Hi Nanna: ‘ಹಾಯ್ ನಾನ್ನ’ ಎನ್ನುತ್ತಿದ್ದಾರೆ ನಾನಿ-ಮೃಣಾಲ್​ ಠಾಕೂರ್​; ತಂದೆ-ಮಗಳ ಬಾಂಧವ್ಯವೇ ಈ ಚಿತ್ರದ ಹೈಲೈಟ್​

|

Updated on: Jul 13, 2023 | 2:36 PM

Mrunal Thakur: ನಾನಿ ನಟನೆಯ 30ನೇ ಚಿತ್ರಕ್ಕೆ ‘ಹಾಯ್​ ನಾನ್ನ’ ಎಂದು ಶೀರ್ಷಿಕೆ ಇಡಲಾಗಿದೆ. ನಾನಿ ಮತ್ತು ಮೃಣಾಲ್​ ಠಾಕೂರ್​ ಕಾಂಬಿನೇಷನ್​ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

Hi Nanna: ‘ಹಾಯ್ ನಾನ್ನ’ ಎನ್ನುತ್ತಿದ್ದಾರೆ ನಾನಿ-ಮೃಣಾಲ್​ ಠಾಕೂರ್​; ತಂದೆ-ಮಗಳ ಬಾಂಧವ್ಯವೇ ಈ ಚಿತ್ರದ ಹೈಲೈಟ್​
‘ಹಾಯ್​ ನಾನ್ನ’ ಸಿನಿಮಾ ಪೋಸ್ಟರ್​​
Follow us on

ಮಾರ್ಚ್​ ತಿಂಗಳಲ್ಲಿ ತೆರೆಕಂಡ ‘ದಸರಾ’ ಸಿನಿಮಾ ಗಮನ ಸೆಳೆಯಿತು. ಆ ಚಿತ್ರದ ಮೂಲಕ ಗೆಲುವು ಪಡೆದ ತೆಲುಗಿನ ‘ನ್ಯಾಚುರಲ್ ಸ್ಟಾರ್’ ನಾನಿ (Nani) ಅವರು ಈಗ ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯಸಿ ಆಗಿದ್ದಾರೆ. ಅವರು ಅಭಿನಯಿಸುತ್ತಿರುವ 30ನೇ ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದೆ. ಆ ಬಗ್ಗೆ ಮಾಹಿತಿ ನೀಡಲಾಗಿದೆ. ಚಿಕ್ಕದೊಂದು ಝಲಕ್ ಮೂಲಕ ಚಿತ್ರತಂಡವು ಟೈಟಲ್​ ಅನಾವರಣ ಮಾಡಿದೆ. ಈ ಸಿನಿಮಾದಲ್ಲಿ ನಾನಿ ಜೊತೆ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್​ ಠಾಕೂರ್​ (Mrunal Thakur)​ ಅವರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಹಾಯ್​ ನಾನ್ನ’ (Hi Nanna) ಎಂದು ಶೀರ್ಷಿಕೆ ಇಡಲಾಗಿದೆ.

ಅಂದಹಾಗೆ, ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗಿನಲ್ಲಿ ‘ಹಾಯ್ ನಾನ್ನ’ ಎಂದರೆ ‘ಹಾಯ್ ಅಪ್ಪ’ ಎಂದರ್ಥ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಒಂದೇ ಶೀರ್ಷಿಕೆ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡವು ತಮಿಳು, ಮಲಯಾಳಂ, ಕನ್ನಡ ಭಾಷೆಯಲ್ಲಿ ‘ಹಾಯ್ ನಾನ್ನ’ ಎಂದೇ ಶೀರ್ಷಿಕೆ ಇಟ್ಟಿದೆ. ಟಾಲಿವುಡ್​ನ ‘ಮೆಗಾ ಸ್ಟಾರ್’ ಚಿರಂಜೀವಿ ಅವರ ಆಶೀರ್ವಾದ ಪಡೆದು ಆರಂಭ ಆಗಿರುವ ಈ ಸಿನಿಮಾಗೆ ಶೌರ್ಯುವ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಶೌರ್ಯುವ್ ಅವರಿಗೆ ನಿರ್ದೇಶಕನಾಗಿ ‘ಹಾಯ್​ ನಾನ್ನ’ ಮೊದಲ ಸಿನಿಮಾ ಆಗಲಿದೆ. ಹೊಸ ನಿರ್ದೇಶಕನ ಜೊತೆ ಸೇರಿ ನಾನಿ ಮತ್ತು ಮೃಣಾಲ್​ ಠಾಕೂರ್​ ಅವರು ಕೆಲಸ ಮಾಡುತ್ತಿದ್ದಾರೆ. ಶೀರ್ಷಿಕೆ ನೋಡಿದರೆ ಸಾಕು ಈ ಸಿನಿಮಾದ ಕಥೆ ಏನೆಂದು ಊಹಿಸಬಹುದು. ಇದೊಂದು ಎಮೋಷನಲ್ ಫ್ಯಾಮಿಲಿ ಎಂಟರ್​ಟೇನ್ಮೆಂಟ್​ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ತಂದೆ ಮತ್ತು ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ಕಥೆಯನ್ನು ‘ಹಾಯ್​ ನಾನ್ನ’ ಚಿತ್ರ ಒಳಗೊಂಡಿದೆ.

Mrunal Thakur: ಹೆಚ್ಚಾಯ್ತು ‘ಸೀತಾ ರಾಮಂ’ ನಟಿಯ ಸಂಬಳ; ಮೃಣಾಲ್​ ಠಾಕೂರ್​ಗೆ ಈಗ ಸಿಗುತ್ತಿರುವ ಹಣ ಎಷ್ಟು?

ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್​ಟೇನ್ಮೆಂಟ್​’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ISC ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ನಾನಿ ಮತ್ತು ಮೃಣಾಲ್​ ಠಾಕೂರ್​ ಕಾಂಬಿನೇಷನ್​ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.