
ನಾನಾ ಪಟೇಕರ್ ಭಾರತೀಯ ಚಿತ್ರರಂಗದ ಅದ್ಭುತ ನಟ. ಮರಾಠಿ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಿದ್ದ ನಾನಾ ಪಟೇಕರ್ಗೆ ನಟನೆಯಲ್ಲಿ ಸರಿಸಾಟಿ ಆಗಬಲ್ಲಂಥಹ ನಟರು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ವಿರಳ. ನಟನೆ ಎಂದರೆ ಮೆಲೊಡ್ರಾಮಾ ಎಂಬಂಥ ಸಮಯದಲ್ಲಿ ನೈಜ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದ ಕೆಲವೇ ವಿರಳ ನಟರ ಪೈಕಿ ನಾನಾ ಪಟೇಕರ್ ಸಹ ಒಬ್ಬರು. ರಂಗಭೂಮಿ ಇಂದ ಬಂದ ನಾನಾ ಅವರಿಗೆ ‘ಸಿನಿಮಾ ನಟನೆ’, ಸ್ಟಾರ್ ಹೀರೋಗಳ ಮೆಲೊಡ್ರಾಮಾದಂಥಹ ನಟನೆ ಬಗ್ಗೆ ತುಸು ತಾತ್ಸಾರ ಇತ್ತು. ಇದಕ್ಕೆ ಸಾಕ್ಷಿಯಾಗಿ ನಟರೊಬ್ಬರು ಹೇಳಿರುವಂತೆ, ಒಮ್ಮೆ ನಾನಾ ಪಟೇಕರ್ ಅವರು ಅಮಿತಾಬ್ ಬಚ್ಚನ್ ಜೊತೆಗೆ ನಟಿಸಲು ಅವರಿಗಿಂತಲೂ ಒಂದು ರೂಪಾಯಿ ಹೆಚ್ಚು ಸಂಭಾವನೆ ಪಡೆದಿದ್ದರಂತೆ.
‘ದೃಶ್ಯಂ 3’ ಚಿತ್ರದ ನಟ ಕಮಲೇಶ್ ಸಾವಂತ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹಿರಿಯ ನಟ ದಿವಂಗತ ನಾನಾ ಪಾಟೇಕರ್ ಕುರಿತಾದ ಸ್ವಾರಸ್ಯಕರ ಕಥೆಯೊಂದನ್ನು ಹಂಚಿಕೊಂಡಿದ್ದಾರೆ. ನಾನಾ ಪಾಟೇಕರ್ ಅವರು ಅಮಿತಾಭ್ ಬಚ್ಚನ್ ಅವರೊಂದಿಗೆ ನಟಿಸಲು ಅವರಕಿಂತ 1 ರೂ. ಹೆಚ್ಚು ಸಂಭಾವನೆ ಕೇಳಿ ಪಡೆದುಕೊಂಡಿದ್ದರಂತೆ. ಕಮಲೇಶ್ ಹೇಳಿರುವಂತೆ, ‘ನಾನು (ಕಮಲೇಶ್) ಅವರೊಂದಿಗೆ (ನಾನಾ) ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದರೂ, ದುರದೃಷ್ಟವಶಾತ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ನನಗೆ ಸಿಗಲಿಲ್ಲ. ಆದರೆ ನಾನು ಕೇಳಿದ ಒಂದು ಕಥೆಯ ಪ್ರಕಾರ, ಅಮಿತಾಬ್ ಬಚ್ಚನ್ ಜೊತೆ ನಟಿಸಲು ನಾನಾ ಪಾಟೇಕರ್ ಅವರಿಗಿಂತ 1 ರೂ. ಹೆಚ್ಚು ಸಂಭಾವನೆ ಕೇಳಿದ್ದರಂತೆ. ‘ಬಚ್ಚನ್ ಸಾಬ್ ಜೊತೆ ಕೆಲಸ ಮಾಡುವುದಾದರೆ ನಾನು 1 ರೂ. ಹೆಚ್ಚು ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದರಂತೆ. ಅಮಿತಾಬ್ ಬಚ್ಚನ್ ಅವರಿಗೆ 1 ಕೋಟಿ ರೂ. ನೀಡಿದರೆ, ನಾನಾ ಪಾಟೇಕರ್ 1 ಕೋಟಿ 1 ರೂ. ತೆಗೆದುಕೊಂಡಿದ್ದರು ಎಂದು ನಾನು ಕೇಳಿದ್ದೇನೆ. ಆದರೆ ಇದರ ಸತ್ಯಾಸತ್ಯತೆ ನನಗೆ ಖಚಿತವಿಲ್ಲ” ಎಂದು ಕಮಲೇಶ್ ಸಾವಂತ್ ತಿಳಿಸಿದ್ದಾರೆ.
ಇದನ್ನೂ ಓದಿ:ದಕ್ಷಿಣದ ಭಾರತದ ಮೂರು ಸಿನಿಮಾಗಳಲ್ಲಿ ನಟಿಸಿದ್ದ ನಾನಾ ಪಟೇಕರ್
ಅಮಿತಾಬ್ ಬಚ್ಚನ್ ಮತ್ತು ನಾನಾ ಪಾಟೇಕರ್ ಜೋಡಿಯು 1999ರಲ್ಲಿ ಬಿಡುಗಡೆಯಾದ ಮೆಹುಲ್ ಕುಮಾರ್ ನಿರ್ದೇಶನದ ‘ಕೋಹ್ರಾಮ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದು ಈ ಇಬ್ಬರು ದಿಗ್ಗಜರು ತೆರೆ ಹಂಚಿಕೊಂಡ ಏಕೈಕ ಚಿತ್ರವಾಗಿದೆ. ಆ ಸಿನಿಮಾದ ಬಳಿಕ ನಾನಾ ಪಟೇಕರ್ ಮತ್ತು ಅಮಿತಾಬ್ ಬಚ್ಚನ್ ಎಂದಿಗೂ ಒಟ್ಟಿಗೆ ನಟಿಸಲಿಲ್ಲ. ನಾನಾ ಪಟೇಕರ್ ಅವರಿಗೆ ಹಣದ ಬಗ್ಗೆ ಆಸಕ್ತಿ ಇರಲಿಲ್ಲ ಆದರೆ ಬಹಳ ಆತ್ಮಗೌರವ ಉಳ್ಳವರಾಗಿದ್ದರು ಎನ್ನಲಾಗುತ್ತದೆ.
ನಾನಾ ಪಟೇಕರ್ ಅವರ ಆಪ್ತ, ಬಾಲಿವುಡ್ನ ಹಿರಿಯ ನಟರೂ ಆಗಿರುವ ಪರೇಶ್ ರಾವೆಲ್ ಹಿಂದೊಮ್ಮೆ ಹೇಳಿದ್ದರಂತೆ. ನಾನಾ ಪಟೇಕರ್ ಅವರು ನಿರ್ಮಾಪಕರೊಬ್ಬರನ್ನು ತಮ್ಮ ಮನೆಗೆ ಕರೆಸಿ ಅವರಿಂದ ಪಾತ್ರೆಗಳನ್ನು ತೊಳೆಸಿದ್ದರಂತೆ. ನಿರ್ಮಾಪಕನೊಬ್ಬ, ನಾನಾ ಪಟೇಕರ್ ಅವರಿಗೆ ಕೊಡಬೇಕಿದ್ದ ಸಂಭಾವನೆ ಕೊಟ್ಟಿರಲಿಲ್ಲವಂತೆ. ಇದರಿಂದ ಸಿಟ್ಟಾಗಿದ್ದ ನಾನಾ ಪಟೇಕರ್ ನಿರ್ಮಾಪಕರನ್ನು ಕರೆಸಿ ತನ್ನ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುವಂತೆ ಮಾಡಿದ್ದರು ಎಂದು ಪರೇಶ್ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ