ಶಿವಣ್ಣನ ಜೊತೆ ಬಾಲಿವುಡ್ ಸ್ಟಾರ್ ನಟಿ, ಮತ್ತೆ ಕನ್ನಡಕ್ಕೆ ಬಂದ ‘ಮಸ್ತ್ ಮಸ್ತ್ ಹುಡುಗಿ’
‘ಉಪೇಂದ್ರ’ ಸಿನಿಮಾನಲ್ಲಿ ನಟಿಸಿ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದ ಮೂಲಕ ದೇಶದಾದ್ಯಂತ ಪ್ರೇಕ್ಷಕರ ಗಮನ ಸೆಳೆದಿದ್ದ ರವೀನಾ ಟಂಡನ್, ಇದೀಗ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ ‘ಎ ಫಾರ್ ಆನಂದ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಮತ್ತು ರವೀನಾ ಇದೇ ಮೊದಲ ಬಾರಿಗೆ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.

ಮುಖ್ಯಾಂಶಗಳು
- ಶಿವಣ್ಣನ ಜೊತೆಗೆ ಬಾಲಿವುಡ್ ನಟಿ ನಟಿಸಲಿದ್ದಾರೆ.
- ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಮತ್ತೆ ಕನ್ನಡಕ್ಕೆ
- ಶಿವಣ್ಣನ ಜೊತೆ ನಟಿಸಲಿದ್ದಾರೆ ರವೀನಾ ಟಂಡನ್
ಕನ್ನಡ ಪ್ರೇಕ್ಷಕರಿಗೆ ‘ಮಸ್ತ್ ಮಸ್ತ್ ಹುಡುಗಿ’ ಆಗಿ ಪರಿಚಯವಾದ ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ‘ಉಪೇಂದ್ರ’ ಸಿನಿಮಾನಲ್ಲಿ ನಟಿಸಿ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದ ಮೂಲಕ ದೇಶದಾದ್ಯಂತ ಪ್ರೇಕ್ಷಕರ ಗಮನ ಸೆಳೆದಿದ್ದ ಅವರು, ಇದೀಗ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ ‘ಎ ಫಾರ್ ಆನಂದ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಮತ್ತು ರವೀನಾ ಇದೇ ಮೊದಲ ಬಾರಿಗೆ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
ರವೀನಾ ಅವರಿಗೆ ಕನ್ನಡ ಚಿತ್ರರಂಗದೊಂದಿಗೆ ಹಳೆಯ ನಂಟಿದೆ. 1999ರಲ್ಲಿ ತೆರೆಕಂಡ ‘ಉಪೇಂದ್ರ’ ಚಿತ್ರದ ಮೂಲಕ ಅವರು ಚಂದನವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಬಹುದೀರ್ಘ ಅಂತರದ ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ನಲ್ಲಿ ಕಾಣಿಸಿಕೊಂಡು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮತ್ತೆ ಸದ್ದು ಮಾಡಿದ್ದರು. ಈಗ ಶಿವರಾಜ್ ಕುಮಾರ್ ಅವರಂತಹ ಹಿರಿಯ ನಟನ ಜೊತೆ ನಟಿಸುವ ಮೂಲಕ ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರವೀನಾ ಅವರು ಮೊದಲ ದಿನವೇ ಸೆಟ್‌ಗೆ ಆಗಮಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ ನಿಸಾರ್ ಅಹ್ಮದ್ ಅವರ ಸಮ್ಮುಖದಲ್ಲಿ ರವೀನಾ ಅವರನ್ನು ಸನ್ಮಾನಿಸಲಾಯಿತು. ಕ್ಯಾಂಪಸ್‌ನಲ್ಲಿ ರವೀನಾ ಅವರನ್ನೊಳಗೊಂಡ ಪ್ರಮುಖ ದೃಶ್ಯಗಳ ಚಿತ್ರೀಕರಣ ಈಗ ನಡೆಯುತ್ತಿದ್ದು, ಅವರ ಪಾತ್ರ ಚಿತ್ರದಲ್ಲಿ ಪರಿಣಾಮಕಾರಿಯಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ:ರವೀನಾ ಟಂಡನ್ ಪುತ್ರಿ ರಶಾ ತಡಾನಿ ಕ್ಯೂಟ್ ಡ್ಯಾನ್ಸ್
‘ಘೋಸ್ಟ್’ ಚಿತ್ರದ ಮೂಲಕ ಶಿವರಾಜ್ ಕುಮಾರ್ ಅವರೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ನಿರ್ದೇಶಕ ಎಂಜಿ ಶ್ರೀನಿವಾಸ್, ಈ ಬಾರಿ ‘ಎ ಫಾರ್ ಆನಂದ್’ ಮೂಲಕ ಮತ್ತೊಂದು ವಿಭಿನ್ನ ಕಥೆಯನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ‘ವೇದ’, ‘ಭೈರತಿ ರಣಗಲ್’ ಮತ್ತು ‘ಪಬ್ಬಾರ್’ ಚಿತ್ರಗಳ ನಂತರ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಒದಗಿಸುತ್ತಿದ್ದಾರೆ. ಶಿವಣ್ಣ ಮತ್ತು ರವೀನಾ ಅವರ ಹೊಸ ಜೋಡಿ ತೆರೆಯ ಮೇಲೆ ಹೇಗೆ ಮೂಡಿಬರಲಿದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Fri, 9 October 26




