ಟಾಲಿವುಡ್ನ ಕ್ಯೂಟ್ ದಂಪತಿ ಆಗಿದ್ದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ಅವರು ಏಕಾಏಕಿ ಡಿವೋರ್ಸ್ ಪಡೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅಭಿಮಾನಿಗಳಿಗೆ ಅವರಿಬ್ಬರ ವಿಚ್ಛೇದನದ ಸುದ್ದಿ ಕೇಳಿ ಶಾಕ್ ಆಗಿತ್ತು. ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ಬೇರೆ ಬೇರೆ ಆಗಿದ್ದಕ್ಕೆ ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅವರಿಬ್ಬರು ವಿಚ್ಛೇದನ ಪಡೆದು ಹಲವು ತಿಂಗಳು ಕಳೆದರೂ ಆ ಬಗ್ಗೆ ಚರ್ಚೆ ನಿಂತಿಲ್ಲ. ಅವರು ಯಾವುದೇ ಸಂದರ್ಶನಕ್ಕೆ ಹೋದರೂ ಅಲ್ಲಿ ಈ ಡಿವೋರ್ಸ್ (Samantha Divorce) ಕುರಿತು ಪ್ರಶ್ನೆ ಎದುರಾಗುತ್ತದೆ. ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಪ್ರಮೋಷನ್ ಸಲುವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಅವರು ಸಮಂತಾ ಬಗ್ಗೆ ಮಾತನಾಡಿದ್ದಾರೆ.
‘ಒಂದು ವೇಳೆ ಸಮಂತಾ ಎದುರು ಸಿಕ್ಕರೆ ಏನು ಮಾಡ್ತೀರಿ’ ಎಂದು ಕೇಳಿದ ಪ್ರಶ್ನೆಗೆ ನಾಗ ಚೈತನ್ಯ ನೇರವಾಗಿ ಉತ್ತರಿಸಿದ್ದಾರೆ. ‘ಮೊದಲು ಹಾಯ್ ಹೇಳುತ್ತೇನೆ. ನಂತರ ತಬ್ಬಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ಪತ್ನಿಯ ನೆನಪಿಗಾಗಿ ಉಳಿದುಕೊಂಡಿರುವ ಟ್ಯಾಟೂ ಬಗ್ಗೆಯೂ ಅವರು ಬಾಯಿ ಬಿಟ್ಟಿದ್ದಾರೆ.
ನಾಗ ಚೈತನ್ಯ ಅವರ ಮೊಣಕೈ ಮೇಲೆ ಒಂದು ಟ್ಯಾಟೂ ಇದೆ. ಅದರ ಅರ್ಥ ಏನು ಎಂಬುದು ಗೊತ್ತಿಲ್ಲದಿದ್ದರೂ ಕೂಡ ಅದನ್ನು ಕಾಪಿ ಮಾಡಿ ಅನೇಕ ಅಭಿಮಾನಿಗಳು ಅದೇ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದು ತಮ್ಮ ಮದುವೆ ದಿನಾಂಕವನ್ನು ಸೂಚಿಸುತ್ತದೆ ಎಂದು ನಾಗ ಚೈತನ್ಯ ಹೇಳಿದ್ದಾರೆ. ಆ ಟ್ಯೂಟೂ ತೆಗೆಸುವ ಬಗ್ಗೆ ಸದ್ಯ ಏನೂ ಯೋಚಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಭಿಮಾನಿಗಳು ಇದನ್ನು ಕಾಪಿ ಮಾಡುವುದು ಕೂಡ ತಮಗೆ ಇಷ್ಟ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ನಾಗ ಚೈತನ್ಯ ಅವರು ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಿಂದಾಗಿ ಆಮಿರ್ ಖಾನ್ ಮತ್ತು ನಾಗ ಚೈತನ್ಯ ನಡುವೆ ಆಪ್ತತೆ ಹೆಚ್ಚಿದೆ. ಕೆಲವರು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 am, Wed, 10 August 22