MN Kumar: ‘ಸುದೀಪ್​ ಮಾಡಿದ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯಾ?’; ದಾಖಲೆ ಕೇಳಿದ್ದಕ್ಕೆ ಎಂ.ಎನ್​. ಕುಮಾರ್​ ಮರುಪ್ರಶ್ನೆ

Kichcha Sudeep: ಅಡ್ವಾನ್ಸ್ ಹಣ ಪಡೆಯುವ ಹೀರೋಗಳು ನಂತರ ಅದೇ ನಿರ್ಮಾಪಕರ ಜೊತೆ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಎಂ.ಎನ್​. ಕುಮಾರ್​ ವಿವರಿಸಿದ್ದಾರೆ.

MN Kumar: ‘ಸುದೀಪ್​ ಮಾಡಿದ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯಾ?’; ದಾಖಲೆ ಕೇಳಿದ್ದಕ್ಕೆ ಎಂ.ಎನ್​. ಕುಮಾರ್​ ಮರುಪ್ರಶ್ನೆ
ಎಂ.ಎನ್​. ಕುಮಾರ್​, ಕಿಚ್ಚ ಸುದೀಪ್​
Follow us
ಮದನ್​ ಕುಮಾರ್​
|

Updated on: Jul 08, 2023 | 6:25 PM

ನಿರ್ಮಾಪಕ ಎಂ.ಎನ್​. ಕುಮಾರ್​ (Producer MN Kumar) ಮತ್ತು ನಟ ಕಿಚ್ಚ ಸುದೀಪ್​ ನಡುವಿನ ಜಟಾಪಟ ಮತ್ತೊಂದು ಹಂತಕ್ಕೆ ಏರಿದೆ. ಕಾನೂನಿನ ಮೂಲಕ ವಿವಾದ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ. ಎಂ.ಎನ್​. ಕುಮಾರ್​ಗೆ ಸುದೀಪ್​ (Kichcha Sudeep) ಅವರು ಲೀಗಲ್​ ನೋಟೀಸ್​ ಕಳಿಸಿದ್ದಾರೆ. ಅಡ್ವಾನ್ಸ್​ ಹಣ ಪಡೆದು ಕಾಲ್​ಶೀಟ್​ ನೀಡಿಲ್ಲ ಎಂಬ ಆರೋಪಕ್ಕೆ ದಾಖಲೆ ಇದೆಯೇ ಎಂದು ಸುದೀಪ್​ ಪ್ರಶ್ನಿಸಿದ್ದಾರೆ. ಆ ಮಾತಿಗೆ ಎಂ.ಎನ್​. ಕುಮಾರ್​ ಅವರು ಮರು ಪ್ರಶ್ನೆ ಹಾಕಿದ್ದಾರೆ. ಸುದೀಪ್​ ಮಾಡಿರುವ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯೇ ಎಂದು ಎಂ.ಎನ್​. ಕುಮಾರ್​ ಪ್ರಶ್ನಿಸಿದ್ದಾರೆ.

‘ಸುದೀಪ್​ ಅವರು 45 ಸಿನಿಮಾ ಮಾಡಿದ್ದಾರೆ. ಆ 45 ಸಿನಿಮಾಗಳ ಅಗ್ರಿಮೆಂಟ್​ ತಂದು ಮಾಧ್ಯಮಗಳ ಮುಂದೆ ಕೊಡಲು ಹೇಳಿ. ಯಾವುದಕ್ಕಾದರೂ ಅಗ್ರಿಮೆಂಟ್​ ಮಾಡಿದ್ದಾರಾ. ಸಿನಿಮಾ ಕ್ಷೇತ್ರ ನಡೆಯುವುದೇ ನಂಬಿಕೆ ಮೇಲೆ. ಪ್ರಪಂಚದಲ್ಲಿ ಬೇರೆ ಯಾವ ವ್ಯವಹಾರ ಈ ರೀತಿ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ’ ಎಂದು ಎಂ.ಎನ್​. ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ಜುಲೈ 6 ಎಂದರೆ ಸುದೀಪ್​ ಪಾಲಿಗೆ ಭಾರಿ ವಿಶೇಷ; ‘ಹುಚ್ಚ’ ಚಿತ್ರ ತೆರೆಕಂಡು ಕಳೆಯಿತು 22 ವರ್ಷ

ಮೊದಲು ಅಡ್ವಾನ್ಸ್ ಹಣ ಪಡೆಯುವ ಹೀರೋಗಳು ನಂತರ ಅದೇ ನಿರ್ಮಾಪಕರ ಜೊತೆ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ ಎಂಬ ಆರೋಪ ಇದೆ. ಅದಕ್ಕೆ ಕಾರಣ ಏನು ಎಂಬುದನ್ನು ಎಂ.ಎನ್​. ಕುಮಾರ್​ ವಿವರಿಸಿದ್ದಾರೆ. ‘ಇಂದು ಒಬ್ಬ ಹೀರೋ ಸಂಭಾವನೆ 1 ಕೋಟಿ ರೂಪಾಯಿ ಇರುತ್ತದೆ. ಅವರಿಗೆ ನಾವು 50 ಲಕ್ಷ ರೂಪಾಯಿ ಅಡ್ವಾನ್ಸ್​ ಕೊಡುತ್ತೇವೆ. ಅವರು ನಮ್ಮ ಜೊತೆ ಸಿನಿಮಾ ಮಾಡುವಷ್ಟರಲ್ಲಿ ಅವರ ಸಂಭಾವನೆ 5 ಕೋಟಿ ರೂಪಾಯಿ ಆಗಿರುತ್ತದೆ. ಆಗ ಅವರಿಗೆ ಒಂದು ಕೋಟಿ ರೂಪಾಯಿಗೆ ಸಿನಿಮಾ ಮಾಡಲು ಮನಸ್ಸು ಇರುವುದಿಲ್ಲ. 5 ಕೋಟಿ ರೂಪಾಯಿ ಕೇಳೋಕೆ ಆಗಲ್ಲ. ಅದಕ್ಕೆ ಹೀಗೆಲ್ಲ ಮಾಡ್ತಾರೆ’ ಎಂದು ಎಂ.ಎನ್​. ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ಕ್ಯಾನ್ಸರ್​ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆಸೆ ಈಡೇರಿಸಿದ ಕಿಚ್ಚ ಸುದೀಪ್​

ಲೀಗಲ್​ ನೋಟೀಸ್​ಗೆ ಎಂ.ಎನ್​. ಕುಮಾರ್​ ರಿಯಾಕ್ಷನ್​:

‘ವಾಟ್ಸಪ್​ ಮೂಲಕ ಬಂದಿದ್ದೆಲ್ಲ ನಿಜವಲ್ಲ. ಅಧಿಕೃತವಾಗಿ ನೋಟೀಸ್​ ಬರಲಿ. ಅದಕ್ಕೆ ಸೂಕ್ತವಾಗಿ ಉತ್ತರ ನೀಡೋಣ. ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೂ ವಕೀಲರು ಇರುತ್ತಾರೆ. ನಿರ್ಮಾಪಕರಲ್ಲೂ ಲಾಯರ್​ಗಳಿದ್ದಾರೆ. ಅವರೆಲ್ಲ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ರೆಡಿ ಇರುತ್ತೇನೆ’ ಎಂದು ಎಂ.ಎನ್​. ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ