Gandhada Gudi: ಪುನೀತ್ ರಾಜ್​ಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ಟ್ರೇಲರ್ ನೋಡಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಪುನೀತ್​ ಪತ್ನಿ ಅಶ್ವಿನಿ ಟ್ವೀಟ್​​ಗೆ ಪ್ರಧಾನಿ ಮೋದಿ ರಿಪ್ಲೇ ಮಾಡಿದ್ದು ಗಂಧದ ಗುಡಿ ಟ್ರೇಲರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Gandhada Gudi: ಪುನೀತ್ ರಾಜ್​ಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ಟ್ರೇಲರ್ ನೋಡಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್
ಅಶ್ವಿನಿ ಪುನೀತ್ ರಾಜ್​ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಪುನೀತ್ ರಾಜ್​ಕುಮಾರ್
Edited By:

Updated on: Oct 09, 2022 | 1:54 PM

ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್(Puneeth Rajkumar) ಅಗಲಿಕೆಗೆ ಒಂದು ವರ್ಷ ತುಂಬೋ ಗಳಿಗೆಯಲ್ಲಿ ಗಂಧದ ಗುಡಿ(Gandhada Gudi) ಅದ್ಧೂರಿಯಾಗಿ ಬಿಡಿಗಡೆಯಾಗಿದೆ. ಅಪ್ಪು ಅಭಿನಯದ ಕೊನೆಯ ಸಿನಿಮಾ ಗಂಧದ ಗುಡಿ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದು ಗಂಧದ ಗುಡಿ ಟ್ರೇಲರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಂಧದಗುಡಿ ಸಾಕ್ಷ್ಯಚಿತ್ರಕ್ಕೆ ಪ್ರಧಾನಿ ಮೋದಿ ಪ್ರಶಂಸೆ

ಅಪ್ಪು ಲಕ್ಷಾಂತರ ಜನರ ಮನಸ್ಸಿನಲ್ಲಿ ಬದುಕಿದ್ದಾರೆ. ಪುನೀತ್ ರಾಜ್​ಕುಮಾರ್​ ಒಬ್ಬ ತೇಜಸ್ಸಿನ ವ್ಯಕ್ತಿಯಾಗಿದ್ದರು. ಪುನೀತ್​ ರಾಜ್​ಕುಮಾರ್​ ಒಬ್ಬ ಅಪ್ರತಿಮ ಪ್ರತಿಭಾವಂತರು. ಗಂಧದಗುಡಿ ಸಾಕ್ಷ್ಯಚಿತ್ರ ಪ್ರಕೃತಿ ಮಾತೆಗೆ, ಪರಿಸರ ಸಂರಕ್ಷಣೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯ ಎಂದು ಪ್ರಧಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪುನೀತ್​ ಪತ್ನಿ ಅಶ್ವಿನಿ ಟ್ವೀಟ್​​ಗೆ ಪ್ರಧಾನಿ ಮೋದಿ ರಿಪ್ಲೇ ಮಾಡಿದ್ದು ಪ್ರಶಂಸಿಸಿದ್ದಾರೆ.

ಗಂಧದಗುಡಿ ಸಾಕ್ಷ್ಯಚಿತ್ರದ ಕುರಿತು ಸಿಎಂ ಬೊಮ್ಮಾಯಿ ಟ್ವೀಟ್

ಗಂಧದಗುಡಿಯಿಂದ ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರ‌. ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧದಗುಡಿಯ ಆಸ್ತಿ. ಗಂಧದಗುಡಿ ನಮ್ಮನ್ನ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ‌. ನಮ್ಮನ್ನ ಹೊಸ ಲೋಕಕ್ಕೆ ಕರೆದೊಯ್ಯುವ ಭರವಸೆ ಕಾಣುತ್ತಿದೆ. ಅಶ್ವಿನಿ ಹಾಗೂ ಪಿಆರ್​ಕೆ ಪ್ರೊಡಕ್ಷನ್​​ಗೆ ನನ್ನ ಅಭಿನಂದನೆಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಅಪ್ಪು ಹಳೇ ವಿಡಿಯೋ ವೈರಲ್

ವಿಷ್ಣುವರ್ಧನ್ ಅವರ ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಹಾಡು ಹಾಡಿರುವ ಅಪ್ಪು ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಸಾಹಸಸಿಂಹ ನಟನೆಯ ಹೊಂಬಿಸಿಲು ಸಿನಿಮಾದ ಹಾಡನ್ನು ಸ್ನೇಹಿತರ ಜೊತೆ ಸೇರಿ ಪುನೀತ್ ಹಾಡಿದ್ದ ವಿಡಿಯೋ ವೈರಲ್ ಆಗಿದೆ.

ದಟ್ಟ ಅರಣ್ಯದೊಳಗಿನ ರಣರೋಚಕಗಳನ್ನ ವಿವರಿಸುವ, ನಟ ದಿ.ಪುನೀತ್​ ರಾಜ್​ಕುಮಾರ್​​ ಡ್ರೀಮ್​ ಪ್ರಾಜೆಕ್ಟ್ ಗಂಧದಗುಡಿ ಸಾಕ್ಷ್ಯಚಿತ್ರದ ಟ್ರೇಲರ್​ ಬೆಂಗಳೂರಿನ ನರ್ತಕಿ ರಿಲೀಸ್​ ಮಾಡಲಾಗಿದೆ. ಅಕ್ಟೋಬರ್ 28 ರಂದು ಗಂಧದಗುಡಿ ತೆರೆಗೆ ಅಪ್ಪಳಿಸಲಿದೆ. ಅಕ್ಟೋಬರ್ 29 ಕ್ಕೆ ಅಪ್ಪು ಅಗಲಿ ಒಂದು ವರ್ಷ ತುಂಬಲಿದ್ದು, ಅವರ ಸ್ಮರಣೆಗಾಗಿ ಗಂಧಧಗುಡಿ ಬೆಳ್ಳಿತೆರೆಗೆ ಬರಲಿದೆ. ಕಾರ್ಯಕ್ರಮದಲ್ಲಿ ಪುನೀತ್​ ಪತ್ನಿ ಅಶ್ವಿನಿ, ರಾಘಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಗಂಧದಗುಡಿ ಟ್ರೈಲರ್ ನೋಡಿ ಪುನೀತ್​ ಪತ್ನಿ ಅಶ್ವಿನಿ ಭಾವುಕರಾದರು. ಟ್ರೈಲರ್​​ನಲ್ಲಿ ಅಪ್ಪುವನ್ನು​ ನೋಡಿ ರಾಘಣ್ಣ ದಂಪತಿ ಕೂಡ ಕಣ್ಣೀರು ಹಾಕಿದರು. ಹಾಗೂ ಮತ್ತೊಂದು ಕಡೆ ಟ್ರೈಲರ್ ನೋಡಿ ಪುನೀತ್​ ರಾಜ್​ಕುಮಾರ್ ಫ್ಯಾನ್ಸ್​ ಸಂಭ್ರಮಿಸಿದರು.

Published On - 11:59 am, Sun, 9 October 22