ಮಂಜು ಕೇವಲ ಕಾಮಿಡಿಯನ್​, ಹೀರೋ ಆಗಲ್ಲ; ಮನೆಯಿಂದ ಹೊರ ಬಂದ ಸಂಬರಗಿ ಮಾತು

ಬಿಗ್​ ಬಾಸ್​ ಮನೆಯಲ್ಲಿ ಮಂಜು-ದಿವ್ಯಾ ಸುರೇಶ್​ ಬಗ್ಗೆ ಮಾತನಾಡಿರುವ ಪ್ರಶಾಂತ್​, ಅವರಿಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಗಂಡ ಹೆಂಡತಿ ನಾಟಕವಾಡಿದ್ದಾರೆ ಎಂದು ದೂರಿದ್ದಾರೆ.

ಮಂಜು ಕೇವಲ ಕಾಮಿಡಿಯನ್​, ಹೀರೋ ಆಗಲ್ಲ; ಮನೆಯಿಂದ ಹೊರ ಬಂದ ಸಂಬರಗಿ ಮಾತು

Updated on: May 13, 2021 | 8:01 PM

ಬಿಗ್​ ಬಾಸ್​ ಮನೆಯಲ್ಲಿದ್ದಷ್ಟು ದಿನ ಪ್ರಶಾಂತ್​ ಸಂಬರಗಿ ವಾದಗಳ ಮೂಲಕವೇ ಎಲ್ಲರನ್ನೂ ಸೆಳೆಯುವ ಪ್ರಯತ್ನ ಮಾಡಿದ್ದರು. ಈ ವಿಚಾರದಲ್ಲಿ ಅವರು ಸುದೀಪ್​ ಅವರಿಂದ ಕಿವಿಮಾತು ಕೂಡ ಪಡೆದುಕೊಂಡಿದ್ದರು. ಮತ್ತೊಂದು ವಿಚಾರ ಎಂದರೆ, ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನ ಮಂಜು ಪಾವಗಡ ಜತೆ ಪ್ರಶಾಂತ್​ ಮಾತಿಗೆ ಇಳಿದಿದ್ದರು. ಅನೇಕ ಬಾರಿ ಇಬ್ಬರ ನಡುವೆ ಜಗಳ ಕೂಡ ಏರ್ಪಟ್ಟಿತ್ತು. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರ ಅವರು ಈಗ ವೀಕ್ಷಕರನ್ನು ಉದ್ದೇಶಿಸಿ ಮಾತನಾಡಿದ್ದು, ಮಂಜು ಕೇವಲ ಕಾಮಿಡಿಯನ್​, ಹೀರೋ ಆಗಕ್ಕೆ ಆಗಲ್ಲ ಎಂದಿದ್ದಾರೆ.

ಇಂದು ಕಲರ್ಸ್​ ಕನ್ನಡ ವಾಹಿನಿಯ ಫೇಸ್​ಬುಕ್ ಲೈವ್​ನಲ್ಲಿ​ ಬಂದು ಪ್ರಶಾಂತ್​ ಮಾತನಾಡಿದ್ದಾರೆ. ಈ ವೇಳೆ ಅವರಿಗೆ ಫೇವರೆಟ್​ ಕಂಟೆಸ್ಟಂಟ್​ ಯಾರು ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರಶಾಂತ್​ ಉತ್ತರಿಸಿದ್ದಾರೆ. ‘ಬಿಗ್​ ಬಾಸ್​ ಮನೆಯಲ್ಲಿ ನನ್ನ ನೆಚ್ಚಿನ ಕಂಟೆಸ್ಟಂಟ್​ ಎಂದು ಯಾರೂ ಇರಲಿಲ್ಲ. ಎಲ್ಲರಲ್ಲೂ ಒಂದು ಮೈನಸ್​ ಪಾಯಿಂಟ್​ ಇತ್ತು. ಮಂಜು ಪಾವಗಡ ಅವರಿಗೆ ಶಕ್ತಿ ಇತ್ತು. ಅದೇ ರೀತಿ ವೀಕ್​ನೆಸ್​ ಕೂಡ ಇತ್ತು’ ಎಂದು ಪ್ರಶಾಂತ್​ ಮಾತು ಆರಂಭಿಸಿದರು.

‘ಮಂಜು ಸ್ಕ್ರಿಪ್ಟೆಡ್​ ಲೈನ್​ಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದರು. ಹೀಗಾಗಿ, ಬಿಗ್​ ಬಾಸ್​ ಮನೆಯಲ್ಲಿ ಅವರಿಗೆ ಕಷ್ಟವಾಗುತ್ತಿತ್ತು. ಯಾವುದಾದರೂ ಸಿನಿಮಾ ತೆಗೆದುಕೊಂಡರೆ ಹೀರೋ ಹೀರೋನೆ, ಕಾಮಿಡಿಯನ್​ ಕಾಮಿಡಿಯನ್ನೇ. ಕಾಮಿಡಿಯನ್​ ಯಾವಾಗಲೂ ಹೀರೋ ಆಗೋಕೆ ಆಗಲ್ಲ. ಮಂಜು ಅವರ ಸ್ಟಫ್​ ಬರುಬರುತ್ತಾ ಕಡಿಮೆ ಆಯಿತು’ ಎಂದರು ಪ್ರಶಾಂತ್​. ಮಂಜು ಪಾವಗಡ ಮಜಾ ಭಾರತ​ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ನಗಿಸಿದ್ದರು. ಆ ಕಾರಣಕ್ಕೆ ಪ್ರಶಾಂತ್​ ಹೀಗೆ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು-ದಿವ್ಯಾ ಸುರೇಶ್​ ಬಗ್ಗೆ ಮಾತನಾಡಿರುವ ಪ್ರಶಾಂತ್​, ಅವರಿಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಗಂಡ ಹೆಂಡತಿ ನಾಟಕವಾಡಿದ್ದಾರೆ ಎಂದು ದೂರಿದ್ದಾರೆ. ‘ಬಿಗ್​ ಬಾಸ್​ ಮನೆಯಲ್ಲಿ ನಾವು ಎಮೋಷನಲಿ ಡಿಸ್​ಕನೆಕ್ಟೆಡ್​. 71 ದಿನ ಮನೆಯಲ್ಲಿ ಕಳೆದಿದ್ದೇವೆ. ಮನೆಯಲ್ಲಿ ಯಾರಾದರೂ ಒಬ್ಬರನ್ನೂ ವಿನ್ನರ್​ ಎಂದು ಘೋಷಿಸಬೇಕಿತ್ತು. ಆ ರಿಸಲ್ಟ್​ ಕೊಟ್ಟಿದ್ದರೆ ಖುಷಿ ಆಗುತ್ತಿತ್ತು’ ಎಂದು ಪ್ರಶಾಂತ್​ ಹೇಳಿದ್ದಾರೆ.

ಇದನ್ನೂ ಓದಿ: Prashanth Sambargi: ಸುದೀಪ್​ ಮಾತಿಗೆ ಬೆಲೆಕೊಟ್ಟು ದೊಡ್ಡ ನಿರ್ಧಾರ ತೆಗೆದುಕೊಂಡ ಪ್ರಶಾಂತ್​ ಸಂಬರಗಿ; ಮನೆಯವರಿಗೆ ಶಾಕ್

‘ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು’; ಕೊನೆಯ ದಿನ ಅಚ್ಚರಿಯ ವಿಚಾರ ಬಿಚ್ಚಿಟ್ಟ ಪ್ರಶಾಂತ್​ ಸಂಬರಗಿ

Published On - 8:01 pm, Thu, 13 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us