ಅಲ್ಲು ಅರ್ಜುನ್-ರಶ್ಮಿಕಾ
ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ (Pushpa Movie) ಇಂದು (ಡಿಸೆಂಬರ್ 17) ರಿಲೀಸ್ಆಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸುಕುಮಾರ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ರಕ್ತ ಚಂದನ ಕಳ್ಳಸಾಗಣೆ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ರಶ್ಮಿಕಾ ಅವರು ಡಿಗ್ಲಾಮ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ‘ಪುಷ್ಪ’ ಮೊದಲ ದಿನ 700ಕ್ಕೂ ಅಧಿಕ ಶೋಗಳು ಪ್ರದರ್ಶನ ಕಾಣುತ್ತಿವೆ. ಕನ್ನಡದ ನಟ ಧನಂಜಯ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗಿರುವುದರಿಂದ ಅದ್ದೂರಿಯಾಗಿ ಬರುವ ನಿರೀಕ್ಷೆ ಇತ್ತು. ಹಾಗಾದರೆ, ಈ ಸಿನಿಮಾದ ಮೊದಲಾರ್ಧ (Pushpa Movie First Half Review) ಹೇಗಿದೆ? ಅಲ್ಲು ಅರ್ಜುನ್-ರಶ್ಮಿಕಾ ಕಾಂಬಿನೇಷನ್ ಹೇಗೆ ವರ್ಕ್ ಆಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
- ಮೊದಲಾರ್ಧ ಪೂರ್ತಿ ರೆಟ್ರೋ ಶೈಲಿಯಲ್ಲಿ ಮೂಡಿಬಂದಿದೆ. ಅದು ಪ್ರೇಕ್ಷಕರಿಗೆ ಬೇರೆ ರೀತಿಯ ಅನುಭವ ನೀಡುತ್ತದೆ.
- ಅಲ್ಲು ಅರ್ಜುನ್ ಅವರು ತಮ್ಮ ವೃತ್ತಿಜೀವನದಲ್ಲಿ ಈವರೆಗೂ ಮಾಡಿರದ ಒಂದು ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- ಅಭಿಮಾನಿಗಳು ರೋಮಾಂಚನಗೊಳ್ಳುವಂತಹ ಅನೇಕ ದೃಶ್ಯಗಳು ‘ಪುಷ್ಪ’ ಚಿತ್ರದ ಫಸ್ಟ್ ಹಾಫ್ನಲ್ಲಿ ಇವೆ. ಚೇಸಿಂಗ್ ದೃಶ್ಯಗಳು ಅಭಿಮಾನಿಗಳಿಗೆ ಥ್ರಿಲ್ ನೀಡಲಿವೆ.
- ರಶ್ಮಿಕಾ ಅವರ ‘ಶ್ರೀವಲ್ಲಿ’ ಹಾಡು ಮತ್ತು ಸಮಂತಾ ಕಾಣಿಸಿಕೊಂಡಿರುವ ‘ಹು ಅಂತಿಯಾ ಮಾವ.. ಊಹು ಅಂತಿಯಾ ಮಾವ’ ಹಾಡುಗಳು ಮೊದಲಾರ್ಧದಲ್ಲೇ ಇವೆ. ಇವುಗಳಿಂದ ಚಿತ್ರದ ತೂಕ ಹೆಚ್ಚಿದೆ.
- ಡಾಲಿ ಧನಂಜಯ್ ಅವರಿಗೆ ವಿಭಿನ್ನವಾದ ಪಾತ್ರ ಇದೆ. ಮೊದಲಾರ್ಧದಲ್ಲಿ ಅವರ ಪಾತ್ರ ತುಂಬ ಪ್ರಾಮುಖ್ಯತೆ ಪಡೆದುಕೊಂಡಿದೆ. ಅವರು ತೆರೆಮೇಲೆ ಬಂದಾಗೆಲ್ಲ ಅಭಿಮಾನಿಗಳಿಂದ ಶಿಳ್ಳೆ ಚಪ್ಪಾಳೆ ಗ್ಯಾರಂಟಿ.
- ಮೊದಲಾರ್ಧದಲ್ಲಿ ರಶ್ಮಿಕಾ ಮಂದಣ್ಣ ಅವರ ಎಂಟ್ರಿ ಸ್ವಲ್ಪ ತಡವಾಗಿದೆ. ಡಿಗ್ಲಾಮ್ ಲುಕ್ನಲ್ಲಿ ಅವರು ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
- ಆ್ಯಕ್ಷನ್ ದೃಶ್ಯಗಳನ್ನು ಬಯಸುವ ಪ್ರೇಕ್ಷಕರಿಗೆ ‘ಪುಷ್ಪ’ ಚಿತ್ರದ ಮೊದಲಾರ್ಧದಲ್ಲಿ ಸಖತ್ ಮನರಂಜನೆ ಸಿಗಲಿದೆ.
- ಮೊದಲಾರ್ಧದ ಅವಧಿ ಒಂದೂವರೆ ಗಂಟೆ ಇದೆ. ಈ ಅವಧಿ ಕೊಂಚ ದೀರ್ಘ ಎನಿಸುತ್ತದೆ. ಚಿತ್ರದ ಒಟ್ಟು ಅವಧಿ 2 ಗಂಟೆ 59 ನಿಮಿಷ!
- ಇಂಟರ್ವಲ್ನಲ್ಲಿ ಅಲ್ಲು ಅರ್ಜುನ್ ಅವರ ಪಾತ್ರದ ಪ್ರಾಬಲ್ಯ ಶುರುವಾಗುತ್ತದೆ. ಆ ಮೂಲಕ ಸೆಕೆಂಡ್ ಹಾಫ್ ಕಥೆ ಬಗ್ಗೆ ಕೌತುಕ ಹೆಚ್ಚುವಂತೆ ಮಾಡುತ್ತದೆ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಫೋಟೋ ನೋಡಿ ಫ್ಯಾನ್ಸ್ ಫಿದಾ; ಇಲ್ಲಿವೆ ಕ್ಯೂಟ್ ಚಿತ್ರಗಳು
ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರ ಬಹಿಷ್ಕರಿಸುವಂತೆ ಒತ್ತಾಯ; ಕಾರಣ ಏನು?