ಮಲೇಷಿಯಾದಲ್ಲಿ ಯಶ್ ಹವಾ: ಈ ವಿದೇಶಿ ಭೇಟಿಯ ಉದ್ದೇಶ ಚಿನ್ನ
Yash: ನಟ ಯಶ್ ಹಠಾತ್ತನೆ ಮಲೇಷಿಯಾಕ್ಕೆ ತೆರಳಿದ್ದಾರೆ. ಮಲೇಷಿಯಾದಲ್ಲಿ ಯಶ್ಗೆ ಅದ್ಧೂರಿ ಸ್ವಾಗತ ದೊರೆತಿದೆ. ಅಂದಹಾಗೆ ಈ ಭೇಟಿಯ ಉದ್ದೇಶ ಚಿನ್ನ!
ನಟ ಯಶ್ (Yash) ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಇನ್ನೂ ನೀಡಿಲ್ಲ, ಯಾವುದೇ ಚಿತ್ರೀಕರಣದಲ್ಲಿಯೂ (Shooting) ತೊಡಗಿಕೊಂಡಂತಿಲ್ಲ ಆದರೆ ಜಾಹೀರಾತು ಚಿತ್ರೀಕರಣ, ವಿದೇಶ ಪ್ರವಾಸಗಳನ್ನು ಮಾತ್ರ ಜೋರಾಗಿಯೇ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಗಡ್ಡ ಬೆಳೆಸುವ ಎಣ್ಣೆಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಯಶ್ ಇದೀಗ ಹಠಾತ್ತನೆ ಖಾಸಗಿ ವಿಮಾನದಲ್ಲಿ ಮಲೇಷಿಯಾಕ್ಕೆ (Malaysia) ತೆರಳಿದ್ದಾರೆ. ಥೇಟ್ ರಾಕಿ ಭಾಯ್ ಸ್ವಾಗ್ನಲ್ಲಿ ಮಲೇಷಿಯಾದಲ್ಲಿ ಇಳಿದಿದ್ದಾರೆ ಯಶ್.
ಕೆಲವು ಗೆಳೆಯರು ಹಾಗೂ ಅಂಗರಕ್ಷಕರೊಟ್ಟಿಗೆ ಮಲೇಷಿಯಾಕ್ಕೆ ರಾಕಿ ಭಾಯ್ ಭೇಟಿ ನೀಡಿದ್ದಾರೆ. ಮಲೇಷಿಯಾಕ್ಕೆ ತೆರಳಿರುವುದು ಸಿನಿಮಾ ಅಥವಾ ಜಾಹೀರಾತು ಚಿತ್ರೀಕರಣಕ್ಕಲ್ಲ ಬದಲಿಗೆ ಮಲೇಷಿಯಾದಲ್ಲಿ ಚಿನ್ನದ ಶೋರೂಂ ಒಂದರ ಉದ್ಘಾಟನೆಗೆ. ಶೋರೂಂ ಉದ್ಘಾಟನೆಗೆ ಆಗಮಿಸಿದ ಯಶ್ರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ ಅಲ್ಲಿನ ಯುವ ಉದ್ಯಮಿಯೊಬ್ಬರು.
ಯಶ್ಗಾಗಿ ಹಲವು ಬಾಡಿಗಾರ್ಡ್ಗಳನ್ನು ನೇಮಿಸಿ, ಹಲವು ಐಶಾರಾಮಿ ಕಪ್ಪು ಕಾರುಗಳನ್ನು ಬೆಂಗಾವಲು ಕಾರುಗಳನ್ನಾಗಿ ಇರಿಸಿ ಯಶ್ ಅನ್ನು ಕಪ್ಪು ಬಣ್ಣದ ಐಶಾರಾಮಿ ರಾಲ್ಸ್ ರಾಯ್ಸ್ ಲಿಮೋನಲ್ಲಿ ಹೋಟೆಲ್ಗೆ ಕರೆತರಲಾಗಿದೆ. ಯಶ್ರ ಮಲೇಷಿಯಾ ಎಂಟ್ರಿ ಹಾಗೂ ಅಲ್ಲಿ ಅವರಿಗೆ ಸಿಕ್ಕಿರುವ ಸ್ವಾಗತದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:KGF Releasing in Japan: ಜಪಾನ್ನಲ್ಲಿ ‘ಕೆಜಿಎಫ್’, ‘ಕೆಜಿಎಫ್ 2’ ರಿಲೀಸ್; ಜಪಾನಿ ಭಾಷೆಯಲ್ಲಿ ಮಾತನಾಡಿದ ಯಶ್
ಮಲೇಷಿಯಾಕ್ಕೆ ಭೇಟಿ ನೀಡಿದ ಯಶ್ರನ್ನು ನೋಡಲು ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿದ್ದು ವಿಡಿಯೋದಿಂದ ಗೊತ್ತಾಗುತ್ತಿದೆ. ಮಲೇಷಿಯಾದಲ್ಲಿನ ಭಾರತೀಯರು, ಕನ್ನಡಿಗರೊಟ್ಟಿಗೆ ಫೊಟೊಗಳನ್ನು ತೆಗೆಸಿಕೊಂಡಿರುವ ಯಶ್, ಆಟೋಗ್ರಾಫ್ಗಳನ್ನು ನೀಡಿದ್ದಾರೆ. ಮಾತ್ರವಲ್ಲದೆ ಶೋ ರೂಂ ಉದ್ಘಾಟನೆ ವೇಳೆ ಸಹ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಯಶ್ಗೆ ಜಯಘೋಷಗಳನ್ನು ಹಾಕಿದ್ದಾರೆ.
ಯಶ್, ಪ್ರೈವೆಟ್ ಜೆಟ್ನಲ್ಲಿ ಮಲೇಷಿಯಾಕ್ಕೆ ಹೋಗುತ್ತಿರುವ ಅಲ್ಲಿ ಅದ್ಧೂರಿ ಸ್ವಾಗತ ಪಡೆಯುತ್ತಿರುವ ಚಿತ್ರಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಲೇಷಿಯಾನಲ್ಲಿ ಎಂಎಸ್ ಗೋಲ್ಡ್ ಹೆಸರಿನ ಚಿನ್ನದ ಶೋರೂಂ ಅನ್ನು ಯಶ್ ಉದ್ಘಾಟನೆ ಮಾಡಿದ್ದಾರೆ. ಮಲೇಷಿಯಾನಲ್ಲಿ ಭಾರತೀಯ ಸಿನಿಮಾಗಳಿಗೆ ಅದರಲ್ಲಿಯೂ ದಕ್ಷಿಣ ಭಾರತದ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಭಾರತದ ಹಲವು ಸಿನಿಮಾಗಳು ಮಲೇಷಿಯಾನಲ್ಲಿ ಸೂಪರ್ ಹಿಟ್ ಆಗಿವೆ. ಅಂತೆಯೇ ಯಶ್ರ ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳು ಮಲೇಷಿಯಾನಲ್ಲಿ ಸೂಪರ್ ಹಿಟ್ ಆಗಿತ್ತು. ಅಲ್ಲಿಯೂ ಯಶ್ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ