ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ಈ ಸ್ಟಾರ್ ನಟನದ್ದು

Sreeleela: ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಶ್ರೀಲೀಲಾ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ತೆಲುಗು ಚಿತ್ರರಂಗದ ದಿಗ್ಗಜರ ಪ್ರೀತಿಗೂ ಪಾತ್ರರರಾಗಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟರೊಬ್ಬರು, ಶ್ರೀಲೀಲಾ ಅವರ ಮದುವೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯಾರದು?

ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ಈ ಸ್ಟಾರ್ ನಟನದ್ದು
Sreeleela

Updated on: Dec 08, 2024 | 11:46 AM

ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಮಿಂಚುತ್ತಿದ್ದಾರೆ. ಒಂದರ ಹಿಂದೆ ಒಂದು ಭಾರಿ ಬಜೆಟ್ ಸಿನಿಮಾ ಆಫರ್​ಗಳು ಬರುತ್ತಿವೆ. ಈಗಾಗಲೇ ಅವರು ಮಹೇಶ್ ಬಾಬು, ಪವನ್ ಕಲ್ಯಾಣ್, ರವಿತೇಜ, ನಂದಮೂರಿ ಬಾಲಕೃಷ್ಣ, ರವಿತೇಜ, ನಿತಿನ್, ರಾಮ್ ಇನ್ನೂ ಕೆಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಈಗಲೂ ಸಹ ಅವರ ಕೈಯಲ್ಲಿ ಹಲವು ದೊಡ್ಡ ತೆಲುಗು ಸಿನಿಮಾಗಳಿವೆ. ಶ್ರೀಲೀಲಾ ಈಗಿನ್ನೂ ಎಂಬಿಬಿಎಸ್​ ಓದುತ್ತಿರುವ ವಿದ್ಯಾರ್ಥಿನಿ, ಮದುವೆಯಿನ್ನೂ ದೂರದ ಮಾತು, ಆದರೆ ಶ್ರೀಲೀಲಾ ಅವರ ಮದುವೆಯ ಜವಾಬ್ದಾರಿಯನ್ನು ತೆಲುಗಿನ ಸ್ಟಾರ್ ನಟ ಒಬ್ಬರು ವಹಿಸಿಕೊಂಡಿದ್ದಾರೆ.

ನಂದಮೂರಿ ಬಾಲಕೃಷ್ಣ, ತೆಲುಗು ಚಿತ್ರರಂಗ ಹಾಗೂ ಆಂಧ್ರದ ರಾಜಕೀಯದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ. ನಂದಮೂರಿ ಕುಟುಂಬದ ಹಿರಿಯ ಸದಸ್ಯರಾಗಿರುವ ಬಾಲಕೃಷ್ಣಗೆ ಕನ್ನಡತಿ ಶ್ರೀಲೀಲಾ ಮೇಲೆ ವಿಶೇಷ ಮಮತೆ. ನಂದಮೂರಿ ಬಾಲಕೃಷ್ಣ ನಟಿಸಿರುವ ‘ಭಗವಂತ ಕೇಸರಿ’ ಸಿನಿಮಾನಲ್ಲಿ ಅವರ ಪುತ್ರಿಯ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದರು. ಹಾಗಾಗಿ ಬಾಲಕೃಷ್ಣಗೆ ಶ್ರೀಲೀಲಾ ಮೇಲೆ ಪುತ್ರಿ ವಾತ್ಸಲ್ಯವಂತೆ.

ಬಾಲಕೃಷ್ಣ ನಡೆಸಿಕೊಡುವ ‘ಅನ್​ಸ್ಟಾಪೆಬಲ್ ವಿತ್ ಬಾಲಯ್ಯ’ ಶೋಗೆ ಅತಿಥಿಯಾಗಿ ಕಳೆದ ವಾರ ಶ್ರೀಲೀಲಾ ಮತ್ತು ನಟ ನವೀನ್ ಪೋಲಿಶೆಟ್ಟಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಲೀಲಾ ಬಗ್ಗೆ ಮಾತನಾಡಿದ ಬಾಲಕೃಷ್ಣ, ಶ್ರೀಲೀಲಾ ನನ್ನ ಮಗಳಿದ್ದಂತೆ, ಆಕೆಯನ್ನು ನೋಡಿದರೆ ನನ್ನ ಮಗಳು ನೆನಪಾಗುತ್ತಾಳೆ. ತಂದೆಯ ಸ್ಥಾನದಲ್ಲಿ ನಿಂತವನಾಗಿ ಶ್ರೀಲೀಲಾ ಮದುವೆ ಜವಾಬ್ದಾರಿ ನನ್ನದೇ ಎಂದಿದ್ದಾರೆ ಬಾಲಕೃಷ್ಣ.

ಇದನ್ನೂ ಓದಿ:

ಶೋನಲ್ಲಿ ಮಾತ್ರವಲ್ಲ ಇದೇ ವರ್ಷಾರಂಭದಲ್ಲಿ, ಬಾಲಕೃಷ್ಣ ಅವರು ತಮ್ಮ ತಾಯಿಯ ಹೆಸರಿನಲ್ಲಿರುವ ಬಸವತಾರಕಮ್ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಶ್ರೀಲೀಲಾ ಅವರನ್ನು ಕರೆದುಕೊಂಡು ಹೋಗಿದ್ದರು. ಹೊಸ ಬ್ರ್ಯಾಂಚ್​ನ ಉದ್ಘಾಟನೆ ಕಾರ್ಯಕ್ರಮ ಅದಾಗಿತ್ತು. ಆ ಕಾರ್ಯಕ್ರಮದಲ್ಲಿಯೂ ಸಹ ಶ್ರೀಲೀಲಾ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದ ಬಾಲಕೃಷ್ಣ, ಶ್ರೀಲೀಲಾ ತನ್ನ ಮಗಳ ಸಮಾನ ಎಂದಿದ್ದರು. ಶ್ರೀಲೀಲಾರ ನಟನೆ, ನೃತ್ಯ ಮತ್ತು ಬುದ್ಧಿವಂತಿಕೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು ಬಾಲಕೃಷ್ಣ.

ಶ್ರೀಲೀಲಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿತಿನ್ ಜೊತೆ ಶ್ರೀಲೀಲಾ ನಟಿಸಿರುವ ‘ರಾಬಿನ್ ಹುಡ್’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ವಿಜಯ್ ದೇವರಕೊಂಡ ನಟನೆಯ ಸಿನಿಮಾ ಒಂದರಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಒಂದು ಬಾಲಿವುಡ್ ಸಿನಿಮಾದಲ್ಲಿಯೂ ಸಹ ಶ್ರೀಲೀಲಾ ನಟನೆ ಮಾಡುತ್ತಿದ್ದಾರೆ. ಒಂದು ತಮಿಳು ಸಿನಿಮಾ ಅನ್ನು ಸಹ ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ