Toyota Vellfire: ದುಬಾರಿ ಕಾರು ಖರೀದಿಸಿದ ಚಿರಂಜೀವಿ; 1111 ನಂಬರ್​ ಪ್ಲೇಟ್​ ಪಡೆಯಲು ನೀಡಿದ ಹಣ ಎಷ್ಟು?

Megastar Chiranjeevi Car Number: ‘ಮೆಗಾ ಸ್ಟಾರ್​’ ಚಿರಂಜೀವಿ ಅವರ ‘ಟೊಯೊಟಾ ವೆಲ್​ಫೈರ್​’ ಕಾರಿನ ನೋಂದಣಿ ಸಂಖ್ಯೆ TS 09 GB 1111. ಇದೇ ನಂಬರ್​ ಇರಬೇಕು ಎಂಬುದು ಅವರ ಬಯಕೆ ಆಗಿತ್ತು.

Toyota Vellfire: ದುಬಾರಿ ಕಾರು ಖರೀದಿಸಿದ ಚಿರಂಜೀವಿ; 1111 ನಂಬರ್​ ಪ್ಲೇಟ್​ ಪಡೆಯಲು ನೀಡಿದ ಹಣ ಎಷ್ಟು?
ಟೊಯೊಟಾ ವೆಲ್​ಫೈರ್​, ಚಿರಂಜೀವಿ
Edited By:

Updated on: Apr 13, 2023 | 3:03 PM

​ಸೆಲೆಬ್ರಿಟಿಗಳಿಗೆ ಕಾರಿನ ಬಗ್ಗೆ ವಿಶೇಷ ಕ್ರೇಜ್​ ಇರುತ್ತದೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ನಟ-ನಟಿಯರು ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಮಾರುಕಟ್ಟೆಗೆ ಬರುವ ಹೊಸ ಕಾರುಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಆಸೆ ಬಹುತೇಕ ಎಲ್ಲ ಸೆಲೆಬ್ರಿಟಿಗಳಿಗೆ ಇರುತ್ತದೆ. ಈ ವಿಚಾರದಲ್ಲಿ ಟಾಲಿವುಡ್​ ನಟ ‘ಮೆಗಾ ಸ್ಟಾರ್​’ ಚಿರಂಜೀವಿ (Megastar Chiranjeevi) ಕೂಡ ಹೊರತಾಗಿಲ್ಲ. ಅವರ ಬಳಿ ಅನೇಕ ಐಷಾರಾಮಿ ಕಾರುಗಳಿವೆ. ಅದರ ಜೊತೆಗೆ ಈಗ ಟೊಯೊಟಾ ಕಂಪನಿಯ ‘ವೆಲ್​ಫೈರ್​’ (Toyota Vellfire) ಕಾರು ಕೂಡ ಅವರ ಒಡೆತನಕ್ಕೆ ಸೇರಿದೆ. ಈ ಐಷಾರಾಮಿ ವಾಹನದ ಆನ್​ ರೋಡ್​ ಬೆಲೆ 1.2 ಕೋಟಿ ರೂಪಾಯಿ! ವಿಶೇಷ ಏನೆಂದರೆ, ಚಿರಂಜೀವಿ ಅವರು ಈ ಕಾರಿಗೆ 1111 ನಂಬರ್​ ಪಡೆದಿದ್ದಾರೆ. ಇದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಮೂಲಗಳ ಪ್ರಕಾರ ಬರೋಬ್ಬರಿ 4.7 ಲಕ್ಷ ರೂಪಾಯಿ ಕೊಟ್ಟು ಈ ರಿಜಿಸ್ಟ್ರೇಷನ್​ ನಂಬರ್​ (Chiranjeevi Car Number) ಪಡೆದಿದ್ದಾರೆ. ಈ ಸುದ್ದಿ ಕೇಳಿ ಚಿರಂಜೀವಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಸೆಲೆಬ್ರಿಟಿಗಳ ವಲಯದಲ್ಲಿ ‘ಟೊಯೊಟಾ ವೆಲ್​ಫೈರ್​’ ಕಾರು ಈಗ ಟ್ರೆಂಡ್​ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ನಟ ಡಾಲಿ ಧನಂಜಯ್​ ಅವರಿಗೆ ಕೆಆರ್​ಜಿ ಸ್ಟುಡಿಯೋಸ್​ನ ಯೋಗಿ ರಾಜ್ ಹಾಗೂ ಕಾರ್ತಿಕ್ ಗೌಡ ಅವರು ಉಡುಗೊರೆಯಾಗಿ ಈ ಕಾರನ್ನು ನೀಡಿದರು. ಟಾಲಿವುಡ್​ ನಟ ಜೂನಿಯರ್​ ಎನ್​ಟಿಆರ್​ ಕೂಡ ಇತ್ತೀಚೆಗೆ ‘ಟೊಯೊಟಾ ವೆಲ್​ಫೈರ್​’ ಓಡಿಸಿ ಖುಷಿಪಟ್ಟಿದ್ದು ಸುದ್ದಿ ಆಯಿತು. ಈ ಕಾರಿಗೆ ಚಿರು ಕೂಡ ಮನ ಸೋತಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಮನೆಮಗಳ ಸಂಸಾರದಲ್ಲಿ ಬಿರುಗಾಳಿ; ಡಿವೋರ್ಸ್​ ಸುದ್ದಿಗೆ ಸಿಕ್ತು ಬಲವಾದ ಸಾಕ್ಷಿ

ಇದನ್ನೂ ಓದಿ
Vijayashanthi: ಚಿರಂಜೀವಿ, ನಾಗಾರ್ಜುನಗೆ ಮಾತಲ್ಲಿ ತಿವಿದ ವಿಜಯಶಾಂತಿ; ಆಮಿರ್​ ಖಾನ್​ಗೆ ಬೆಂಬಲ ನೀಡಿದ್ದೇ ತಪ್ಪಾಯ್ತು
Chiranjeevi: ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾಯಿಸಿಕೊಂಡ ‘ಮೆಗಾ ಸ್ಟಾರ್​’ ಚಿರಂಜೀವಿ; ಇದೆಲ್ಲಾ ವರ್ಕ್​ ಆಗತ್ತಾ?
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
‘ವಿಕ್ರಮ್​’ ಸಿನಿಮಾ ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿರಂಜೀವಿ; ಗಮನ ಸೆಳೆದ ಸಲ್ಮಾನ್ ಖಾನ್

ಚಿರಂಜೀವಿ ಅವರ ‘ಟೊಯೊಟಾ ವೆಲ್​ಫೈರ್​’ ಕಾರಿನ ನೋಂದಣಿ ಸಂಖ್ಯೆ TS 09 GB 1111. ಇದೇ ನಂಬರ್​ ಇರಬೇಕು ಎಂಬುದು ಅವರ ಬಯಕೆ ಆಗಿತ್ತು. ಅದಕ್ಕಾಗಿ ಅವರು ತೆಲಂಗಾಣದ ಖೈರತಾಬಾದ್​ನಲ್ಲಿ ರಿಜಿಸ್ಟ್ರೇಷನ್​ ಮಾಡಿಸಿದ್ದಾರೆ. ಚಿರಂಜೀವಿ ಅವರಿಗೆ 1111 ಸಂಖ್ಯೆ ಬಗ್ಗೆ ವಿಶೇಷ ಒಲವು ಇದೆ. ಹಾಗಾಗಿ ಅವರ ಎಲ್ಲ ಕಾರುಗಳಿಗೆ ಇದೇ ಸಂಖ್ಯೆಯನ್ನೇ ಪಡೆದುಕೊಂಡಿದ್ದಾರೆ. ‘ಟೊಯೊಟಾ ವೆಲ್​ಫೈರ್​’ ವಿಚಾರದಲ್ಲೂ ಇದು ಮುಂದುವರಿದಿದೆ.

ಇದನ್ನೂ ಓದಿ: ‘ಹೊಯ್ಸಳ’ ನಿರ್ಮಾಪಕರಿಂದ ಧನಂಜಯ್​ಗೆ ಕಾರು ಗಿಫ್ಟ್​; ಈ ಕಾರಿನ ಬೆಲೆ 1 ಕೋಟಿ ರೂಪಾಯಿ

‘ಟೊಯೊಟಾ ವೆಲ್​ಫೈರ್​’ ಕಾರು 2492 ಸಿಸಿ ಇಂಜಿನ್​​ ಹೊಂದಿದೆ. ಪ್ರತಿ ಲೀಟರ್​ ಪೆಟ್ರೋಲ್​ಗೆ 16 ಕಿ.ಮೀ ಮೈಲೇಜ್​ ನೀಡುತ್ತದೆ. ಏಳು ಸೀಟರ್​​ ಕಾರು ಇದಾಗಿದ್ದು, ಅತ್ಯಂತ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. 0-100 ಕಿ.ಮೀ ವೇಗವನ್ನು 8 ಸೆಕೆಂಡ್​ನಲ್ಲಿ ಈ ಕಾರು ತಲುಪುತ್ತದೆ. ಇದಲ್ಲದೇ ರೋಲ್ಸ್​ ರಾಯ್ಸ್​, ಟೊಯೊಟಾ ಲ್ಯಾಂಡ್​ ಕ್ರೂಸರ್​ ಮುಂತಾದ ಕಾರುಗಳು ಕೂಡ ಜಿರಂಜೀವಿ ಅವರ ಕಲೆಕ್ಷನ್​ನಲ್ಲಿ ಇವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:29 pm, Thu, 13 April 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us