Kichcha Sudeep: ಎಷ್ಟೇ ಮೀಟಿಂಗ್​ ಆದ್ರೂ ಸುದೀಪ್​-ಎಂ.ಎನ್​. ಕುಮಾರ್​ ನಡುವೆ ಕಿರಿಕ್​ ಯಾಕೆ ಬಗೆಹರಿಯಲಿಲ್ಲ? ವಿವರ ನೀಡಿದ ಜಾಕ್​ ಮಂಜು

Jack Manju Press Meet: ಕಿಚ್ಚ ಸುದೀಪ್​ ಅವರ ಪರವಾಗಿ ಜಾಕ್​ ಮಂಜು ಇಂದು (ಜುಲೈ 9) ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ನಿರ್ಮಾಪಕ ಎಂ.ಎನ್​. ಕುಮಾರ್​ಗೆ ಸಂಬಂಧಿಸಿದ ವಿವಾದದ ಬಗ್ಗೆ ವಿವರಣೆ ನೀಡಿದ್ದಾರೆ.

Kichcha Sudeep: ಎಷ್ಟೇ ಮೀಟಿಂಗ್​ ಆದ್ರೂ ಸುದೀಪ್​-ಎಂ.ಎನ್​. ಕುಮಾರ್​ ನಡುವೆ ಕಿರಿಕ್​ ಯಾಕೆ ಬಗೆಹರಿಯಲಿಲ್ಲ? ವಿವರ ನೀಡಿದ ಜಾಕ್​ ಮಂಜು
ಸುದೀಪ್​, ಜಾಕ್​ ಮಂಜು, ಎಂ.ಎನ್​. ಕುಮಾರ್​
Follow us
| Updated By: ಮದನ್​ ಕುಮಾರ್​

Updated on:Jul 09, 2023 | 3:55 PM

ನಟ ಕಿಚ್ಚ ಸುದೀಪ್​ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್​. ಕುಮಾರ್​ ನಡುವಿನ ವಿವಾದ ಕೋರ್ಟ್​ ಮೆಟ್ಟಿಲು ಏರಿದೆ. ಸಾಮಾನ್ಯವಾಗಿ ಚಿತ್ರರಂಗದವರ ನಡುವೆ ಕಿರಿಕ್​ ಆದಾಗ ವಾಣಿಜ್ಯ ಮಂಡಳಿಯಲ್ಲಿ ಕುಳಿತು ಸಂಧಾನ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. ಸುದೀಪ್​ ಹಾಗೂ ನಿರ್ಮಾಪಕ ಎಂ.ಎನ್​. ಕುಮಾರ್​ (MN Kumar) ಕೂಡ ಇದೇ ರೀತಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತದೆ. ಆದರೆ ಅದು ಸಾಧ್ಯವಿಲ್ಲ ಎಂದು ಸುದೀಪ್​ ಅವರ ಆಪ್ತರಾದ ಜಾಕ್​ ಮಂಜು (Jack Manju) ಹೇಳಿದ್ದಾರೆ. ಯಾಕೆಂದರೆ, ಈಗಾಗಲೇ ನೂರಾರು ಬಾರಿ ಮೀಟಿಂಗ್​ ನಡೆದರೂ ಕೂಡ ಎಂ.ಎನ್​. ಕುಮಾರ್​ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಅಲ್ಲದೇ ಕುಮಾರ್​ ಅವರು ಬಹಿರಂಗವಾಗಿ ಆರೋಪ ಮಾಡಿರುವುದರಿಂದ ಅದನ್ನು ಕಾನೂನಿನ ಮೂಲಕವೇ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಸುದೀಪ್​ ನಿರ್ಧರಿಸಿದ್ದಾರೆ.

‘ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವರಿಗೆ ಬೇಕಾದ ನಾಲ್ಕು ಜನರು ಇರುವಂತೆ ನಮಗೂ ಬೇಕಾದವರು ಇದ್ದಾರೆ. ಸುದೀಪ್​ ಅವರನ್ನು ಒಬ್ಬ ನಿರ್ಮಾಪಕ ಅಂತ ಅಲ್ಲಿ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ದುಡ್ಡು ಕೊಟ್ಟು ಸಂಧಾನ ಮಾಡಿದರೆ ಎಲ್ಲವೂ ಪರಿಹಾರ ಆಗುತ್ತದೆ ಎಂಬ ಭಾವನೆ ಅವರಲ್ಲಿದೆ. ಆದರೆ ಅದು ಸಾಧ್ಯವಿಲ್ಲ. ಕುಮಾರ್​ ಅವರು ಸಮಾಜದಲ್ಲಿ ಹತ್ತಾರು ಜನರ ಬಳಿ ಹೋಗಿ ಸುದೀಪ್​ ಬಗ್ಗೆ ಹಲವಾರು ಆರೋಪ ಮಾಡಿದ ಬಳಿಕ ಸಂಧಾನ ಮಾಡಿಕೊಂಡರೆ, ತಪ್ಪು ಮಾಡಿದ್ದಕ್ಕಾಗಿಯೇ ದುಡ್ಡು ಕೊಟ್ಟು ರಾಜಿ ಆದರು ಎಂಬ ಭಾವನೆ ಬರುತ್ತದೆ. ಆ ರೀತಿಯ ಕಳಂಕ ಯಾವ ಕಾರಣಕ್ಕೂ ಬರಬಾರದು’ ಎಂದು ಜಾಕ್​ ಮಂಜು ಹೇಳಿದ್ದಾರೆ.

ಇದನ್ನೂ ಓದಿ: MN Kumar: ‘ಸುದೀಪ್​ ಮಾಡಿದ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯಾ?’; ದಾಖಲೆ ಕೇಳಿದ್ದಕ್ಕೆ ಎಂ.ಎನ್​. ಕುಮಾರ್​ ಮರುಪ್ರಶ್ನೆ

‘ಒಂದು ವೇಳೆ ನಮ್ಮಿಂದ ಅವರಿಗೆ ಹಣ ಕೊಡಬೇಕಿರುವುದು ನಿಜವೇ ಹೌದಾದರೆ ಕಾನೂನಿನ ಮೂಲಕ ಹೋಗೋಣ. ಅಲ್ಲಿ ತೀರ್ಮಾನವಾಗಿ 20 ಕೋಟಿ ರೂಪಾಯಿ ಕೊಡಬೇಕು ಎಂದರೂ ನಾವು ಕೊಡುತ್ತೇವೆ. ಅದರ ಬದಲು ಇಲ್ಲಿ ಕುಳಿತುಕೊಂಡು ಅನವಶ್ಯಕವಾಗಿ ಮಾತನಾಡುವುದು ಬೇಡ ಅಂತ ಕಾನೂನಿನ ಮೊರೆ ಹೋಗಿದ್ದೇವೆ. ವಾಣಿಜ್ಯ ಮಂಡಳಿಗೆ ಬೆಲೆ ಕೊಡಬಾರದು ಅಥವಾ ಕುಮಾರ್​ ಅವರಿಗೆ ನೋವು ನೀಡಬೇಕು ಎಂಬ ಉದ್ದೇಶ ನಮಗಿಲ್ಲ’ ಎಂದಿದ್ದಾರೆ ಜಾಕ್​ ಮಂಜು.

ಇದನ್ನೂ ಓದಿ: Kichcha Sudeep: ಎಂ.ಎನ್​. ಕುಮಾರ್​ಗೆ ಸುದೀಪ್​ ಲೀಗಲ್​ ನೋಟೀಸ್​; ಇಲ್ಲಿದೆ ನಿರ್ಮಾಪಕರ ರಿಯಾಕ್ಷನ್​

‘ವಾಣಿಜ್ಯ ಮಂಡಳಿಗೆ ಈಗಾಗಲೇ ಸುದೀಪ್​ ಅವರು ಪತ್ರದ ಮೂಲಕ ವಿವರಣೆ ನೀಡಿದ್ದಾರೆ. ಮಾತುಕಥೆ ಮೂಲಕವೂ ವಿವರಣೆ ನೀಡಿದ್ದಾಗಿದೆ. ಮತ್ತೆ ಮತ್ತೆ ಮಾತುಕಥೆ ಮಾಡುವುದರಲ್ಲಿ ಅರ್ಥ ಇಲ್ಲ ಎಂಬ ಕಾರಣಕ್ಕೆ ನಾವು ಅಲ್ಲಿಗೆ ಹೋಗಿಲ್ಲ. ಫಿಲ್ಮ್​ ಚೇಂಬರ್​ಯಿಂದ ಈ ಮೊದಲು ಪ್ರಮುಖರು ಬಂದಾಗ ಗಂಟೆಗಟ್ಟಲೆ ಮಾತನಾಡಿದ್ದೇವೆ. ಮನೆಯ ಬಾಗಿಲಿನ ಒಳಗೆ ಇದ್ದಾಗ ಮಾತ್ರ ವಿಶ್ವಾಸ. ಅದು ಹೊರಗೆ ಹೋದಾಗ ಮತ್ತೆ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದು ಜಾಕ್​ ಮಂಜು ಹೇಳಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:52 pm, Sun, 9 July 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ