
ನಾಗ ಚೈತನ್ಯ ವಿಚ್ಛೇದನ ಬಗ್ಗೆ ಹಲವು ವದಂತಿಗಳು ಇವೆ. ಈ ವದಂತಿಗೆ ಇಬ್ಬರೂ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಇದು ಇಬ್ಬರೂ ಸೇರಿ ತೆಗೆದುಕೊಂಡ ನಿರ್ಧಾರ ಎಂದು ಹೇಳಿದರೂ ಅದನ್ನು ಯಾರೂ ಒಪ್ಪುತ್ತಿಲ್ಲ. ಈಗ ಸಮಂತಾ ಹಾಗೂ ನಾಗ ಚೈತನ್ಯ ಇಬ್ಬರೂ ಬೇರೆ ಜೀವನ ಕಟ್ಟಿಕೊಂಡಿದ್ದಾರೆ. ತಮ್ಮ ಸಂಬಂಧವನ್ನು ಮುರಿದುಕೊಳ್ಳುವುದಕ್ಕೂ ಮೊದಲು ಸಾವಿರ ಬಾರಿ ಯೋಚಿಸಿದ್ದಾಗಿ ನಾಗ ಚೈತನ್ಯ ಅವರು ಹೇಳಿದ್ದಾರೆ.
‘ರಾ ಟಾಕ್ಸ್ ವಿತ್ ವಿಕೆ ಪಾಡ್ಕಾಸ್ಟ್’ನಲ್ಲಿ ನಾಗ ಚೈತನ್ಯ ಅವರು ಮಾತನಾಡಿದ್ದಾರೆ. ‘ನಮ್ಮದೇ ಕಾರಣಗಳಿಂದ ನಾವು ದೂರ ಆಗಲು ನಿರ್ಧರಿಸಿದೆವು. ನಾವು ನಿರ್ಧಾರ ತೆಗೆದುಕೊಂಡ ಬಳಿಕವೂ ಒಬ್ಬರಿಗೊಬ್ಬರು ಗೌರವಿಸುತ್ತಿದ್ದೆವು. ನಾವು ನಮ್ಮದೇ ಜೀವನದಲ್ಲಿ ವಾಸಿಸುತ್ತಿದ್ದೇವೆ. ಇದಕ್ಕೂ ಹೆಚ್ಚಿನ ವಿವರಣೆ ಏನು ಬೇಕು ಎಂಬುದು ಅರ್ಥವಾಗುತ್ತಿಲ್ಲ. ಜನರು ಹಾಗೂ ಮಾಧ್ಯಮದವರು ಇದನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ. ನಾವು ಖಾಸಗಿತನಕ್ಕೆ ಗೌರವ ನೀಡಿ ಎಂದು ಕೋರಿದ್ದೆವು. ಆದರೆ, ಇದುವೇ ಹೆಡ್ಲೈನ್ ಆಯ್ತು. ಗಾಸಿಪ್ಗೆ ಎಡೆ ಮಾಟಿಕೊಟ್ಟಿತ್ತು, ಮನರಂಜನೆಯ ವಿಚಾರ ಆಯ್ತು’ ಎಂದು ಅವರು ಬೇಸರ ಹೊರಹಾಕಿದ್ದಾರೆ.
‘ನಾವಿಬ್ಬರೂ ನಮ್ಮದೇ ಜೀವನ ನಡೆಸುತ್ತಿದ್ದೇವೆ. ನನಗೆ ಮತ್ತೆ ಪ್ರೀತಿ ಸಿಕ್ಕಿತು. ನನಗೆ ಆ ಬಗ್ಗೆ ಖುಷಿ ಇದೆ. ನಾವಿಬ್ಬರೂ (ಶೋಭಿತಾ) ಪರಸ್ಪರ ಗೌರವಿಸುತ್ತೇವೆ’ ಎಂದು ನಾಗ ಚೈತನ್ಯ ಹೇಳಿದ್ದಾರೆ. ಸಮಂತಾ ಬಗ್ಗೆಯೂ ಸಾಕಷ್ಟು ಗೌರವ ಇದೆ ಎಂದು ಹೇಳಿದ್ದಾರೆ.
Akkineni Naga Chaitanya on divorcing Samantha Ruth Prabhu
“I will think 1000 times to break a Relationship.”#NagaChaithanya #Samantha#Thandel pic.twitter.com/eGWQpGioFn
— Binge Wire (@BingeWire) February 7, 2025
ನಾಗ ಚೈತನ್ಯ ತಂದೆ ನಾಗಾರ್ಜುನ ಕೂಡ ಡಿವೋರ್ಸ್ ಪಡೆದಿದ್ದರು. ಹೀಗಾಗಿ ಆ ನೋವು ಗೊತ್ತು ಎಂದಿದ್ದಾರೆ ನಾಗ ಚೈತನ್ಯ. ‘ಇದು ನನಗೆ ಸೆನ್ಸಿಟಿವ್ ವಿಚಾರ. ನಾನು ಕೂಡ ಒಡೆದು ಹೋದ ಕುಟುಂಬದಿಂದ ಬಂದವನು. ನಾನು ಕೂಡ ಒಡೆದ ಕುಟುಂಬದ ಮಗು. ನನಗೆ ಆ ನೋವು ಗೊತ್ತು. ಹೀಗಾಗಿ, ಸಾವಿರ ಬಾರಿ ನಾನು ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ. ಇದು ಮ್ಯೂಚುವಲ್ ನಿರ್ಧಾರ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಬಾಲಕೃಷ್ಣಗಾಗಿ ಸಿನಿಮಾ ಪ್ರೀ ರಿಲೀಸ್ ಅನ್ನೇ ಮುಂದೂಡಿದ ಅಲ್ಲು ಅರ್ಜುನ್, ನಾಗ ಚೈತನ್ಯ
ನಾಗ ಚೈತನ್ಯ ಹಾಗೂ ಸಮಂತಾ 2017ರಲ್ಲಿ ವಿವಾಹ ಆದರು. 2021ರಲ್ಲಿ ಇವರು ಬೇರೆ ಆದರು. ಈಗ ನಾಗ ಚೈತನ್ಯ ಶೋಭಿತಾನ ವಿವಾಹ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.