AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಅಂತ್ಯಕ್ರಿಯೆ ಹೀಗೆಯೇ ಆಗಬೇಕು’ ಮೊದಲೇ ಹೇಳಿದ್ದ ನಾನಾ ಪಟೇಕರ್

ಭಾರತ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ಬರಾಗಿರುವ ನಾನಾ ಪಟೇಕರ್ ನಿನ್ನೆ (ಅಕ್ಟೋಬರ್ 08) ನಿಧನ ಹೊಂದಿದ್ದಾರೆ. ನಾನಾ ಪಟೇಕರ್ ಅವರು ತಮ್ಮ ಅಂತ್ಯಕ್ರಿಯೆ ಹೇಗೆ ಆಗಬೇಕು ಎಂದು ಮೊದಲೇ ಹೇಳಿದ್ದರು. ನಾನಾ, ತಮ್ಮ ಅಂತ್ಯಕ್ರಿಯೆ ಹೇಗಿರಬೇಕೆಂದು ಹೇಳಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಜಿನುಗುವುದು ಖಾತ್ರಿ.

‘ನನ್ನ ಅಂತ್ಯಕ್ರಿಯೆ ಹೀಗೆಯೇ ಆಗಬೇಕು’ ಮೊದಲೇ ಹೇಳಿದ್ದ ನಾನಾ ಪಟೇಕರ್
Nana Patekar
ಮಂಜುನಾಥ ಸಿ.
|

Updated on:Oct 09, 2026 | 4:02 PM

Share

ಮುಖ್ಯಾಂಶಗಳು

  • ನಟ ನಾನಾ ಪಟೇಕರ್ ನಿನ್ನೆ ನಿಧನ ಹೊಂದಿದ್ದಾರೆ
  • ಅವರ ಹಳೆಯ ವಿಡಿಯೋ ಒಂದು ಇದೀಗ ವೈರಲ್ ಆಗಿದೆ
  • ತಮ್ಮ ಅಂತ್ಯಕ್ರಿಯೆ ಹೇಗಿರಬೇಕೆಂದು ಅವರು ಮೊದಲೇ ಹೇಳಿದ್ದರು

ಬಾಲಿವುಡ್​​ನ ಅದ್ಭುತ ನಟ ನಾನಾ ಪಟೇಕರ್ ನಿನ್ನೆ (ಅಕ್ಟೋಬರ್ 08) ನಿಧನ ಹೊಂದಿದ್ದಾರೆ. ನಿನ್ನೆ ತಡರಾತ್ರಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ. ಮಹಾರಾಷ್ಟ್ರದ ಕೆಲವು ಪ್ರಮುಖ ರಾಜಕಾರಣಿಗಳು, ನಾನಾ ಪಟೇಕರ್ ಕುಟುಂಬ ಸದಸ್ಯರು, ಚಿತ್ರರಂಗದ ಗಣ್ಯರು, ಇನ್ನೂ ವಿವಿಧ ಕ್ಷೇತ್ರಗಳ ಪ್ರಮುಖರು ನಾನಾ ಪಟೇಕರ್ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಅಂದಹಾಗೆ ನಾನಾ ಪಟೇಕರ್ ಅವರು ತಮ್ಮ ಅಂತ್ಯಕ್ರಿಯೆ ಹೇಗೆ ಆಗಬೇಕು ಎಂದು ಮೊದಲೇ ಹೇಳಿದ್ದರು. ನಾನಾ, ತಮ್ಮ ಅಂತ್ಯಕ್ರಿಯೆ ಹೇಗಿರಬೇಕೆಂದು ಹೇಳಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಜಿನುಗುವುದು ಖಾತ್ರಿ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾನಾ ಪಟೇಕರ್, ‘ನನ್ನ ಅಂತ್ಯಕ್ರಿಯೆಗೆ 12 ಮನ್ (447 ಕೆಜಿ) ಕಟ್ಟಿಗೆಗಳು ಬೇಕಾಗುತ್ತವೆ. ಅನ್ನು ನಾನು ಸಂಪಾದಿಸಿ ಇರಿಸಿಕೊಂಡಿದ್ದೇನೆ. ಅದೇ ನನ್ನ ಅಂತಿಮ ಆಸ್ತಿ. ಅದಾಗಲೇ ನಾನು ಅದರ (ಸುಡಲು ಕಟ್ಟಿಗೆಗಳು) ವ್ಯವಸ್ಥೆ ಮಾಡಿಕೊಂಡಿದ್ದೇನೆ. ಅವು ಚೆನ್ನಾಗಿವೆ ಒಣಗಿವೆ, ನನ್ನ ಅಂತ್ಯಕ್ರಿಯೆಗೆ ಅವುಗಳನ್ನೇ ಬಳಸಿ ಎಂದು ನಾನು ಈಗಾಗಲೇ ಹೇಳಿದ್ದೇನೆ’ ಎಂದಿದ್ದಾರೆ.

‘ನನ್ನ ಅಂತ್ಯಕ್ರಿಯೆಗೆ ಹಸಿ ಕಟ್ಟಿಗೆಗಳನ್ನು ಬಳಸಬೇಡಿ, ಹಸಿ ಕಟ್ಟಿಗೆಗಳಿಂದ ಹೆಚ್ಚು ಹೊಗೆ ಬರುತ್ತದೆ, ನನ್ನ ಅಂತ್ಯಕ್ರಿಯೆಗೆ ಬಂದ ಕೆಲವರ ಕಣ್ಣಿಗೆ ಅದು ಹೋಗುತ್ತದೆ, ಕಣ್ಣಿನಲ್ಲಿ ನೀರು ಬರುತ್ತದೆ. ನನಗಾಗಿ ಇವರು ಕಣ್ಣೀರು ಹಾಕುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಬಹುದು, ಸಾಯುವ ಸಮಯದಲ್ಲಿ ನನಗೆ ಅಂಥಹಾ ತಪ್ಪು ಭಾವನೆಗಳು ಬರುವುದು ಬೇಡ’ ಎಂದು ನಗುತ್ತಾ ಹೇಳಿದ್ದರು ನಾನಾ ಪಟೇಕರ್.

ಇಡೀ ಬಾಲಿವುಡ್ ಸೆಲೆಬ್ರಿಟಿಗಳು ಒಂದೆಡೆ ಆದರೆ ನಾನಾ ಪಟೇಕರ್ ಅದರ ವಿರುದ್ಧ ದಿಕ್ಕಿನಲ್ಲಿ ಇದ್ದವರಾಗಿದ್ದರು. ಇಂದಿನ ಬಹುತೇಕ ಸೆಲೆಬ್ರಿಟಿಗಳು ಹೆಸರು, ಆಸ್ತಿ, ಹಣ, ಗೌರವ ಎಂದೆಲ್ಲ ತಪಣ ಪಡುತ್ತಿದ್ದರೆ ನಾನಾ ಪಟೇಕರ್ ಅವರ ವ್ಯಕ್ತಿತ್ವ ಭಿನ್ನವಾಗಿತ್ತು. ಅವರಿಗೆ ಅದೆಲ್ಲವೂ ನಗಣ್ಯ ಎನಿಸುತ್ತಿತ್ತು. ತೋಟ, ಕೃಷಿ, ಶೂಟಿಂಗ್, ಸಮಾಜ ಸೇವೆ, ನಾಟಕ, ಸಾಹಿತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸರಳವಾಗಿ ಬದುಕಿದ್ದ, ಸರಳವಾಗಿ ಬದುಕುವುದೇ ಶ್ರೇಷ್ಠವೆಂದು ಹೇಳಿಕೊಟ್ಟಿದ್ದ ನಾನಾ ಪಟೇಕರ್ ಅವರು ತಮ್ಮ ಅಪಾರ ಅಭಿಮಾನಿ ವರ್ಗವನ್ನು, ಸ್ನೇಹಿತರನ್ನು ಅಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Fri, 9 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ