ಸಹ ಈ ಸಿನಿಮಾದ ಗುಣಮಟ್ಟವನ್ನು ಗುರುತಿಸಿ ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದೆ.

ಆಸ್ಕರ್ಸ್​​ನ ವಿಶೇಷ ಪ್ರದರ್ಶನಕ್ಕೆ ಆಯ್ದುಕೊಂಡ ಮೊಟ್ಟ ಮೊದಲ ಭಾರತೀಯ ಸಿನಿಮಾ ‘ಬ್ರಹ್ಮಯುಗಂ’ ಎನ್ನಲಾಗುತ್ತಿದೆ. ಇದೊಂದು ಹಾರರ್ ಕಥಾನಕ ಹೊಂದಿದ ಸಿನಿಮಾ ಆಗಿದೆ. ಸಿನಿಮಾಕ್ಕೆ 2024ರ ಕೇರಳ ರಾಜ್ಯ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ