AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrunal Thakur: ಹೆಚ್ಚಾಯ್ತು ‘ಸೀತಾ ರಾಮಂ’ ನಟಿಯ ಸಂಬಳ; ಮೃಣಾಲ್​ ಠಾಕೂರ್​ಗೆ ಈಗ ಸಿಗುತ್ತಿರುವ ಹಣ ಎಷ್ಟು?

Mrunal Thakur Remuneration: ಮೃಣಾಲ್​ ಠಾಕೂರ್​ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ. ಕೇಳಿದಷ್ಟು ಸಂಭಾವನೆ ನೀಡಲು ಸಿದ್ಧವಾಗಿದ್ದಾರೆ.

Mrunal Thakur: ಹೆಚ್ಚಾಯ್ತು ‘ಸೀತಾ ರಾಮಂ’ ನಟಿಯ ಸಂಬಳ; ಮೃಣಾಲ್​ ಠಾಕೂರ್​ಗೆ ಈಗ ಸಿಗುತ್ತಿರುವ ಹಣ ಎಷ್ಟು?
ಮೃಣಾಲ್​ ಠಾಕೂರ್​, ದುಲ್ಕರ್​ ಸಲ್ಮಾನ್​
ಮದನ್​ ಕುಮಾರ್​
|

Updated on: Jul 09, 2023 | 11:45 AM

Share

ನಟಿ ಮೃಣಾಲ್​ ಠಾಕೂರ್​ (Mrunal Thakur) ಅವರು ಬಾಲಿವುಡ್​ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಖತ್​ ಫೇಮಸ್​ ಆಗಿದ್ದಾರೆ. ‘ಸೂಪರ್​ 30’, ‘ಸೀತಾ ರಾಮಂ’ (Sita Ramam) ಮುಂತಾದ ಸಿನಿಮಾಗಳಿಂದ ಅವರು ದೇಶಾದ್ಯಂತ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ‘ಲಸ್ಟ್​ ಸ್ಟೋರೀಸ್​ 2’ ಚಿತ್ರ ಕೂಡ ಅವರಿಗೆ ಜನಪ್ರಿಯತೆ ತಂದುಕೊಟ್ಟಿದೆ. ಇದರ ಪರಿಣಾಮವಾಗಿ ಅವರೀಗ ಸಂಭಾವನೆ (Mrunal Thakur Remuneration) ಹೆಚ್ಚು ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಮೃಣಾಲ್​ ಠಾಕೂರ್​ ಅವರು ಪ್ರತಿ ಸಿನಿಮಾಗೆ ಮೂರೂವರೆ ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಡಿಮ್ಯಾಂಡ್​ ಹೆಚ್ಚಾಗುತ್ತಿದೆ.

2022ರಲ್ಲಿ ‘ಸೀತಾ ರಾಮಂ’ ಸಿನಿಮಾ ಬಿಡುಗಡೆ ಆಯಿತು. ತೆಲುಗು ಚಿತ್ರರಂಗದಲ್ಲಿ ಮೃಣಾಲ್​ ಠಾಕೂರ್​ ಅವರಿಗೆ ದೊಡ್ಡ ಬ್ರೇಕ್​ ನೀಡಿದ ಸಿನಿಮಾ ಅದು. ಆ ಚಿತ್ರದಲ್ಲಿ ಅವರು ದುಲ್ಖರ್​ ಸಲ್ಮಾನ್​ಗೆ ಜೋಡಿಯಾಗಿ ನಟಿಸಿದರು. ಅವರು ಮಾಡಿದ ಸೀತಾ ಮಹಾಲಕ್ಷ್ಮಿ ಅಲಿಯಾಸ್​ ಪ್ರಿನ್ಸೆಸ್​ ನೂರ್​ ಜಹಾನ್​ ಪಾತ್ರ ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು. ಈಗ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ. ಕೇಳಿದಷ್ಟು ಸಂಭಾವನೆ ನೀಡಲು ಸಿದ್ಧವಾಗಿದ್ದಾರೆ.

ಇದನ್ನೂ ಓದಿ: ‘ನ್ಯಾಷನಲ್​ ಕ್ರಶ್​’ ಬಿರುದು ಪಡೆದುಕೊಂಡ ಮೃಣಾಲ್​ ಠಾಕೂರ್​; ಈಗ ರಶ್ಮಿಕಾ ಮಂದಣ್ಣ ಪಾಡು ಏನು?

ಮೂಲಗಳ ಪ್ರಕಾರ, ‘ಸೀತಾ ರಾಮಂ’ ಚಿತ್ರದಲ್ಲಿನ ನಟನೆಗಾಗಿ ಮೃಣಾಲ್​ ಠಾಕೂರ್​ ಅವರಿಗೆ ಸಿಕ್ಕಿದ್ದು 85 ಲಕ್ಷ ರೂಪಾಯಿ ಸಂಭಾವನೆ. ಆದರೆ ಆ ಸಿನಿಮಾ ಸಕ್ಸಸ್​ ಬಳಿಕ ಅವರು ಸಂಭಾವನೆ ಹೆಚ್ಚಿಸಿಕೊಂಡರು. ಈಗ ನಾನಿ ಮತ್ತು ವಿಜಯ್​ ದೇವರಕೊಂಡ ಜೊತೆಗೆ ತಲಾ ಒಂದು ಸಿನಿಮಾ ಮಾಡುತ್ತಿದ್ದಾರೆ ಮೃಣಾಲ್​ ಠಾಕೂರ್​. ಅಚ್ಚರಿ ಏನೆಂದರೆ, ವಿಜಯ್​ ದೇವರಕೊಂಡ ಜೊತೆಗಿನ ಚಿತ್ರಕ್ಕಾಗಿ ಅವರು 3.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Mrunal Thakur: ಹೇಗಿತ್ತು ವಿಜಯ್ ದೇವರಕೊಂಡ-ಮೃಣಾಲ್ ಠಾಕೂರ್ ಹೊಸ ಚಿತ್ರದ ಮುಹೂರ್ತ? ಫೋಟೋ ಗ್ಯಾಲರಿ ನೋಡಿ..

ಮೃಣಾಲ್​ ಠಾಕೂರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಮರಾಠಿ ಸಿನಿಮಾಗಳ ಮೂಲಕ. ನಂತರ ಅವರು ಬಾಲಿವುಡ್​ಗೆ ಎಂಟ್ರಿ ಪಡೆದರು. ಈಗ ತೆಲುಗಿನಲ್ಲೂ ಮಿಂಚುತ್ತಿದ್ದಾರೆ. ಈ ನಡುವೆ ತಮಿಳು ಚಿತ್ರರಂಗದಿಂದಲೂ ಮೃಣಾಲ್​ ಠಾಕೂರ್​ ಅವರಿಗೆ ಅವಕಾಶಗಳು ಹರಿದುಬರುತ್ತಿವೆ. ಆದರೆ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಅವರು ಅವಸರ ತೋರುತ್ತಿಲ್ಲ. ತಮಗೆ ಸರಿಹೊಂದುವಂತಹ ಚಿತ್ರಗಳಿಗೆ ಮಾತ್ರ ಅವರು ಸಹಿ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!