MM Keeravani’s Best Songs: ಆಸ್ಕರ್ ಗೆದ್ದ ಎಂಎಂ ಕೀರವಾಣಿಯ ಬೆಸ್ಟ್ ಹಾಡುಗಳು ಇವೇ ನೋಡಿ

|

Updated on: Mar 13, 2023 | 11:43 AM

ಈ ಹಾಡಿಗೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. 90ರ ದಶಕದಿಂದ ಕೀರವಾಣಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

MM Keeravanis Best Songs: ಆಸ್ಕರ್ ಗೆದ್ದ ಎಂಎಂ ಕೀರವಾಣಿಯ ಬೆಸ್ಟ್ ಹಾಡುಗಳು ಇವೇ ನೋಡಿ
ಎಂ.ಎಂ. ಕೀರವಾಣಿ
Follow us on

ರಾಜಮೌಳಿ ನಿರ್ದೇಶಿಸಿದ ಸಿನಿಮಾ ನಿರ್ದೇಶನದ ‘ಆರ್​ಆರ್​ಆರ್’ ಚಿತ್ರ ಆಸ್ಕರ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ‘ನಾಟು ನಾಟು..’ ಹಾಡು (Naatu Naatu Song) ಅಕಾಡೆಮಿ ಪ್ರಶಸ್ತಿ ಬಾಚಿಕೊಂಡಿದೆ. ಲಾಸ್ ಏಂಜಲಿಸ್​ನ ಡಾಲ್ಬಿ ಥಿಯೇಟರ್​​ನಲ್ಲಿ ಈ ಕಾರ್ಯಕ್ರಮ ನಡೆದಿದೆ. ‘ನಾಟು ನಾಟು..’ ಹಾಡನ್ನು ಉಕ್ರೇನ್​ನಲ್ಲಿ 40 ದಿನಗಳ ಕಾಲ ಶೂಟ್ ಮಾಡಲಾಗಿತ್ತು. ರಾಜಮೌಳಿ (SS Rajamouli) ಪರಿಶ್ರಮ ಈಗ ಫಲ ನೀಡಿದೆ. ಈ ಹಾಡಿಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಅನೇಕರಿಂದ ಶುಭಾಶಯ ಬರುತ್ತಿದೆ.

ಈ ಹಾಡಿಗೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. 90ರ ದಶಕದಿಂದ ಕೀರವಾಣಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಈ ಅವಾರ್ಡ್ ಗೆದ್ದ ನಂತರದಲ್ಲಿ ಕೀರವಾಣಿ ಖ್ಯಾತಿ ಹೆಚ್ಚಿದೆ. ಅವರ ಬತ್ತಳಿಕೆಯಲ್ಲಿ ಮೂಡಿ ಬಂದ ಹಾಡುಗಳ ವಿವರ ಇಲ್ಲಿದೆ. ಅವುಗಳನ್ನು ನೀವು ಕೇಳಿ.

ಇದನ್ನೂ ಓದಿ
SS Rajamouli: ಆಸ್ಕರ್ ಪ್ರಶಸ್ತಿ ಪಡೆಯಲು ರಾಜಮೌಳಿ ಏಕೆ ವೇದಿಕೆ ಏರಿಲ್ಲ? ಇಲ್ಲಿದೆ ಉತ್ತರ
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 

ಇದನ್ನೂ ಓದಿ: Oscar 2023: ಆಸ್ಕರ್ ಕಾರ್ಯಕ್ರಮದಲ್ಲಿ ‘ಆರ್​ಆರ್​ಆರ್​’ ಟೀಂ; ರೆಡ್ ಕಾರ್ಪೆಟ್ ಮೇಲೆ ನಡೆದ ಸೆಲೆಬ್ರಿಟಿಗಳು

ಆ ಭಿ ಜಾ ಆ ಭಿ ಜಾ

‘ಸುರ್: ದಿ ಮೆಲೋಡಿ ಆಫ್ ಲೈಫ್​’ ಚಿತ್ರದ ‘ಆ ಭಿ ಜಾ ಆ ಭಿ ಜಾ..’ ಹಾಡು ಸೂಪರ್ ಹಿಟ್ ಆಯಿತು. ಲಕ್ಕಿ ಅಲಿ, ಸುನಿಧಿ ಚೌಹಾಣ್ ಈ ಹಾಡನ್ನು ಹಾಡಿದರು. ಈ ಸಾಂಗ್​ಗೆ ಎಂ.ಎಂ. ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದರು.

‘ದಿಲ್ ಮೈ ಜಗಿ ಧಡ್ಕನ್​ ಐಸೆ..

ಸುನಿಧಿ ಚೌಹಾಣ್ ಹಾಡಿದ ‘ದಿಲ್ ಮೈ ಜಗಿ ಧಡ್ಕನ್ ಐಸೆ..’ ಹಾಡು ಕೇಳುಗರಿಂದ ಹೆಚ್ಚು ಮಾರ್ಕ್ಸ್ ಪಡೆಯಿತು. ಈ ಹಾಡು ಗೆದ್ದಿದೆ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಕೀರವಾಣಿ.

ಜಾನೆ ಕ್ಯಾ ಡೂಂಡ್ತಾ ಹೈ

ಈ ಹಾಡಿಗೆ ಲಕ್ಕಿ ಅಲಿ ಅವರು ಧ್ವನಿ ನೀಡಿದ್ದಾರೆ. ಹಾಡಿನ ತೂಕ ಹೆಚ್ಚಿಸಿದ್ದು ನೈಡಾ ಫಜ್ಲಿ. ಈ ಹಾಡಿನ ಮೆಲೋಡಿ ಹೆಚ್ಚಿಸಿದ್ದು ಕೀರವಾಣಿ ಸಂಗೀತ ಸಂಯೋಜನೆ.

ತು ದಿಲ್​ ಕಿ ಖುಷಿ

ಲಕ್ಕಿ ಅಲಿ ಹಾಗೂ ಸುನಿಧಿ ಚೌಹಾಣ್ ಅವರು ಹಾಡಿದ  ತು ದಿಲ್​ ಕಿ ಖುಷಿ ಹಾಡು ಸೂಪರ್ ಹಿಟ್ ಆಯಿತು. ಕೀರವಾಣಿ ಸಂಗೀತ ಸಂಯೋಜನೆ ಅನೇಕರಿಗೆ ಇಷ್ಟವಾಯಿತು.

ಧೀವರ

‘ಬಾಹುಬಲಿ’ ಚಿತ್ರದ ‘ಧೀವರ..’ ಹಾಡು ಸಾಕಷ್ಟು ಸದ್ದು ಮಾಡಿತ್ತು. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಕೀರವಾಣಿ. ಈ ಹಾಡನ್ನು ಕೇಳಿ ಅನೇಕರು ತಲೆದೂಗಿದ್ದರು.

ಸಾಹೋರೆ ಬಾಹುಬಲಿ

‘ಬಾಹುಬಲಿ 2’ ಚಿತ್ರದ ‘ಸಾಹೋರೆ ಬಾಹುಬಲಿ’ ಹಾಡು ಜನಪ್ರಿಯತೆ ಪಡೆಯಿತು. ಕೀರವಾಣಿ ಸಂಗೀತ ಸಂಯೋಜನೆಯಿಂದ ಈ ಹಾಡಿನ ತೂಕ ಹೆಚ್ಚಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ