
ಟಾಲಿವುಡ್ನ ಸ್ಟಾರ್ ಹೀರೋ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರಿಗೆ ಇಂದು (ಜೂನ್ 10) ಹುಟ್ಟುಹಬ್ಬದ (Nandamuri Balakrishna Birthday) ಸಂಭ್ರಮ. ಅವರ ಅಭಿಮಾನಿಗಳು ಈ ದಿನವನ್ನು ಸಡಗರದಿಂದ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಬಾಲಯ್ಯಗೆ ವಿಶ್ ಮಾಡುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ಇನ್ನಷ್ಟು ಕಾರಣಗಳು ಸಿಕ್ಕಿವೆ. ನಂದಮೂರಿ ಬಾಲಕೃಷ್ಣ ನಟನೆಯ 108ನೇ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈ ಸಿನಿಮಾಗೆ ‘ಭಗವಂತ ಕೇಸರಿ’ (Bhagavantha Kesari) ಎಂದು ಶೀರ್ಷಿಕೆ ಇಡಲಾಗಿದೆ. ಅದರ ಜೊತೆಗೆ ಫಸ್ಟ್ ಲುಕ್ ಕೂಡ ಹಂಚಿಕೊಳ್ಳಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಂದಮೂರಿ ಬಾಲಕೃಷ್ಣ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅಂತಹ ಅಭಿಮಾನಿಗಳಿಗಾಗಿ ಬಾಲಯ್ಯ ಮಾಸ್ ಸಿನಿಮಾಗಳನ್ನು ಮಾಡುತ್ತಾರೆ. ಹಾಗಾಗಿ ಅವರನ್ನು ‘ಗಾಡ್ ಆಫ್ ಮಾಸಸ್’ ಎಂದು ಕರೆಯಲಾಗುತ್ತಿದೆ. ಟ್ವಿಟರ್ನಲ್ಲಿ ಈ ಹ್ಯಾಶ್ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಇನ್ನು, ‘ಭಗವಂತ ಕೇಸರಿ’ ಸಿನಿಮಾದ ಟೀಸರ್ ಬಿಡುಗಡೆಗೆ ಕ್ಷಣಗಣನೆ ಆರಂಭ ಆಗಿದೆ. ಇಂದು ಬಾಲಯ್ಯ ಅವರ ಜನ್ಮದಿನ ಪ್ರಯುಕ್ತ ಬೆಳಗ್ಗೆ 10 ಗಂಟೆ 19 ನಿಮಿಷಕ್ಕೆ ಟೀಸರ್ ರಿಲೀಸ್ ಆಗಲಿದೆ. ಅದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಈ ವರ್ಷ ನಂದಮೂರಿ ಬಾಲಕೃಷ್ಣ ಅವರು ನಟಿಸಿದ ‘ವೀರ ಸಿಂಹ ರೆಡ್ಡಿ’ ಸಿನಿಮಾ ಜನವರಿ 12ರಂದು ತೆರೆಕಂಡಿತ್ತು. ಫ್ಯಾಮಿಲಿ ಕಥಾಹಂದರ ಹೊಂದಿದ್ದ ಆ ಮಾಸ್ ಸಿನಿಮಾಗೆ ಜನರ ಮೆಚ್ಚುಗೆ ಸಿಕ್ಕಿತು. ಆ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದರು. ಹಾಡುಗಳು ಸೂಪರ್ ಹಿಟ್ ಆದವು. ಈ ಯಶಸ್ಸಿನಿಂದ ಬಾಲಯ್ಯ ಅವರ ವೃತ್ತಿಜೀವನದ ಮೈಲೇಜ್ ಹೆಚ್ಚಿತು. ಈಗ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಜೋರಾಗಿದೆ.
ಇದನ್ನೂ ಓದಿ: Tamannaah: ಒಂದೇ ಹಾಡಿಗೆ 5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ರಾ ತಮನ್ನಾ? ಬಾಲಯ್ಯ ಚಿತ್ರದ ಗಾಸಿಪ್ಗೆ ನಟಿ ಪ್ರತಿಕ್ರಿಯೆ
‘ಭಗವಂತ ಕೇಸರಿ’ ಸಿನಿಮಾಗೆ ಅನಿಲ್ ರವಿಪುಡಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಥಮನ್ ಅವರು ಸಂಗೀತ ನೀಡುತ್ತಿದ್ದಾರೆ. ‘ಐ ಡೋಂಟ್ ಕೇರ್’ ಎಂಬ ಟ್ಯಾಗ್ ಲೈನ್ ಗಮನ ಸೆಳೆಯುತ್ತಿದೆ. ಟೀಸರ್ ಬಿಡುಗಡೆ ಆದ ಬಳಿಕ ‘ಭಗವಂತ ಕೇಸರಿ’ ಚಿತ್ರದ ಹೈಪ್ ಇನ್ನಷ್ಟು ಹೆಚ್ಚಾಗಲಿದೆ. ವಿಶೇಷ ಏನೆಂದರೆ ಈ ಟೀಸರ್ ಅನ್ನು 108 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ಅವರ ಲುಕ್ ಹೇಗಿದೆ ಎಂಬುದು ಕೂಡ ಟೀಸರ್ನಲ್ಲಿ ರಿವೀಲ್ ಆಗುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:19 am, Sat, 10 June 23