ಮೌನಿ ರಾಯ್ ರೀತಿಯೇ ಸೂರಜ್ ಖಾತೆ ಅನ್​ಫಾಲೋ ಮಾಡಿದ ದಿಶಾ ಪಟಾಣಿ; ಹೆಚ್ಚಿತು ಅನುಮಾನ

ಮೌನಿ ರಾಯ್ ಮತ್ತು ದಿಶಾ ಪಟಾಣಿ ಅವರ ನಡೆ ತೀವ್ರ ಅನುಮಾನಕ್ಕೆ ಕಾರಣ ಆಗಿದೆ. ಮೌನಿ ಪತ್ನಿ ಸೂರಜ್ ನಂಬಿಯಾರ್ ಅವರನ್ನು ಇಬ್ಬರೂ ಅನ್​ಫಾಲೋ ಮಾಡಿದ್ದಾರೆ. ಮೌನಿ ರಾಯ್ ಮತ್ತು ಸೂರಜ್ ಸಂಸಾರದಲ್ಲಿ ಬಿರುಕು ಮೂಡಿದೆ. ಈ ಬಗ್ಗೆ ಅವರಿಬ್ಬರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಮೌನಿ ರಾಯ್ ರೀತಿಯೇ ಸೂರಜ್ ಖಾತೆ ಅನ್​ಫಾಲೋ ಮಾಡಿದ ದಿಶಾ ಪಟಾಣಿ; ಹೆಚ್ಚಿತು ಅನುಮಾನ
Disha Patani, Suraj Nambiar, Mouni Roy

Updated on: May 12, 2026 | 8:02 PM

ಬಾಲಿವುಡ್‌ನ ಖ್ಯಾತ ನಟಿ, ‘ನಾಗಿಣಿ’ ಖ್ಯಾತಿಯ ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಅವರ ಸುಂದರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಇಂತಹದೊಂದು ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸೂರಜ್ ನಂಬಿಯಾರ್ (Suraj Nambiar) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿರುವುದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮೊದಲು ಸೂರಜ್ ಅವರ ಇನ್​ಸ್ಟಾಗ್​ರಾಮ್ ಖಾತೆಯನ್ನು ಮೌನಿ ರಾಯ್ ಅನ್​ಫಾಲೋ ಮಾಡಿದರು. ಬಳಿಕ ಮೌನಿ ರಾಯ್ ಅವರ ಗೆಳತಿ ದಿಶಾ ಪಟಾನಿ (Disha Patani) ಕೂಡ ಅನ್​ಫಾಲೋ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೌನಿ ರಾಯ್ ಮತ್ತು ಸೂರಜ್ ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದ್ದವು. ಇದರ ಬೆನ್ನಲ್ಲೇ ಸೂರಜ್ ನಂಬಿಯಾರ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಖಾತೆ ಡಿಲೀಟ್ ಮಾಡುವ ಮುನ್ನ ಸೂರಜ್ ಅವರು ಮೌನಿ ರಾಯ್ ಜೊತೆಗಿನ ವಿವಾಹದ ಫೋಟೋಗಳನ್ನು ಡಿಲೀಟ್ ಮಾಡಿದರು. ಆದರೆ, ಮೌನಿ ರಾಯ್ ಮಾತ್ರ ಇನ್ನೂ ತಮ್ಮ ವಿವಾಹ ಮತ್ತು ಹನಿಮೂನ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಉಳಿಸಿಕೊಂಡಿದ್ದಾರೆ.

ಈ ಬೆಳವಣಿಗೆಯ ನಡುವೆ ಮೌನಿ ರಾಯ್ ಅವರ ಆಪ್ತ ಗೆಳತಿ ಹಾಗೂ ನಟಿ ದಿಶಾ ಪಟಾನಿ ಕೂಡ ಸೂರಜ್ ನಂಬಿಯಾರ್ ಅವರನ್ನು ಅನ್‌ಫಾಲೋ ಮಾಡಿರುವುದು ಕುತೂಹಲ ಕೆರಳಿಸಿದೆ. ಮೌನಿ ಮತ್ತು ದಿಶಾ ದೀರ್ಘಕಾಲದ ಗೆಳತಿಯರಾಗಿದ್ದು, ಅನೇಕ ಪ್ರವಾಸ ಹಾಗೂ ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಸದ್ಯ ಗೆಳತಿಯ ಬೆಂಬಲಕ್ಕೆ ನಿಂತಿರುವ ದಿಶಾ, ಸೂರಜ್‌ರಿಂದ ದೂರ ಸರಿದಿರುವುದು ದಾಂಪತ್ಯದ ಬಿರುಕಿನ ವದಂತಿಯನ್ನು ಖಚಿತಪಡಿಸುತ್ತಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

2018ರಲ್ಲಿ ದುಬೈನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮೌನಿ ಮತ್ತು ಸೂರಜ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಗೆಳೆಯರ ಮೂಲಕ ಪರಿಚಯವಾದ ಇವರು ನಂತರ ಪ್ರೀತಿಸತೊಡಗಿದರು. ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮತ್ತಷ್ಟು ಹತ್ತಿರವಾಗಿದ್ದರು. ನಂತರ 2022ರಲ್ಲಿ ಗೋವಾದಲ್ಲಿ ಬಂಗಾಳಿ ಮತ್ತು ಮಲಯಾಳಿ ಸಂಪ್ರದಾಯದಂತೆ ಅದ್ದೂರಿಯಾಗಿ ವಿವಾಹವಾಗಿದ್ದರು.

ಇದನ್ನೂ ಓದಿ: ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ

ಮದುವೆಯಾಗಿ ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಈ ಜೋಡಿ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ, ಈ ಬಗ್ಗೆ ಮೌನಿ ರಾಯ್ ಆಗಲಿ ಅಥವಾ ಸೂರಜ್ ಆಗಲಿ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us