AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ 11ಕ್ಕೆ ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ‘ಯೆಲ್ಲೋ ಗ್ಯಾಂಗ್ಸ್’ ಅನಾವರಣ

ಕ್ರೈಂ ಥ್ರಿಲ್ಲರ್ ‘ಯೆಲ್ಲೋ ಗ್ಯಾಂಗ್ಸ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನವೆಂಬರ್ 11ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಕಾಣಲಿದೆ.

ನವೆಂಬರ್ 11ಕ್ಕೆ ರವೀಂದ್ರ ಪರಮೇಶ್ವರಪ್ಪ ನಿರ್ದೇಶನದ ‘ಯೆಲ್ಲೋ ಗ್ಯಾಂಗ್ಸ್’ ಅನಾವರಣ
‘ಯೆಲ್ಲೋ ಗ್ಯಾಂಗ್ಸ್’ ಪೋಸ್ಟರ್​
TV9 Web
| Edited By: |

Updated on: Oct 09, 2022 | 3:41 PM

Share

ಕೆಲವು ಸಿನಿಮಾಗಳು ಆರಂಭದಲ್ಲೇ ವ್ಯಾಪಕವಾಗಿ ಸುದ್ದಿ ಮಾಡುತ್ತವೆ. ಇನ್ನು ಕೆಲವು ಸದ್ದೇ ಇಲ್ಲದೇ ಕಂಪ್ಲೀಟ್ ಆದ ನಂತರವಷ್ಟೇ ಸಿನಿಪ್ರಿಯರ ಗಮನ ತಮ್ಮತ್ತ ಹೊರಳುವಂತೆ ಮಾಡುತ್ತವೆ. ಅಂಥ ಸಿನಿಮಾಗಳ ಪಟ್ಟಿಗೆ ‘ಯೆಲ್ಲೋ ಗ್ಯಾಂಗ್ಸ್’ (Yellow Gangs) ಚಿತ್ರವೂ ಸೇರುತ್ತದೆ. ಹೌದು, ಸದ್ದೇ ಇಲ್ಲದೇ ಶೂಟಿಂಗ್ ಮುಗಿಸಿ, ಟೀಸರ್ ಹಾಗೂ ಮಿನಿಮಲ್ ಪೋಸ್ಟರ್​ಗಳ ಮೂಲಕ ಕುತೂಹಲ ಹುಟ್ಟಿಸಿರುವ ಕ್ರೈಂ ಥ್ರಿಲ್ಲರ್ ಚಿತ್ರ ‘ಯೆಲ್ಲೋ ಗ್ಯಾಂಗ್ಸ್’ ಬಿಡುಗಡೆಯ ದಿನಾಂಕ (Yellow Gangs Release Date) ನಿಗದಿ ಆಗಿದೆ. ಇದೀಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ರಗಡ್ ಕಥಾನಕದ ಈ ಸಿನಿಮಾ ಇದೇ ನವೆಂಬರ್ 11ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಕಾಣಲಿದೆ.

ಈ ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ನಿರ್ದೇಶನವಿರಲಿದ್ದು, ಈ  ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ಅವರ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿ ಪಳಗಿರುವ ಇವರು, ‘ಯೆಲ್ಲೋ ಗ್ಯಾಂಗ್ಸ್’ ಚಿತ್ರವನ್ನು ಭಿನ್ನವಾಗಿ ರೂಪಿಸಿದ್ದಾರೆಂಬ ಸುಳಿವು ಈಗಾಗಲೇ ಸಿಕ್ಕಿದೆ. ಆ ಕಾರಣದಿಂದಲೇ ‘ಯೆಲ್ಲೋ ಗ್ಯಾಂಗ್ಸ್’ ವ್ಯಾಪಕ ನಿರೀಕ್ಷೆ ಮೂಡಿಸಿದೆ.

ಕ್ರೈಂ ಥ್ರಿಲ್ಲರ್ ಕಥಾಹಂದರದ ‘ಯೆಲ್ಲೋ ಗ್ಯಾಂಗ್ಸ್​’ ಒಂದು ಡ್ರಗ್ ಡೀಲ್ ಸುತ್ತ ತೆರೆದುಕೊಂಡು, ಆ ನಂತರ ಕಾಳಧನ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ ಕಥೆಯನ್ನು ಹೊಂದಿದೆ ಎಂದು ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಕಥೆಯ ಜಾಡನ್ನು ಬಹು ಹಿಂದೆಯೇ ಬಿಚ್ಚಿಟ್ಟಿದ್ದರು. ಕ್ಷಣ ಕ್ಷಣಕ್ಕೂ ತಿರುವುಗಳ ಜೊತೆ ಪ್ರೇಕ್ಷಕರನ್ನ ತುದಿಸೀಟಿಗೆ ತಂದು ಕೂರಿಸಿ ಸಾಗುವ ಕಥೆ, ಸಂಭಾಷಣೆ ಮತ್ತು ನಮ್ಮಲ್ಲೇ ಯಾರೋ ಒಬ್ಬರು ಹಾದು ಹೋದಂತಾಗುವ ಸನ್ನಿವೇಷಗಳು ‘ಯೆಲ್ಲೋ ಗ್ಯಾಂಗ್ಸ್’ ಚಿತ್ರದಲ್ಲಿವೆಯಂತೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಾಲರಾಜ್​ ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ, ವಿಠಲ್ ಪರೀಟ, ಸತ್ಯ ಉಮ್ಮತ್ತಾಲ್, ಮಲ್ಲಿಕಾರ್ಜುನ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ
Image
Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ
Image
Gandhada Gudi: ಪುನೀತ್ ರಾಜ್​ಕುಮಾರ್ ಕೊನೆಯ ಚಿತ್ರ ಗಂಧದ ಗುಡಿ ಟ್ರೇಲರ್ ನೋಡಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್
Image
Gandhada Gudi Trailer Release: ಅದ್ಧೂರಿಯಾಗಿ ರಿಲೀಸ್ ಆದ ಗಂಧದಗುಡಿ ಟ್ರೈಲರ್ ​​
Image
Gandhada Gudi Trailer: ವಾವ್ಹ್​…ಬಹುನಿರೀಕ್ಷಿತ ‘ಗಂಧದಗುಡಿ’ ಟ್ರೈಲರ್ ರಿಲೀಸ್..!

‘ಯೆಲ್ಲೋ ಗ್ಯಾಂಗ್ಸ್’ ಚಿತ್ರದಲ್ಲಿ ವಿಶೇಷ ವಾಹನಗಳನ್ನು ಬಳಸಿಕೊಂಡು ರೋಚಕವಾದ ಚೇಸಿಂಗ್ ಸನ್ನಿವೇಶಗಳನ್ನ ಸೆರೆಹಿಡಿಯಲಾಗಿದ್ದು, ನೈಜತೆಯ ಭಾವ ತರಲು ‘ಹ್ಯಾಂಡ್ ಹೆಲ್ಡ್​’ ತಂತ್ರದಲ್ಲಿ ಇಡೀ ಸಿನಿಮಾವನ್ನು ಸೆರೆ ಹಿಡಿಯಲಾಗಿರುವುದು ಈ ಸಿನಿಮಾದ ವಿಶೇಷತೆಗಳಲ್ಲೊಂದು.

ಇನ್ನುಳಿದಂತೆ ‘ಯೆಲ್ಲೋ ಗ್ಯಾಂಗ್ಸ್’ ಸಿನಿಮಾದಲ್ಲಿ ಸುಜ್ಞಾನ್ ಕ್ಯಾಮೆರಾ ಕೈಚಳಕ, ಸುರೇಶ್ ಆರ್ಮುಗಂ ಸಂಕಲನದ ಕರಾಮತ್ತು, ರೋಹಿತ್ ಸೋವರ್ ಸಂಗೀತ ನಿರ್ದೇಶನ ಇರಲಿದೆ. ಈ ಚಿತ್ರವನ್ನು ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಕೂಡಿ ನಿರ್ಮಿಸಿದ್ದು, ಮನೋಜ್ ಪಿ, ಜಿ.ಎಂ.ಆರ್. ಕುಮಾರ್ (ಕೆವಿಜಿ), ಪ್ರವೀಣ್ ಡಿ.ಎಸ್. ಮತ್ತು ಜೆ.ಎನ್.ವಿ. ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರಕ್ಕೆ ಹಣ ಹೂಡಿ ನಿರ್ಮಿಸಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದು, ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್ ಕುಮಾರ್ ಜಿ. ಸಂಭಾಷಣೆ ಬರೆದಿದ್ದಾರೆ. ಇಷ್ಟೆಲ್ಲಾ ಕುತೂಹಲಕಾರಿ ಅಂಶಗಳನ್ನ ಹೊತ್ತ ‘ಯೆಲ್ಲೋ ಗ್ಯಾಂಗ್ಸ್’ ಇದೇ ನವೆಂಬರ್ 11ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.